ಸರ್ವತೋಮುಖ ಅಭಿವೃದ್ಧಿಗೆ ₹೯೦ ಕೋಟಿ ಅನುದಾನ

| Published : Jul 10 2024, 12:34 AM IST

ಸರ್ವತೋಮುಖ ಅಭಿವೃದ್ಧಿಗೆ ₹೯೦ ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವುದರೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಈಗಾಗಲೇ ಸರ್ಕಾರದಿಂದ ಸುಮಾರು ₹೯೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಮಾದರಿಯ ಪಟ್ಟಣ ಮಾಡುವ ಗುರಿಗೆ ಎಲ್ಲರೂ ಸಹಕಾರ ನೀಡಿ ಕೈ ಜೋಡಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವುದರೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಈಗಾಗಲೇ ಸರ್ಕಾರದಿಂದ ಸುಮಾರು ₹೯೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಮಾದರಿಯ ಪಟ್ಟಣ ಮಾಡುವ ಗುರಿಗೆ ಎಲ್ಲರೂ ಸಹಕಾರ ನೀಡಿ ಕೈ ಜೊಡಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮನವಿ ಮಾಡಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಸದಸ್ಯರ ಹಾಗೂ ವಿವಿಧ ಅಧಿಕಾರಿಗಳ ಪ್ರಗತಿ ಪರಿಶಿಲನಾ ಹಾಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಮುಖ್ಯ ಹಳೆ ಬಜಾರದಲ್ಲಿರುವ ಹೊಸದಾಗಿ ವಾಣಿಜ್ಯ ಮಳಿಗೆಗಳನ್ನು ಹೊಂದಿದ ಮಾರುಕಟ್ಟೆ ನಿರ್ಮಿಸಲು ಸರ್ಕಾರದಿಂದ ಈಗಾಗಲೇ ₹೧೫ ಕೋಟಿ ಪಟ್ಟಣದ ಜನರಿಗೆ ದಿನದ ೨೪ ಗಂಟೆ ನೀರು ಪೂರೈಕೆ ಮಾಡಲು ಅಮೃತ ಯೋಜನೆ ಅಡಿಯಲ್ಲಿ ₹೩೫ ಕೋಟಿ, ಕೆರೆ ಅಭಿವೃದ್ಧಿಗೆ ಸೇರಿದಂತೆ ರಸ್ತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ₹೫ ಕೋಟಿ, ಎಸ್ಇಪಿಒಎಸ್‌ಪಿ ಯೋಜನೆಯಡಿಲ್ಲಿ ₹೨ ಕೋಟಿ, ಒಳಚರಂಡಿ ಅಭಿವೃದ್ಧಿಗಾಗಿ ₹೩೪ ಕೋಟಿ ಅನುದಾನವನ್ನು ಈಗಾಗಲೇ ಸರ್ಕಾರ ಮಂಜುರಾತಿ ನೀಡಿದ್ದು, ಆದಷ್ಟು ಬೇಗ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ಪಟ್ಟಣದ ಜನರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಈ ಹಿಂದೆ ನಮ್ಮದೇ ಸರ್ಕಾರದ ಅವಧಿಯಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತನಕ್ಕೆ ಒಳಚರಂಡಿ ಕಾಮಗಾರಿಯು ಸಕಾಲಕ್ಕೆ ಮುಗಿಸದೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಲ್ಲದೇ ನಿತ್ಯ ಸಾರ್ವಜನಿಕರ ಗೋಳಾಟ ಹೇಳತೀರದಂತಾಗಿದೆ. ಏಕೆ ಹೀಗೆ ಮಾಡಿದಿರಿ? ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡುತ್ತಿದ್ದಿರಿ. ಈ ರಾಜ್ಯದ ಜನರು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಟ್ಟಿದ ಹಣದಲ್ಲಿ ಸರ್ಕಾರಿ ನೌಕರರಾಗಿ ಸಂಬಳ ಪಡೆದುಕೊಂಡು ನಿಮ್ಮ ಜೀವನ ನಡೆಸುತ್ತಿದ್ದಿರಿ ಎಂಬುವುದನ್ನು ತಿಳಿದು ಜನರ ಸೇವೆ ಮಾಡುವ ಕೆಲಸ ಮಾಡಿದರೇ ನಿಮಗೆ ಗೌರವ ಸಿಗುತ್ತದೆ ಎಂದು ಒಂಚರಂಡಿ ಮಂಡಳಿ ಹಾಗೂ ಇತರೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಒಂಚರಂಡಿ ಮಂಡಳಿಯ ಎಇಇ ರಾಮರಾವ ರಾಠೋಡ ಮಾತನಾಡಿ, ೨೦೨೧ರಲ್ಲಿಯೇ ಪಟ್ಟಣದಲ್ಲಿ ಒಂಚರಂಡಿ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದೆ. ಆದರೆ, ಎರಡು ಕಡೆ ಮಿಸ್ಸಿಂಗ್ ಲಿಂಕ್ಸ್ ಕಂಡು ಬಂದಿದ್ದು ಜೊತೆಗೆ ಒಂಚರಂಡಿ ಶೇಖರಣಾ ಘಟಕವೂ ಹಡಲಗೇರಿ ಪಂಚಾಯರತಿ ವ್ಯಾಪ್ತಿಯಲ್ಲಿ ಬರುವುದರಿಂದ ಪರವಾನಿಗೆ ನೀಡದೆ ಇರುವುದರಿಂದ ಪಟ್ಟಣದ ಜನರಿಗೆ ಸಂಪರ್ಕ ಕೊಡಲು ಸಾಧ್ಯವಾಗಿಲ್ಲ ಎನ್ನುತ್ತಿದ್ದಂತೆ ಗರಂ ಆದ ಶಾಸಕರು ಐದಾರು ವರ್ಷಗಳ ಕಾಲ ಏಕೆ ಸುಮ್ಮನಿದ್ದಿರಿ? ಆಗಲೇ ಬಗೆಹರಿಸಿಕೊಳ್ಳಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ಮುಂಬರುವ ಒಂದು ವಾರದೊಳಗೆ ಪಟ್ಟಣದ ಒಳಚರಂಡಿ ಲೋಪಗಳನ್ನು ಸರಿಪಡಿಸಲು ಈಗಾಗಲೇ ಒಡೆದು ಹಾಳಾಗಿ ಹೋಗಿರುವ ಚೆಂಬರ್‌ಗಳ ದುರಸ್ತಿ ಉಸ್ತುವಾರಿ ನೋಡಿಕೊಳ್ಳಲು ಖರ್ಚಾಗುವ ಅಂದಾಜು ವೆಚ್ಚದ ಬಗ್ಗೆ ಸಂಪೂರ್ಣ ವರದಿ(ಕ್ರಿಯಾಯೋಜನೆ) ಸಿದ್ಧಪಡಿಸಿ ಕೊಟ್ಟರೆ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ತರುವ ಮೂಲಕ ಸಾರ್ವಜನಿಕರಿಗೆ ಒಂಚರಂಡಿ ಸಂಪರ್ಕ ಕಲ್ಪಿಸಿ ಅನುಕೂಲ ಮಾಡುವಲ್ಲಿ ಪ್ರುಯತ್ನಿಸೋಣ ಎಂದು ತಿಳಿಸಿದರು.ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ವಿವಿಧ ಮೂಲಬೂತ ಸೌಲಭ್ಯಗಳಿಗಾಗಿ ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸುವ ಮೂಲಕ ಸಾರ್ವಜನಿಕರ ಮತ್ತು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ವಿವಿಧ ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮಾತ್ರವಲ್ಲದೇ ಕಳಪೆಮಟ್ಟದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸಿದ್ದು, ಎಲ್ಲ ಕಾಮಗಾರಿಗಳನ್ನು ಪುನರ್‌ ಥರ್ಡ್‌ ಪಾರ್ಟಿ ತನಿಖೆಗೊಳಿಸಿ ಅಂತಹ ಗುತ್ತಿಗೆದಾರರ ಬಾಕಿ ಹಣವನ್ನು ಮಂಜೂರು ಮಾಡದೇ ತಡೆ ಹಿಡಿದು ಕಪ್ಪಪಟ್ಟಿಗೆ ಸೇರಿಸಿ ಎಂದರು.ಖೊಟ್ಟಿ ದಾಖಲೆ ನೀಡಿ ಪೌರ ಕಾರ್ಮಿಕರಾಗಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಆಡಳಿತಾಧಿಕಾರಿ ಹಾಗೂ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಅವರಿಗೆ ಸೂಚಿಸಿದರು.ಈ ವೇಳೆ ಪುರಸಭೆ ಆಡಳಿತಾಧಿಕಾರಿ ಹಾಗೂ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಮಾತನಾಡಿ, ರಸ್ತೆ ಬದಿಗಿರುವ ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ಕಟ್ಟಿ ಸಾರ್ವಜನಿಕರ ಸಂಚಾರಕ್ಕೆ ಅಡತಡೆಯನ್ನುಂಟು ಮಾಡುತ್ತಿದ್ದು, ಯಾವುದೆ ಮುಲಾಜಿಲ್ಲದೇ ಅಂತಹ ಅಕ್ರಮ ಕಟ್ಟಡಗಳನ್ನು ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಬೇಕು ಎಂದು ತಿಳಿಸಿದರು.ಈ ವೇಳೆ ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ ಮಾತನಾಡಿ, ಪುರಸಭೆಯ ಆಡಳಿತ ಮಂಡಳಿಯ ಯಾವೊಬ್ಬ ಸದಸ್ಯ ಅಭಿಪ್ರಾಯ ಪಡೆಯದೇ ಬೇಕಾಬಿಟ್ಟಿಯಾಗಿ ಸ್ಲಂ ಇಲ್ಲದ ಬಡಾವಣೆಯಲ್ಲಿರುವ ವ್ಯಕ್ತಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕ ಸಿ.ಎಸ್.ನಾಡಗೌಡ ಅವರು ಮಾತನಾಡಿ, ಸ್ಲಂ ನಿವಾಸಿಗಳಲ್ಲದವರಿಗೆ ನೀಡಿದ ಹಕ್ಕು ಪತ್ರಗಳನ್ನು ರದ್ದುಗೊಳಿಸಿ ನಿಜವಾದ ಸ್ಲಂ ನಿವಾಸಿಗಳು ಇದ್ದರೇ ಮಾತ್ರ ಅಂತವರಿಗೆ ಹಕ್ಕುಪತ್ರ ವಿತರಸಿ ನ್ಯಾಯ ಒದಗಿಸಬೇಕು ಎಂದು ಸ್ಲಂ ಬೋರ್ಡ್‌ ಇಲಾಖೆ ಅಧಿಕಾರಿ ಪ್ರಹ್ಲಾದ ಪಾಟೀಲ ಸೂಚಿಸಿದರು.

ಈಗಾಗಲೇ ಪಟ್ಟಣದ ಸುತ್ತಲಿನ ಬಿದರಕುಂದಿ, ಕುಂಟೋಜಿ, ಹಡಲಗೇರಿ, ಶಿರೋಳ ಗ್ರಾಮಗಳನ್ನು ಜಮೀನುಗಳಲ್ಲಿ ಜನರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಸದ್ಯ ಈಗಿರುವ ಈ ನಾಲ್ಕು ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ನಗರಸಭೆಯನ್ನಾಗಿಸಿಬಹುದು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೇಗೆರಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ರಿಯಾಜಹಮ್ಮದ ಢವಳಗಿ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಪ್ರೀತಿ ದೇಗಿನಾಳ, ಶಾಹಾಜದಬಿ ಹುಣಸಗಿ, ಹಣಮಂತ ಭೋವಿ, ಶಿವು ಶಿವಪುರಿ, ಸಮೀರ ದ್ರಾಕ್ಷಿ, ಭಾರತಿ ಪಾಟೀಲ, ಸೋನಾಬಾಯಿ ನಾಯಕ ಸೇರಿದಂತೆ ಹಲವರು ಇದ್ದರು.