ಸಾರಾಂಶ
ಕೊಡದೂರ ರೈತ ಕೆಲಸ ಸತ್ಯಶೇಖರ ಖದರಗಿ ಯವರ ಹೊಲದಲ್ಲಿ ತೊಗರಿ ಸಂಪೂರ್ಣ ತೇವಾಂಶ ಕೊರತೆ ಹಾಗೂ ವಿಚಿತ್ರ ರೋಗದಿಂದ ಹಾಳಾದ ದೃಶ್ಯ.
ಕನ್ನಡಪ್ರಭ ವಾರ್ತೆ ಕಾಳಗಿ
ನಂದು 5 ಎಕರೆ ತೊಗರಿ ಬಕ್ಳ ವೈನಾಗಿತ್ರಿ, ಅದನ್ನ ನೋಡೇ 100 ಚೀಲ್ ಗ್ಯಾರಂಟಿ ಅನ್ಕೊಂಡಿದ್ದೋನಿಗೆ ಈಗ ಸಾಕ್ ಆಗಿದೆ. ರೋಗದಿಂದ ನಾಶವಾಗಿ ಒಣಗಿರೋ ತೊಗರಿ ಹೊಲ ನೋಡಿದರೆ ಜೀವ ಸೀಡಿಮಿಡಿ ಆಗ್ಲಿಕತ್ತದ, ಆದ್ರೂ ನಾವು ರೈತರು, ನಮಗ ಮಳೀನೆ ದೇವ್ರು, ಭೂಮಿತಾಯಿ ಕೈ ಬಿಡೋದಿಲ್ಲ ಅನ್ನೋ ನಂಬಿಕೆನೇ ನಮ್ಮ ಬದುಕು ಬಂಡಿ ಹಂಗೇ ಸಾಗಿಸಲಿಕ್ಕಿ ಕಾರಣ, ಈ ಬಾರಿ ಬೆಳಿ ನಾಶವಾಗಿರಬಹುದು, ಮುಂದಿನ ಬಾರಿ ಉತ್ತಮ ಫಸಲಿನ ನಿರೀಕ್ಷೆ ನನ್ನದು ಎಂದು ಕೊಡದೂರಿನ ರೈತ ಕೈಲಾಸ ಸತ್ಯಶೇಕರ ಖದರ್ಗಿ ಹೇಳುತ್ತಾರೆ.ಕೊಡದೂರಿನ ತೊಗರಿ ರೈತರು ಬೆಳೆ ಹಾಳಾದರೂ ಸಹಿತ ಏನನ್ನೂ ತೋರಗೊಡದೆ ಧೈರ್ಯದಿಂದ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ.
100 ಚೀಲ ಬರುವ ಜಾಗದಲ್ಲಿ 3 ಚೀಲನೂ ಬರ್ತಾ ಇಲ್ಲವಾದರೂ, ಇವರು ಮುಂದಿನ ಫಸಲಿನ ಕನಸು ಕಂಡು ಏನೇ ಆದರೂ ಸಾಗೋಣ ಎನ್ನತ್ತಿದ್ದಾರೆ. ತೊಗರಿ ನಂಬಿರೋ ರೈತರಿಗೆ ಸರಕಾರ ಕೈ ಹಿಡಿಯಲಿ ಎನ್ನುತ್ತಿದ್ದಾರೆ.ಸತ್ಯಶೇಖರ ಖದ್ದರಗಿ ಕೊಡದೂರ ಸರ್ವೆ ನಂ.135 ಒಟ್ಟು 25 ಏಕರೆ ಜಮೀನಿನಲ್ಲಿ ತೋಗರಿ ಬಿತ್ತನೆಗೆ ಒಟ್ಟು ಖರ್ಚು ₹1.50 ಲಕ್ಷ ರು. ವೆಚ್ಚ ಬರಿಸಲಾಗಿದೆ. ಪ್ರಾರಂಭದಲ್ಲೇ ಹಚ್ಚು ಹಸಿರಾಗಿ ಇರುವ ತೊಗರಿ ಕಂಡರೆ ಮನದಲ್ಲಿ ನೂರಾರು ಆಸೆಗಳನ್ನು ಮೂಡಿದವು. ಇಗಿರುವ ತೊಗರಿ ಬೆಳೆಯ ಪರಿಸ್ಥಿತಿ ನೋಡಿದರೆ ಆತಂಕ ಹೆಚ್ಚಿಸಿದೆ. ರೈತ ಕೈಲಾಸನ್ದು ಇದೇ ಸ್ಥಿತಿಯಾಗಿದೆ. ಈ ರೈತನ ಕಷ್ಟ ದೇವರೆ ಬಲ್ಲ, ಒಟ್ಟು 25 ಏಕರೆ ಹಾಳಾಗಿದೆ. ಬೀಜ ಗೊಬ್ಬರ, ಕೀಟನಾಶಕ, ಕಾರ್ಮಿಕರು, ಬಿತ್ತನೆ ಸೇರಿ ವೆಚ್ಚ ಮಾಡಿದ ವಿವರ ಹೇಳುತ್ತ ಅಲವತ್ತುಕೊಂಡ ರೈತರು ಕನ್ನಡಪ್ರಭ ಜೊತೆ ಮಾತನಾಡುತ್ತ ತಮಗೆ ದೇವರೇ ದಿಕ್ಕೆಂದರು.