ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ತುಮಕೂರು ವಿವಿಯ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕರಾಟೆ ಡೂ-ಟ್ರೈನಿಂಗ್ ಸ್ಕೂಲ್, ತುಮಕೂರು ಅಧ್ಯಕ್ಷ ಪ್ರಕಾಶ್ ಅವರ ನೇತೃತ್ವದಲ್ಲಿ 9 ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ದಕ್ಷಿಣ ಭಾರತವಲ್ಲದೆ ದೇಶದ 15ಕ್ಕೂ ಹೆಚ್ಚು ರಾಜ್ಯಗಳ ಸುಮಾರು 1200 ಕರಾಟೆ ಪಟುಗಳು ಪಾಲ್ಗೊಂಡಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕರಾಟೆ ಒಂದು ರಕ್ಷಣಾ ಕಲೆ.ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕಲಿಯಲೇ ಬೇಕಾದ ಕ್ರೀಡೆಯಾಗಿ ಮಾರ್ಪಾಟಾಗಿದೆ.ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳನ್ನು ಗಮನಿಸಿದಾಗ, ಪ್ರತಿಯೊಂದು ಹೆಣ್ಣು ಮಗುವೂ ಈ ಕಲೆಯನ್ನು ಕಲಿತು, ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಆತ್ಮಸ್ಥೈ ರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಗುರುಕುಲ ಗ್ರೂಫ್ ಆಫ್ ಇನ್ಸಿಟೂಟ್‌ನ ಚೇರಮನ್ ಟಿ.ಎಸ್.ಮಧು ಜೈನ್ ಮಾತನಾಡಿ, ತುಮಕೂರಿನ ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್‌ನ ಕರಾಟೆಯ ಕಲೆಯನ್ನು ಹಣಗಳಿಸಲು ಬಳಕೆ ಮಾಡಿಕೊಳ್ಳದೆ, ಸೇವೆಯ ರೀತಿಯಲ್ಲಿ ಪರಿಗಣಿಸಿ, ಸಾವಿರಾರು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಇಂದು 1200ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಭಾಗವಹಿಸುತ್ತಿದ್ದು, ಅವರೆಲ್ಲಾ ಪೋಷಕರಿಗೆ ಅಭಿನಂದನೆಗಳು. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು, ಅವರಲ್ಲಿ ಏಕಾಗ್ರತೆ ಮೂಡಿಸಲು ಕರಾಟ ಒಂದು ಉಪಯುಕ್ತ ಕ್ರೀಡೆಯಾಗಿದೆ ಎಂದರು.ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ಮಾತನಾಡಿ, ಕರಾಟೆ ಎಂದರೆ ಬರಿಗೈ ನಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಕಲೆ. ಕೆಟ್ಟ ಚಟಗಳಿಗೆ ಬಲಿಯಾಗಿ ಯುವಜನತೆ ಅಡ್ಡದಾರಿ ಹಿಡಿಯುತ್ತಿರುವ ಇಂತಹ ಕಾಲದಲ್ಲಿ, ಮಕ್ಕಳಿಗೆ ಕರಾಟೆ ಕಲಿಸುವ ನಿರ್ಧಾರ ಮಾಡಿರುವ ಪೋಷಕರ ವಿವೇಚನೆ ಮೆಚ್ಚುವಂತಹದ್ದು. ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಲು ಕರಾಟೆ ಒಳ್ಳೆಯ ಕ್ರೀಡೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಅಶೀರ್ವನ ನೀಡಿ ಒಂದು ಕಾಲದಲ್ಲಿ ಶ್ರೀಮಂತರ ಕ್ರೀಡೆಯಾಗಿದ್ದ ಕರಾಟೆಯಲ್ಲಿ ಇಂದು ಗ್ರಾಮೀಣ ಭಾಗದ ಮಕ್ಕಳು ಸಾಧನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮಕ್ಕಳಲ್ಲಿ ಚುರುಕು ಮತ್ತು ಏಕಾಗ್ರತೆಯನ್ನು ಗಮನಿಸಿದರೆ,ಯಾವುದು ಅಸಾಧ್ಯವಲ್ಲ ಎಂಬಂತಿದೆ ಎಂದರು.ವೇದಿಕೆಯಲ್ಲಿ ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಪ್ರಕಾಶ್, ವೀರಶೈವ ಬ್ಯಾಂಕಿನ ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನಯ್ಯ, ವಕೀಲರ ಸಂಘದ ಹಿಮಾನಂದನ್, ನೇತಾಜಿ ಶ್ರೀಧರ್,ಬೆಳಗುಂಬ ಮಂಜುನಾಥ್, ವಿಘ್ನೇಶ್ವರ ಕಂಪರ್ಟ್ನ ಸ್ವರೂಪ್, ಮಾಜಿ ಸೈನಿಕರಾದ ಲೋಕೇಶ್ ಆಚಾರ್ಯ, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕರಾಟೆ ತರಬೇತುದಾರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))