ಸಾರಾಂಶ
ಕಳೆದ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೆಜೆಸ್ಟಿಕ್‌ನ ಮ್ಯಾನ್ಫೋ ಬೆಲ್ ಹೋಟೆಲ್‌ಗೆ ಬಿಬಿಎಂಪಿಯ ಅಧಿಕಾರಿಗಳು ಮಂಗಳವಾರ ಬೀಗ ಹಾಕಿ ಸೀಜ್ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೆಜೆಸ್ಟಿಕ್‌ನ ಮ್ಯಾನ್ಫೋ ಬೆಲ್ ಹೋಟೆಲ್‌ಗೆ ಬಿಬಿಎಂಪಿಯ ಅಧಿಕಾರಿಗಳು ಮಂಗಳವಾರ ಬೀಗ ಹಾಕಿ ಸೀಜ್ ಮಾಡಿದ್ದಾರೆ.ಹೋಟೆಲ್ ಮಾಲೀಕರು ವಾಣಿಜ್ಯ ಬಳಕೆ ದರದಲ್ಲಿ ಆಸ್ತಿ ತೆರಿಗೆ ಮಾಡುತ್ತಿದ್ದಾರೆ. ಆದರೆ, ಹೋಟೆಲ್ ಬಳಕೆ ದರದಲ್ಲಿ ಆಸ್ತಿ ತೆರಿಗೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಆ ಪ್ರಕಾರ ಮಾಲೀಕರಿಗೆ ಹಲವು ಬಾರಿ ನೋಟಿಸ್ ಸಹ ನೀಡಲಾಗಿತ್ತು. ಆದರೆ, ಯಾವುದೇ ಉತ್ತರ ನೀಡಿಲ್ಲ. ಕಳೆದ ತಿಂಗಳು ಹೋಟೆಲ್‌ಗೆ ಭೇಟಿ ನೀಡಿ ಬಾಕಿ ಇರುವ 81 ಲಕ್ಷ ರು ಆಸ್ತಿ ತೆರಿಗೆ ಪಾವತಿ ಮಾಡುವಂತೆ ಪಶ್ಚಿಮ ವಲಯ ಆಯುಕ್ತರೇ ಖುದ್ದು ಸೂಚಿಸಿದ ವೇಳೆ ಅ.28ಕ್ಕೆ ಪಾವತಿ ಮಾಡುವುದಾಗಿ ಸಮಯ ಪಡೆದುಕೊಂಡಿದ್ದರು.
ನೀಡಿದ ಸಮಯ ಮೀರಿದರೂ ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಮಂಗಳವಾರ ವಲಯ ಆಯುಕ್ತೆ ಅರ್ಚನಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಹೋಟೆಲ್ ಸೀಜ್ ಮಾಡಿದ್ದಾರೆ.ಹೋಟೆಲ್‌ನ ಒಂದೆರಡು ಕೊಠಡಿಗಳಲ್ಲಿ ಇದ್ದ ಗ್ರಾಹಕರಿಗೆ ಮನವಿ ಮಾಡಿಕೊಂಡು ಖಾಲಿ ಮಾಡಿಸಿದ್ದೇವೆ. ₹10 ಲಕ್ಷಕ್ಕೂ ಅಧಿಕ ಮೊತ್ತದ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರ ಪಟ್ಟಿ ಮಾಡಿಕೊಂಡು ಕಂದಾಯ ಅಧಿಕಾರಿಗಳು ನಿರಂತರವಾಗಿ ಸೀಜ್ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ವಲಯ ಆಯುಕ್ತೆ ಅರ್ಚನಾ ತಿಳಿಸಿದ್ದಾರೆ.