ಸಾರಾಂಶ
ಶುಕ್ರವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಆಲದ ಮರ ಬುಡ ಸಮೇತ ರಸ್ತೆಗೆ ಉರುಳಿದ ಘಟನೆ ತಾಲೂಕಿನ ಬೇಗೂರು-ಹೆಡಿಯಾಲ ರಸ್ತೆಯ ತಾಲೂಕಿನ ಕೋಟೆಕೆರೆ ಗೇಟ್ ಬಳಿ ನಡೆದಿದೆ.
ಗುಂಡ್ಲುಪೇಟೆ: ಶುಕ್ರವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಆಲದ ಮರ ಬುಡ ಸಮೇತ ರಸ್ತೆಗೆ ಉರುಳಿದ ಘಟನೆ ತಾಲೂಕಿನ ಬೇಗೂರು-ಹೆಡಿಯಾಲ ರಸ್ತೆಯ ತಾಲೂಕಿನ ಕೋಟೆಕೆರೆ ಗೇಟ್ ಬಳಿ ನಡೆದಿದೆ. ಬೃಹತ್ ಗಾತ್ರದ ಆಲದ ಮರ ಗಾಳಿ, ಮಳೆಗೆ ಕೋಟೆಕೆರೆ ಗೇಟ್ ಬಳಿ ಧರೆಗುಳಿದ ಹಿನ್ನಲೆ ವಿದ್ಯುತ್ ಲೈನ್ ಕಟ್ ಆಗಿತ್ತು. ಅಲ್ಲದೆ ರಸ್ತೆ ಸಂಚಾರ ವ್ಯತ್ಯಯಗೊಂಡಿತ್ತು. ಶನಿವಾರ ಬೆಳಗ್ಗೆ ಚೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬಿದ್ದ ಆಲದ ಮರವನ್ನು ತೆರವುಗೊಳಿಸಿದ್ದಾರೆ. ಮರ ಉರುಳಿ ಬೀಳುವ ಸಮಯದಲ್ಲಿ ವಾಹನಗಳ ಸಂಚಾರ ವಿರಳವಾದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ವಿದ್ಯುತ್ ತಂತಿ ಕಟ್ಟಾಗಿದ್ದನ್ನು ಸರಿಪಡಿಸಲಾಗಿದೆ.
೧೧ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗೇಟ್ ಬಳಿ ಗಾಳಿ, ಮಳೆಗೆ ಆಲದ ಮರ ಧರೆಗೆ ಉರುಳಿ ಬಿದ್ದಿರುವುದು.