ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 24 ಬುಧವಾರ ಕನ್ನಡ ಭವನದ ಕೆ.ಎನ್.ರಾಜಣ್ಣರವರ ಸಭಾಂಗಣದಲ್ಲಿ ಸಡಗರ -ಸಂಭ್ರಮದಿಂದ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ ನಾಗೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 24 ಬುಧವಾರ ಕನ್ನಡ ಭವನದ ಕೆ.ಎನ್.ರಾಜಣ್ಣರವರ ಸಭಾಂಗಣದಲ್ಲಿ ಸಡಗರ -ಸಂಭ್ರಮದಿಂದ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ ನಾಗೇಶ್ ತಿಳಿಸಿದರು.

ಭಾನುವಾರ ಕನ್ನಡಭವನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ 2 ಸಾವಿಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಶಿಕ್ಷಕರಿಗೆ ಓಓಡಿ ಸೌಲಭ್ಯ ನೀಡಿದ್ದು, ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. 24ರ ಬೆಳಿಗ್ಗೆ 7 ಗಂಟೆಗೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣ ನೆರವೇರಿಸುವರು. ತಹಸೀಲ್ದಾರ್ ರವಿ ನಾಡ ಧ್ವಜ ಹಾರಿಸುವರು. ಕಸಾಪ ಅಧ್ಯಕ್ಷೆ ಸಹನಾ ನಾಗೇಶ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.

ಬೆಳಿಗ್ಗೆ 8ಕ್ಕೆ ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಮೆರವಣಿಗೆಗೆ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಕೆ.ಪಿ.ನಟರಾಜ ಅವರನ್ನು ವಿವಿಧ ಕಲಾ ತಂಡ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು.

ಬೆಳಿಗ್ಗೆ 10 ಗಂಟೆಗೆ ನಾಡೋಜ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸವರು.,ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೆನಪಿನ ಸಂಚಿಕೆ ಬಿಡುಗೆಡೆ ಮಾಡಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಭಾಗವಹಿಸುವರು. ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಆಶಯ ನುಡಿಗಳನ್ನಾಡುವರು. 6ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೇಶವರೆಡ್ಡಿ ಹಂದ್ರಾಳು ಧ್ವಜ ಹಸ್ತಾಂತರ ಮಾಡುವರು. ಅತಿಥಿಗಳಾಗಿ ಎಂಎಲ್‌ಸಿ ಆರ್‌.ರಾಜೇಂದ್ರ ರಾಜಣ್ಣ, ಚಲನ ಚಿತ್ರ ನಿರ್ಮಾಪಕ ರವಿ ಆರ್.ಗರಣಿ, ಪಾವಗಡ ಶಾಸಕ ಎಚ್‌.ವಿ.ವೆಂಕಟೇಶ್‌, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಖಿತ್ ರಾಜ್‌ ಮೌರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಡಳಿತಾಧಿಕಾರಿ ಗಾಯಿತ್ರಿ, ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಾಳ ಗುರುಮೂರ್ತಿ, ವಿಧಾನ ಸೌಧದ ಕಾರ್ಯದರ್ಶಿ ಶಶಿಧರ್, ಶಾಸಕರಾದ ಎಸ್‌.ಆರ್‌.ಶ್ರೀನಿವಾಸ್,ಚಿದಾನಂದ ಎಂ.ಗೌಡ, ಡಿ.ಟಿ.ಶ್ರೀನಿವಾಸ್,ಜಿ ಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ,ಡಿವೈಎಸ್‌ಪಿ ಮಂಜುನಾಥ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 1-30ಕ್ಕೆ ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ವಿಚಾರಗೋಷ್ಠಿ, 3 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಉಪವಿಭಾಗಾಧಿಕಾರಿ ನಾಹಿದಾ ಜಂ ಜಂ, ವಿಧಾನ ಪರಿಷತ್ ಸದಸ್ಯ ಆರ್‌.ರಾಜೇಂದ್ರ ರಾಜಣ್ಣ, ವಕೀಲ ರವಿವರ್ಮ ಕುಮಾರ್‌ , ತಾ.ಕಸಾಪ ಅಧ್ಯಕ್ಷೆ ಸಹನಾ ನಾಗೇಶ್ ಭಾಗವಹಿಸಲಿದ್ದಾರೆ.

ವಿವಿಧ ಸಮಿತಿಗಳ ಜವಾಬಬ್ದಾರಿ ವಹಿಸಿದ್ದು ಎಲ್ಲರ ಸಹಕಾರದಿಂದ 7ನೇ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷೆ ಸಹನಾ ನಾಗೇಶ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ತಾ.ಕಸಾಪ ಗೌರವ ಕಾರ್ಯದರ್ಶಿಗಳಾದ ಎಂ.ಎಸ್.ಶಂಕರನಾರಾಯಣ್ ರಂಗಧಾಮಯ್ಯ, ಕೋಶಾಧ್ಯಕ್ಷ ಡಿ.ಎಸ್‌.ಮುನೀಂದ್ರ ಕುಮಾರ್, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ಸಿ.ಕೃಷ್ಣಪ್ಪ,ಟಿ.ಪ್ರಸನ್ನಕುಮಾರ್‌, ರಂಗಸ್ವಾಮಿ,ಎಂ.ವಿ.ಮೂಡ್ಲಗಿರೀಶ್, ಎ.ರಾಮಚಂದ್ರಪ್ಪ, ಗಂಗಾಧರ್ ವಿ.ರೆಡ್ಡಿಹಳ್ಳಿ, ಅಮರಾವತಿ ದ್ರೇಹಚಾರ್‌, ವೀಣಾಶ್ರೀನಿವಾಸ್, ಉಮಾಮಲ್ಲೇಶ್‌, ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ಕೆ.ಎಸ್.ವಿ.ಪ್ರಸಾದ್, ಕೃಷಿಕ ಸಮಾಜದ ಅಧ್ಯಕ್ಷ ಗುಟ್ಟೆ ರಮೇಶ್‌ ಕಲಾವಿಧರಾದ ಶಿವು,ಕೃಷ್ಣಚಾರ್‌ ಉಪಸ್ಥಿತರಿದ್ದರು.