ಕಾಯಕ ಇದ್ದರೇ ಯಾವುದೇ ಸಮಸ್ಯೆಯು ಹತ್ತಿರ ಸುಳಿಯಲಾರದು. ಅದಕ್ಕಾಗಿ ಪ್ರಚಲಿತ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಕೌಶಲ್ಯಧಾರಿತ ವೃತ್ತಿ ತರಬೇತಿ ಪಡೆದರೆ ಉತ್ತಮ ಭವಿಷ್ಯವಿದೆ.

ಉಚಿತ ಹೊಲಿಗೆ ತರಬೇತಿ, ಕುರಿ ಸಾಕಾಣಿಕೆ ತರಬೇತಿ ಶಿಬಿರಗಳಿಗೆ ಚಾಲನೆಕನ್ನಡಪ್ರಭ ವಾರ್ತೆ ಹಳಿಯಾಳ

ಕಾಯಕ ಇದ್ದರೇ ಯಾವುದೇ ಸಮಸ್ಯೆಯು ಹತ್ತಿರ ಸುಳಿಯಲಾರದು. ಅದಕ್ಕಾಗಿ ಪ್ರಚಲಿತ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿರುವ ಕೌಶಲ್ಯಧಾರಿತ ವೃತ್ತಿ ತರಬೇತಿ ಪಡೆದರೆ ಉತ್ತಮ ಭವಿಷ್ಯವಿದೆ ಎಂದು ತಾಪಂ ಇಒ ವಿಲಾಸರಾಜ್ ಪ್ರಸನ್ನ ಹೇಳಿದರು.

ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ ಉಚಿತ ಹೊಲಿಗೆ ತರಬೇತಿ ಹಾಗೂ ಕುರಿ ಸಾಕಾಣಿಕೆ ತರಬೇತಿ ಶಿಬಿರಗಳಿಗೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಕಾಲದಲ್ಲಿ ಫ್ಯಾಷನ್‌ಗೆ ಹೆಚ್ಚಿನ ಒಲವು ಇದೆ. ಹೀಗಿರುವಾಗ ಮಹಿಳೆಯರು ಇಲ್ಲಿ ಪಡೆದ ವೃತ್ತಿ ಕೌಶಲ್ಯ ತರಬೇತಿಯಿಂದ ಗ್ರಾಹಕರು ಬಯಸುವಂತಹ ಬಗೆ ಬಗೆಯ ಫ್ಯಾಷನ್‌ ಬಟ್ಟೆಗಳನ್ನು ಹೊಲಿದು ಲಾಭಗಳಿಸಿರಿ ಎಂದರು. ಕುರಿ ಸಾಕಾಣಿಕೆಯು ಅತ್ಯಧಿಕ ಲಾಭದಾಯಕ ಉದ್ಯಮವಾಗಿದ್ದು, ಉದ್ಯಮ ಸ್ಥಾಪಿಸಲು ಬೇಕಾದ ಸಹಕಾರಗಳನ್ನು ಸಂಸ್ಥೆ ಹಾಗೂ ವಿವಿಧ ಇಲಾಖೆಗಳಿಂದ ಪಡೆಯಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿಯ ನಿರ್ದೇಶಕ ಕಿರಣಕುಮಾರ ಬಗಾಡೆ ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುವ ತರಬೇತಿಯನ್ನು ಕಲಿಕೆಯಾಗಿ ನೋಡದೇ ಸ್ವ-ಉದ್ಯೋಗದ ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಬಾಳನ್ನು ಯಶಸ್ವಿಗೊಳಿಸಿರಿ ಎಂದ ಅವರು, ಸಂಸ್ಥೆಯಿಂದ ಗ್ರಾಮೀಣ ಯುವಜನರು ಹಾಗೂ ಮಹಿಳೆಯರಿಗಾಗಿ ನೀಡಲಾಗುತ್ತಿರುವ ಕೌಶಲ್ಯಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿಗಳ ಮಾಹಿತಿ ನೀಡಿದರು.

ಯೋಜನಾ ಸಂಯೋಜಕ ವಿನಾಯಕ ಚವ್ಹಾನ್ ಮಾತನಾಡಿದರು.

ಉತ್ತರಕನ್ನಡ ಜಿಪಂ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಸಹಯೋಗದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆಯು ಈ ತರಬೇತಿ ಶಿಬಿರ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಅನಿತಾ ಪಾಟೀಲ ಇದ್ದರು.

ಸಂಸ್ಥೆಯ ಉಪನ್ಯಾಸಕ ಕೊಂಡು ಕೋಕರೆ, ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಕಾರ್ಯಕ್ರಮ ನಿರ್ವಹಿಸಿದರು. ತರಬೇತಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ 25 ಶಿಬಿರಾರ್ಥಿಗಳು ಭಾಗವಹಿಸಿದ್ದರು.