ಕೆಂಭಾವಿ ವಲಯದ ಕೂಡಲಗಿ ಗ್ರಾಮದಲ್ಲಿ ಶ್ರೀ ಸದ್ಗುರು ಶಾಂತಾನಂದ ಸರಸ್ವತಿ ಸ್ವಾಮಿಗಳ 93ನೇ ಆರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಕೊನೇ ಆರಾಧನಾ ಮಹೋತ್ಸವ ಪೀಠಾಧಿಪತಿ ಉಮಾಕಾಂತ ಸಿದ್ಧರಾಜ ಬಾಬಾ ಮಹಾರಾಜರ ನೇತೃತ್ವದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮೂರು ದಿನಗಳ ಆರಾಧನೆಗೆ ತೆರೆ ಎಳೆಯಲಾಯಿತು.

ಕನ್ನಡಪ್ರಭ ವಾರ್ತೆ ಕೆಂಭಾವಿ

ಕೆಂಭಾವಿ ವಲಯದ ಕೂಡಲಗಿ ಗ್ರಾಮದಲ್ಲಿ ಶ್ರೀ ಸದ್ಗುರು ಶಾಂತಾನಂದ ಸರಸ್ವತಿ ಸ್ವಾಮಿಗಳ 93ನೇ ಆರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಕೊನೇ ಆರಾಧನಾ ಮಹೋತ್ಸವ ಪೀಠಾಧಿಪತಿ ಉಮಾಕಾಂತ ಸಿದ್ಧರಾಜ ಬಾಬಾ ಮಹಾರಾಜರ ನೇತೃತ್ವದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮೂರು ದಿನಗಳ ಆರಾಧನೆಗೆ ತೆರೆ ಎಳೆಯಲಾಯಿತು.

ಮುಂಜಾನೆ ಸುಪ್ರಭಾತ, ಕಾಕಡಾರತಿ, ವೇದಘೋಷ, ಶ್ರೀ ಸ್ವಯಂಭೂ ಸಿದ್ಧಿವಿನಾಯಕನಿಗೆ, ಶಾರದಾಂಬೆಗೆ ಹಾಗೂ ಗುರುಗಳ ಗದ್ದುಗೆಗಳಿಗೆ ಪೂಜಾಭಿಷೇಕ, ಸಂಗೀತ, ಗೋಪಾಳಕಾವಳ, ಅವಭೃತ ಸ್ನಾನ, ಮಂತ್ರಪುಷ್ಪ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಆರಾಧನೆಯ ಸಂಪನ್ನ ಕಾರ್ಯಮದ ನಂತರ ಆಶೀರ್ವಚನ ನೀಡಿದ ಪೀಠಾಧಿಪತಿ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜರು, ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಗುರುಗಳ ಮತ್ತು ಭಗವಂತನ ಮೇಲೆ ಅಚಲ ನಂಬಿಕೆ ಇಟ್ಟು ಮಡಿದಾಗ ಮಾತ್ರ ಅವು ಈ ಕಾರ್ಯರೂಪಕ್ಕೆ ಬಂದು ಒಳ್ಳೆ ಫಲಿತಾಂಶವನ್ನು ನಮಗೆ ನೀಡುತ್ತವೆ. ಈ ಬಾರಿ ನಡಿನಲ್ಲಿ ಮಳೆ ಕೊರತೆ ಎದು ಕಾಣುತ್ತಿದ್ದು ಬರಗಾಲದ ಛಾಯೆ ಗೋಚರವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಂಥಾ ಸಂದರ್ಭ ಬಾರದೆ ಎಲ್ಲ ಕಡೆ ಸುಭಿಕ್ಷೆ ನೆಲೆಸುವಂತೆ ಮಾಡಿ ರೈತರಿಗೆ, ಜನತೆಗೆ ಸುಖ ಸಮೃದ್ಧಿ ಸಿಗಲಿ. ಮೂರು ದಿನಗಳ ಆರಾಧನೆಯಲ್ಲಿ ಗುರುಗಳಿಗೆ ಮತ್ತು ಸ್ವಯಂಭೂ ಸಿದ್ಧಿ ವಿನಾಯಕನಿಗೆ ವಿಶೆಷ ಪೂಜೆ, ಹೋಮ ಹವನ ನೆರವೇರಿಸಲಾಗಿದ್ದು ಭಗವಂತನ ಮೇಲೆ ನಾವು ಇಟ್ಟಿರುವ ಅಚಲವಾದ ನಂಬಿಕೆ, ಭಕ್ತಿ, ವಿಶ್ವಾಸವೆ ಈ ಎಲ್ಲ ಕಷ್ಟಗಳಿಗೆ ಪರಿಹಾರ ಎಂದ ಅವರು ನಿತ್ಯ ಎಲ್ಲರೂ ಸಂಪ್ರದಾಯಬದ್ಧವಾದ, ಸಂಸ್ಕಾರಯುತವಾದ ತಮ್ಮ ತಮ್ಮ ಧರ್ಮಾಚರಣೆಯಲ್ಲಿ ತೊಡಗುವಂತೆ ಭಕ್ತರಿಗೆ ಕಿವಿ ಮಾತು ಹೇಳಿದರು.

ಮೂರು ದಿನಗಳ ಆರಾಧನೆಯಲ್ಲಿ ವಿವಿಧ ರೀತಿಯಲ್ಲಿ ಸೇವೆಗೈದ ಹಲವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು. ಗಜಾನನ ಮಹಾರಾಜ, ವಿಶ್ವನಾಥ ಶಾಸ್ ಧಾರವಾಡ, ಶಿವಸ್ವಾಮಿ ಶಾಸ್ತಿç ಧಾರವಾಡ, ಶ್ರೀಹರಿ ಗೋಳ, ಅನಂತ ಆಚಾರ್ಯ ಕೊಪ್ಪರ, ಯೋಗೇಶ ಜೋಷಿ, ಶ್ರೀಧರ ಅರ್ಚಕ, ಪ್ರಮೋದ ಬೂದನೂರ, ಶ್ರೀಪಾದಭಟ್ಟ ಜೋಷಿ, ವಲ್ಲಭಭಟ್ ಜೋಷಿ, ದತ್ತಂಭಟ್ಟ ಜೋಷಿ, ಗಂಗಾಧರ ಮಹಾರಾಜ, ಡಾ. ಭೀಮಾಶಂಕರ ಜೋಷಿ ಸೇರಿದಂತೆ ಹಲವರಿದ್ದರು.