ಕಾರ್ಕಳ: ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್‌ಟಿಎ ನಡೆಸಿದ ಜೆಇಇ ಮೈನ್ (ಬಿ.ಟೆಕ್)–೨೦೨೬ರ ಪ್ರಥಮ ಹಂತದ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಒಟ್ಟು ೮ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ಇವರಲ್ಲಿ ಕನಿಷ್ಕ್ ಅಮೀನ್ ೯೯.೯೦೫೫೧೯೯ ಪರ್ಸಂಟೈಲ್ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ೨೨ ವಿದ್ಯಾರ್ಥಿಗಳು ೯೮ ಪರ್ಸಂಟೈಲ್‌ಗಿಂತ ಅಧಿಕ, ೪೮ ವಿದ್ಯಾರ್ಥಿಗಳು ೯೭ ಪರ್ಸಂಟೈಲ್‌ಗಿಂತ ಅಧಿಕ, ೭೪ ವಿದ್ಯಾರ್ಥಿಗಳು ೯೬ ಪರ್ಸಂಟೈಲ್‌ಗಿಂತ ಅಧಿಕ, ೯೪ ವಿದ್ಯಾರ್ಥಿಗಳು ೯೫ ಪರ್ಸಂಟೈಲ್‌ಗಿಂತ ಅಧಿಕ ಹಾಗೂ ೨೨೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಗಳಿಸಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಈ ಸಾಧನೆಯನ್ನು ಅಭಿನಂದಿಸಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ೯೭ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ವಿದ್ಯಾರ್ಥಿಗಳಿಗೆ ಒಟ್ಟು ₹೩.೪೨ ಲಕ್ಷ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ.

೯೯.೯೦೫೫೧೯೯ ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್ ಅವರಿಗೆ ₹೧ ಲಕ್ಷ, ೯೯.೮೨೫೪೪೯೯ ಪರ್ಸಂಟೈಲ್ ಪಡೆದ ಸೋಹನ್ ಗಿರಿರಡ್ಡಿ ಅವರಿಗೆ ₹೭೫ ಸಾವಿರ, ೯೯.೬೫೪೩೯೯೬ ಪರ್ಸಂಟೈಲ್ ಪಡೆದ ಮೇಧಾನ್ಶ್ ಎನ್.ಬಿ ಹಾಗೂ ೯೯.೬೧೩೦೦೯೫ ಪರ್ಸಂಟೈಲ್ ಪಡೆದ ಅನಿರುದ್ಧ್ ಆರ್ ಉಡುಪ ಅವರಿಗೆ ತಲಾ ₹೩೫ ಸಾವಿರ, ೯೯.೫೦೮೭೬೪೫ ಪರ್ಸಂಟೈಲ್ ಪಡೆದ ತುಷಾರ್ ಎ. ಶೆಟ್ಟಿ ಅವರಿಗೆ ₹೨೫ ಸಾವಿರ, ೯೯.೪೨೫೩೨೭೦ ಪರ್ಸಂಟೈಲ್ ಪಡೆದ ನಿಶಾನ್ ಎನ್. ಸಾಲ್ಯಾನ್, ೯೯.೨೩೧೩೦೯೯ ಪರ್ಸಂಟೈಲ್ ಪಡೆದ ತೇಜಸ್ ನಾಯಕ್ ಹಾಗೂ ೯೯.೦೦೯೦೯೨೮ ಪರ್ಸಂಟೈಲ್ ಪಡೆದ ಅನಿಕೇತ್ ಆರ್ ಉಡುಪ ಅವರಿಗೆ ತಲಾ ₹೧೫ ಸಾವಿರ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ.

ಇದೇ ವೇಳೆ ೯೮ ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದ ಮನೋಜ್ ಎಂ., ವೈಷ್ಣವಿ ಕುಲಕರ್ಣಿ, ಸಂಜನಾ ಬಿ.ಎ., ಸಾಯಿರಾಘವೇಂದ್ರ ಬಿ., ಮಯೂರ್ ವಿ. ಗೌಡ, ವರುಣ್ ಜೆ., ಅನಾಮಯ ಯೋಗೇಶ್ ದಿವಾಕರ್, ವಿದ್ವತ್ ವಿ. ಕಾಮತ್, ಪ್ರಭಂಜನ್ ಭಟ್, ಆಸ್ತಿಕಾ ಆರ್. ಭಾಗವತ್, ಜೀವನ್ ಎನ್.ಬಿ., ದಿಗಂತ್ ಎಸ್., ಎನ್.ಎಸ್. ವಿವೇಕ್ ಹಾಗೂ ವಿಶಾಖ್ ಕೃಷ್ಣರಾಜ್ ಅವರಿಗೆ ತಲಾ ₹೧,೦೦೦ ನಗದು ಪುರಸ್ಕಾರ ಹಾಗೂ ೯೭ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ಇತರ ವಿದ್ಯಾರ್ಥಿಗಳಿಗೆ ತಲಾ ₹೫೦೦ ನಗದು ಬಹುಮಾನ ಘೋಷಿಸಲಾಗಿದೆ.ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಈ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಪರಿಶ್ರಮವನ್ನು ಡಾ. ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗಳಿಗೆ ಶುಭ ಹಾರೈಸಿದ್ದಾರೆ.