ಸಾರಾಂಶ
ಕುಡಿದ ಅಮಲಿನಲ್ಲಿ ಶಿವಗಂಗಾ ಚಿತ್ರಮಂದಿರದಿಂದ ಪವನ್ ಎಂಬ ಯುವಕ ನಡೆದುಕೊಂಡು ಕೊರಟಗೆರೆಯ ತ್ರಿಯಂಬಕೇಶ್ವರಿ ನಗರದಲ್ಲಿ ಸುತ್ತಾಡುತ್ತಿರುವಾಗ ಮನೆ ಹತ್ತಿರ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಪೋಷಕರು ಮನೆಯಲ್ಲಿಲ್ಲದ ವಿಷಯ ತಿಳಿದು, ಬಾಲಕಿಯ ಮನೆಗೇ ಎಳೆದೊಯ್ದು ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗಿದ್ದಾನೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕುಡಿದ ಅಮಲಿನಲ್ಲಿ ಯುವಕನೊಬ್ಬ ಕುಂಟೆಬಿಲ್ಲೆ ಆಡುತ್ತಿದ್ದ 1ನೇ ತರಗತಿಯ 6 ವರ್ಷದ ಬಾಲಕಿಯನ್ನು ಬಾಲಕಿಯ ಮನೆಗೇ ಹೊತ್ತೊಯ್ದು ಅತ್ಯಾಚಾರವೆಸಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಕೊರಟಗೆರೆ ಪಟ್ಟಣದ ತ್ರಿಯಂಬಕೇಶ್ವರಿ ನಗರದಲ್ಲಿ ಈ ಘಟನೆ ಜರುಗಿದ್ದು, ಮಧುಗಿರಿ ತಾಲೂಕಿನ ಐ.ಡಿ ಹಳ್ಳಿಯ ಪವನ್ ಎಂಬ ಯುವಕ ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾನೆ.
ಕುಡಿದ ಅಮಲಿನಲ್ಲಿ ಶಿವಗಂಗಾ ಚಿತ್ರಮಂದಿರದಿಂದ ಪವನ್ ಎಂಬ ಯುವಕ ನಡೆದುಕೊಂಡು ಕೊರಟಗೆರೆಯ ತ್ರಿಯಂಬಕೇಶ್ವರಿ ನಗರದಲ್ಲಿ ಸುತ್ತಾಡುತ್ತಿರುವಾಗ ಮನೆ ಹತ್ತಿರ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಪೋಷಕರು ಮನೆಯಲ್ಲಿಲ್ಲದ ವಿಷಯ ತಿಳಿದು, ಬಾಲಕಿಯ ಮನೆಗೇ ಎಳೆದೊಯ್ದು ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗಿದ್ದಾನೆ.ಯುವಕ ಪವನ್ ಮೊದಲು 6ನೇ ತರಗತಿಯ ಬಾಲಕಿಯನ್ನು ಎಳೆದೊಯ್ಯಲು ಪ್ರಯತ್ನಿಸಿ ಆ ಮಗು ತಪ್ಪಿಸಿಕೊಂಡು ಓಡಿ ಹೋದ ಕಾರಣ, ಅಲ್ಲೇ ನಿಂತಿದ್ದ ಒಂದನೇ ತರಗತಿಯ ಆರು ವರ್ಷದ ಬಾಲಕಿಯನ್ನು ಎಳೆದೊಯ್ದು ಈ ಕೃತ್ಯವೆಸಗಿದ್ದಾನೆ. ಮನೆಯ ಬಾಗಿಲು ಹಾಕಿಕೊಂಡು ಅತ್ಯಾಚಾರವೆಸಗುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಿದ್ದ ಬಾಲಕಿ ಅಕ್ಕಪಕ್ಕದ ಜನರಿಗೆ ವಿಷಯ ತಿಳಿಸಿದಾಗ ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದ ದುರುಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿಎಸೈ ಚೇತನ್ ಗೌಡ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿ ಪವನ್ ಪೊಲೀಸ್ ವಶದಲ್ಲಿದ್ದಾನೆ ಎನ್ನಲಾಗಿದೆ.