ಸಾರಾಂಶ
ಇಲ್ಲಿನ ರಾಮ ಮಂದಿರ ಸರ್ಕಲ್ ಕೋಟನೂರ್ (ಡಿ) ರಸ್ತೆಯಲ್ಲಿರುವ ಕಾಯಕ ವಸತಿ ಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ದಾಖಲೆಯ ಫಲಿತಾಂಶ ಲಭಿಸಿದೆ. ಶೇಕಡ 99.04 ಫಲಿತಾಂಶ ಪಡೆದುಕೊಳ್ಳುವ ಮೂಲಕ ಈ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ರಾಮ ಮಂದಿರ ಸರ್ಕಲ್ ಕೋಟನೂರ್ (ಡಿ) ರಸ್ತೆಯಲ್ಲಿರುವ ಕಾಯಕ ವಸತಿ ಶಾಲೆಗೆ ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ದಾಖಲೆಯ ಫಲಿತಾಂಶ ಲಭಿಸಿದೆ. ಶೇಕಡ 99.04 ಫಲಿತಾಂಶ ಪಡೆದುಕೊಳ್ಳುವ ಮೂಲಕ ಈ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.ಈ ಶಾಲೆಯ ವಿದ್ಯಾರ್ಥಿನಿ ಅಮೃತಾ ಕಲ್ಯಾಣಿ ಧಂಗಾಪೂರ 5 ವಿಷಯಗಳಲ್ಲಿ 100/100 ಹಾಗೂ 99.04 ಶೇಕಡಾ ಫಲಿತಾಂಶ ತಂದು ಶಾಲೆಗೆ ಕೀರ್ತಿ ತಂದಿದ್ದಾಳೆ. ಶ್ವೇತಾ ಸಜ್ಜನ ಶೇ.97.44, ಅಪೂರ್ವಾ ಬಾಲಕೃಷ್ಣ ಕುಲಕರ್ಣಿ 93.06, ಅಕ್ಷರಾ ಬಂಡೆ 93.04, ಸ್ಪೂರ್ತಿ ನಿಂಗಣ್ಣಗೌಡ 91.02, ಅನಿರುದ್ಧ ಮೇಡಿ 91, ವರ್ಷಾ ತಂದೆ ಕಾಮಣ್ಣ ಜಮಾದಾರ 90, ತನುಶ್ರೀ ಯಾಳೆಗಾಂವ 90.04, ವರುಣ ಆವಂತಿ 90.04, ಪ್ರಸನ್ನ ರೇಣುಕಾ ತಂದೆ ವಿರೂಪಾಕ್ಷಯ್ಯ 90, ಪ್ರದೀಪ ತಂದೆ ಭೀಮಾಶಂಕರ 88 ರಷ್ಟು ಫಲಿತಾಶ ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ, ಇದರಲ್ಲಿ 4 ವಿದ್ಯಾರ್ಥಿಗಳು ಕನ್ನಡದಲ್ಲಿ 100/100, 3 ವಿದ್ಯಾರ್ಥಿಗಳು ಹಿಂದಿಯಲ್ಲಿ 100/100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಾಯಕ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಶಿವರಾಜ ಟಿ. ಪಾಟೀಲ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಪ್ನಾ ರೆಡ್ಡಿ ಪಾಟೀಲ್, ಉಪ ಸಂಸ್ಥಾಪಕರು ಚಂದ್ರಶೇಖರ ಟಿ.ಪಾಟೀಲ್, ಶ್ರೀಮತಿ ಪುಷ್ಪಾ ಚಂದ್ರಶೇಖರ ಪಾಟೀಲ್ ಹಾಗೂ ಪ್ರಾಚಾರ್ಯ ಆ್ಯಂಟನಿ ಸಾಮಿ ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.--------------
ಕಾಯಕ ಫೌಂಡೇಶನ್ ವಸತಿ ಶಾಲೆಯಲ್ಲಿ ಅತ್ಯುನ್ನತ ದರ್ಜೆಯ ಭೋಧನ, ಹೈಟೆಕ್ ಶೈಕ್ಷಣಿಕ ಪರಿಕರಗಳೊಂದಿಗೆ ಪರಿಣಿತ ಶಿಕ್ಷಕರಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ವಿಶೇಷ ಕಾಳಜಿ ವಹಿಸಿ ಪರಿಣಾಮಕಾರಿಯಾಗಿ ಕಲಿಸುವುದರ ಜೊತೆಗೆ ಪಾಠಗಳ ಪೂರ್ಣ ಮನನ, ಮೇಲಿಂದ ಮೇಲೆ ಪರೀಕ್ಷೆ ಎದುರಿಸುವ ಕುರಿತು ತಯಾರಿ, ಮಾಡೆಲ್ ಪ್ರಶ್ನೆ ಪತ್ರಿಕೆ ಬಿಡಿಸುವ ಮೂಲಕ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸಲು ಸಿದ್ದಗೊಳಿಸಿದ್ದು, ಇದರ ಪರಿಣಾಮವಾಗಿಯೆ ನಮ್ಮ ವಿದ್ಯಾರ್ಥಿನಿ ಅಮೃತಾ ಧಂಗಾಪೂರ 5 ವಿಷಯದಲ್ಲಿ 100/100 ಹಾಗೂ ಶೇ. 99.04 ಫಲಿತಾಂಶ ಪಡೆಯಲು ಅರ್ಹಳಾಗಿದ್ದಾಳೆ.ಶಿವರಾಜ ಪಾಟೀಲ್, ಕಾಯಕ ಫೌಂಡೇಷನ್ ಶಾಲೆಯ ಸಂಸ್ಥಾಪಕರು. ಕಲಬುರಗಿ.