ದಾಖಲೆ ಇಲ್ಲದ ರು.85 ಸಾವಿರ ನಗದು ಜಪ್ತಿ

| Published : Apr 18 2024, 02:20 AM IST

ಸಾರಾಂಶ

ಶಿವರಾಮಪೂರ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹೮೫ ಸಾವಿರ ಹಾಗೂ ಬಿ.ಎಸ್.ಆರ್ ಪಕ್ಷದ ಧ್ವಜ, ಟೋಪಿ ಇನ್ನಿತರ ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಕುಂಚಾವರಂ ವಲಯದ ಶಿವರಾಮಪೂರ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹೮೫ ಸಾವಿರ ಹಾಗೂ ಬಿ.ಎಸ್.ಆರ್ ಪಕ್ಷದ ಧ್ವಜ, ಟೋಪಿ ಇನ್ನಿತರ ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ತೆಲಂಗಾಣ ರಾಜ್ಯದ ಜಹಿರಾಬಾದ ತಾಲೂಕಿನ ಕುಪ್ಪನಗರ ಗ್ರಾಮದ ವ್ಯಕ್ತಿಯೋರ್ವನು ತಾಂಡೂರ ತಾಲೂಕಿನ ವೀರಶೆಟ್ಟಿಪಲ್ಲಿ ಗ್ರಾಮಕ್ಕೆ ಹೊರಟಿರುವಾಗ ಶಿವರಾಮಪೂರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೇ ಇರುವ ೮೫ ಸಾವಿರ ರೂ.ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿದ ಹಣವನ್ನು ಎಫ್‌.ಎಸ್.ಟಿ-೨ ಚಿಂಚೋಳಿ ವೃತ್ತದ ಅಧಿಕಾರಿ ಪ್ರಭುಲಿಂಗ ಬುಳ್ಳ ಇವರಿಗೆ ಒಪ್ಪಿಸಲಾಗಿದೆ.

ಅಂಕಿಸಂಖ್ಯೆ ತಪಾಸಣೆ ತಂಡದಲ್ಲಿ ಕುಂಚಾವರಂ ಪಿಎಸ್‌ಐ ಪ್ರಭಾಕರ ಪಾಟೀಲ, ಉಮೇಶ ಹಳಿಮನಿ, ಭೀಮಣ್ಣ ಜೋಗ, ಧನರಾಜ ಅಧಿಕಾರಿಗಳು ತಪಾಸಣೆಯಲ್ಲಿದ್ದರು. ₹೮೫ ಸಾವಿರ ಮತ್ತು ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಚಿಂಚೋಳಿ ತಾಲೂಕು ಸಹಾಯಕ ಚುನಾವಣಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಎಫ್‌.ಎಸ್.ಟಿ. ತಂಡದ ಮುಖ್ಯಸ್ಥರು ಪ್ರಭುಲಿಂಗ ಬುಳ್ಳ ತಿಳಿಸಿದ್ದಾರೆ.