ಹೊನ್ನಾಳಿ ತಾಲೂಕಿಗೆ ಶೇ.80.72 ಫಲಿತಾಂಶ

| Published : May 10 2024, 01:42 AM IST

ಸಾರಾಂಶ

ರಾಜ್ಯಾದ್ಯಂತ ಗುರುವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಹೊನ್ನಾಳಿ ತಾಲೂಕು ಶೇ.80.72 ಫಲಿತಾಂಶ ಪಡೆದು ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ ಗಳಿಸಿದೆ.

- ಎಸ್ಸೆಸ್ಸೆಲ್ಸಿ: ಹೊನ್ನಾಳಿ ತಾಲೂಕಿಗೆ ಗೌರಿ ಬಿ.ಎಂ. ಟಾಪರ್ - - -

ಹೊನ್ನಾಳಿ: ರಾಜ್ಯಾದ್ಯಂತ ಗುರುವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಹೊನ್ನಾಳಿ ತಾಲೂಕು ಶೇ.80.72 ಫಲಿತಾಂಶ ಪಡೆದು ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನ ಗಳಿಸಿದೆ. ತಾಲೂಕಿನಲ್ಲಿ ಒಟ್ಟು ಆರು ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಚೀಲೂರಿನ ರಾಷ್ಟ್ರೀಯ ಅಂಗ್ಲ ಮಾಧ್ಯಮ ಶಾಲೆ, ಟಿ.ಎಂ.ರಸ್ತೆಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗೊಲ್ಲರಹಳ್ಳಿಯ ಶ್ರೀ ವೆಂಕಟೇಶ್ವರ ಪ್ರೌಢಶಾಲೆ, ಎಚ್‌.ಕಡದಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಾದನಬಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ದುರ್ಗಿಗುಡಿಯ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ವರ್ಷ ಶೇ.100 ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ತಿಳಿಸಿದ್ದಾರೆ.

ಹೊನ್ನಾಳಿ ತಾಲೂಕು ಕಳೆದ ಬಾರಿ ಶೇ.80.54 ಫಲಿತಾಂಶ ಪಡೆದಿತ್ತು. ಈ ಬಾರಿ ಫಲಿತಾಂಶ ಸ್ವಲ್ಪ ಪ್ರಮಾಣ ಏರಿಕೆ ಕಂಡಿದೆ ಎಂದರು.

2299 ಮಕ್ಕಳು ಉತ್ತೀರ್ಣ:

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 2848 ವಿದ್ಯಾರ್ಥಿಗಳ ಪೈಕಿ 2299 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಆ ಮೂಲಕ ಶೇ.80.72 ಸಾಧನೆ ಮಾಡಿದ್ದಾರೆ.

ಶೂನ್ಯ ಫಲಿತಾಂಶ:

ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಎಡಿವಿಎಸ್ ಪ್ರೌಢಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿದೆ. 10 ಬಾಲಕರು ಹಾಗೂ ಓರ್ವ ಬಾಲಕಿ ಸೇರಿ ಒಟ್ಟು 11 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದರು. 11 ವಿದ್ಯಾರ್ಥಿಗಳೂ ಅನುತೀರ್ಣರಾಗಿದ್ದಾರೆ ಎಂದು ಬಿಇಒ ತಿಳಿಸಿದರು.

ಟಾಪರ್ಸ್‌:

ಹೊನ್ನಾಳಿ ಪಟ್ಟಣದ ಆಂಗ್ಲಮಾಧ್ಯಮ ಪ್ರೌಢಶಾಲೆಯ ಗೌರಿ ಬಿ.ಎಂ. 625ಕ್ಕೆ 615 ಅಂಕ ಪಡೆದು ತಾಲೂಕಿಗೆ ಟಾಪರ್ಸ್ ಕಿರೀಟ ಧರಿಸಿದ್ದಾರೆ. ಇದೇ ಶಾಲೆಯ ಪ್ರತಿಭಾ ಪಾಟೀಲ್ ಜಿ. 625ಕ್ಕೆ 612 ಅಂಕ ಗಳಿಸಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದರೆ, ಎಚ್.ಕಡದಕಟ್ಟೆ ವಿಜಯ ಪಬ್ಲಿಕ್ ಜ್ಞಾನಸಾಗರ ಶಾಲೆಯ ವಿದ್ಯಾರ್ಥಿ ವಿಶಾಲ್ ಆರ್. ನಾಯ್ಕ್ 611 ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಬಿಇಒ ನಂಜರಾಜ್ ತಿಳಿಸಿದರು.

- - - -9ಎಚ್ಎಲ್ಐ4: ಗೌರಿ ಬಿ.ಎಂ.

-9ಎಚ್.ಎಲ್ಐ4ಎ: ಪ್ರತೀಭಾ ಪಾಟೀಲ್

-9ಎಚ್ಎಲ್ಐ4ಬಿ.: ವಿಶಾಲ್ ಆರ್. ನಾಯ್ಕ