ಜೆಇಇ ಮುಖ್ಯ ಪರೀಕ್ಷೆಯಲ್ಲಿ ಗುರುರಾಜ್ ಸಜ್ಜನ್‌ಗೆ 92ನೇ ರ್‍ಯಾಂಕ್‌

| Published : Apr 22 2025, 01:48 AM IST

ಸಾರಾಂಶ

92nd rank for Gururaj Sajjan in JEE Mains

-ವಿಜಯಪುರದ ಗುರುರಾಜ ಸಜ್ಜನ್‌ ಕಲಬುರಗಿ ಆಕಾಶ್‌ ಸಂಸ್ಥೆ ವಿದ್ಯಾರ್ಥಿ। ಪೋಷಕರಾದ ಸುಭಾಷ ಸಜ್ಜನ್‌, ಸುವರ್ಣ ಸಜ್ಜನ್‌ ಅವರಿಗೆ ಸನ್ಮಾನ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಹೆಸರು ಮಾಡಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಕಲಬುರಗಿ ಶಾಖೆಯಲ್ಲಿ ಓದಿರುವ ಗುಲ್ಬರ್ಗದ ವಿದ್ಯಾರ್ಥಿ ಅಗ್ರ 100 ಅಖಿಲ ಭಾರತ ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿದ್ದಾನೆ.

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆ 2025 (ಸೆಷನ್ 2) ನಲ್ಲಿ ತನ್ನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಳನ್ನು ಹೆಮ್ಮೆಯಿಂದ ಘೋಷಿಸಿರುವ ಆಕಾಶ್‌ ಕಲಬುರಗಿ ಘಟಕ, ತನ್ನಲ್ಲಿ ಕಲಿತ ವಿದ್ಯಾರ್ಥಿ ಗುರುರಾಜ್ ಎಸ್. ಸಜ್ಜನ್, ಜೆಇಇ ಮುಖ್ಯ ಪರೀಕ್ಷೆ 2025 (ಸೆಷನ್ 2) ನಲ್ಲಿ 99.99 ಶೇಕಡಾವಾರು ಅಂಕಗಳೊಂದಿಗೆ ಎಐಆರ್‌ 92 ನೇ ರ್‍ಯಾಂಕ್‌ ಗಳಿಸಿದ್ದಾನೆಂದು ಸಂಭ್ರಮಿಸಿದೆ.

ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ ನ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ ಅವರು ವಿದ್ಯಾರ್ಥಿಗಳ ಅದ್ಭುತ ಫಲಿತಾಂಶಗಳಿಗಾಗಿ ಅವರನ್ನು ಅಭಿನಂದಿಸಿದರು.

ಬಳಿಕ ಮಾತನಾಡಿ, ಆಕಾಶ ಸಂಸ್ಥೆಯ ಆಡ್ಮಿಷನ್‌ ವಿಭಾಗದ ಮುಖ್ಯಸ್ಥ ಆಡಳಿತ ಮುಖಸ್ಥ ಸುಮನ ಚಕ್ರವರ್ತಿ, ಹಿರಿಯ ಸಹಾಯಕ ನಿರ್ದೇಶಕ ದೊಡ್ಡಿ ರವಿಕುಮಾರ್‌, ಜೆಇಇ ಮುಖ್ಯ 2025ರಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಅವರ ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯ, ಸೂಕ್ತ ತರಬೇತಿಯೊಂದಿಗೆ ಸೇರಿ, ಈ ಫಲಿತಾಂಶಗಳಿಗೆ ಕಾರಣವಾಗಿದೆ. ಕಲಬುರಗಿ ಆಕಾಶ್‌ ನಲ್ಲಿ ಜೆಇಇ ಮೇನ್ಸ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಪರ್ಸೆಂಟೈಲ್‌ ಪಡೆದು ಉತ್ತೀರ್ಣರಾಗಿದ್ದಾರೆ. ಗುಣಮಟ್ಟದ ಶಿಕ್ಷಣ ಒದಗಿಸುವತ್ತ ನಾವು ಗಮನ ಹರಿಸುತ್ತೇವೆಂದು ಹೇಳಿದರು. ಇದೇ ಸಂದರ್ಭದಲ್ಲಿ ಯಶಸ್ವಿ ಕಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿರು.

ಇದೇ ಸಂದರ್ಭಲ್ಲಿ ಆಲ್‌ ಇಂಡಿಯಾ ರ್‍ಯಾಂಕ್‌ ಪಡೆದ ವಿಜಯಪುರ ಮೂಲದ ವಿದ್ಯಾರ್ಥಿ ಗುರುರಾಜ ಸಜ್ಜನ್‌ ಅವರ ಪೋಷಕರಾದ ಸುಭಾಷ ಸಜ್ಜನ್‌, ಸುವರ್ಣ ಸಜ್ಜನ್‌ ಅವರಿಗೆ ಸನ್ಮಾನಿಸಲಾಯಿತು. ಉಳಿದ ವಿದ್ಯಾರ್ಥಿಗಳಿಗೂ ಪಾರಿತೋಷಕ ನೀಡಿ ಶುಭ ಕೋರಲಾಯ್ತು. ತಮ್ಮ ಮಗ ಗುರುರಾಜ ಜೆಇಇ ಅಡ್ವಾನ್ಸ್‌ ಪರೀಕ್ಷೆ ಸಿದ್ಧತೆಯಲ್ಲಿದ್ದಾನೆ. ಮುಂಬೈ ಐಐಟಿಯಲ್ಲಿ ಪ್ರವೇಶ ಹೊಂದಲು ಆಸಕ್ತನಾಗಿದ್ದಾನೆಂದು ಪೋಷಕರು ಹೇಳಿದರು.

ಈ ವೇಳೆ ಹಿರಿಯ ಸಹಾಯಕ ನಿರ್ದೇಶಕ ದೊಡ್ಡಿ ರವಿಕುಮಾರ್‌, ಏರಿಯಾ ಸೇಲ್ಸ್‌ ಹೆಡ್‌ ಅನಿಲ್‌ ಕುಮಾರ್‌, ಗುಲ್ಬರ್ಗ ಆಕಾಶ್‌ ಇನ್ಸ್ಟಿಟ್ಯೂಟ್‌ ಬ್ರ್ಯಾಂಚ್‌ ಹೆಡ್‌ ಸಂತೋಷ ಪಾಟೀಲ್‌ ಇದ್ದರು.----