ಶಿಕ್ಷಣದಿಂದ ಉತ್ತಮ ಭವಿಷ್ಯ

| Published : Feb 01 2024, 02:03 AM IST

ಸಾರಾಂಶ

ಸರ್ ಎಂ. ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆ, ವಿದ್ಯಾ ನಿಧಿ ಎಜ್ಯುಕೇಶನ್ ಫೌಂಡೇಶನ್ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ೭ನೇ ವಾರ್ಷಿಕ ಸ್ನೇಹ ಸಮ್ಮೇಳನ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರಾಥಮಿಕ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣವಾಗಲು ಶಿಕ್ಷಣ ಅವಶ್ಯಕ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಅವರ ಕಲಿಕೆ ಕಡೆಗೂ ಗಮನಹರಿಸುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾಗಿದೆ ಎಂದು ಸಾಹಿತಿ ಮೃತ್ಯುಂಜಯ ರಾಮದುರ್ಗ ಹೇಳಿದರು.

ರಬಕವಿಯ ವಿರಕ್ತಮಠದಲ್ಲಿ ಭಾನುವಾರ ಸರ್ ಎಂ. ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆ, ವಿದ್ಯಾ ನಿಧಿ ಎಜ್ಯುಕೇಶನ್ ಫೌಂಡೇಶನ್ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ೭ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಆಡಳಿತ ಮಂಡಳಿ ಶ್ರಮ, ಪಾಲಕರ ಸಹಕಾರವೂ ಅಗತ್ಯ ಎಂದರು.

ಕಸಾಪ ರಬಕವಿ ಬನಹಟ್ಟಿ ತಾಲೂಕು ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವೈಜ್ಞಾನಿಕ, ತಾಂತ್ರಿಕ, ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದರ ಜೊತೆಗೆ ಶಿಸ್ತು, ಸಮಯಪಾಲನೆ, ಅಭ್ಯಾಸದೆಡೆಗೆ ಗಮನಹರಿಸುವಂತೆ ತಿಳಿಹೇಳುವುದು ಅಗತ್ಯ ಎಂದರು.

ಶಿಕ್ಷಕರಾದ ಎಂ.ಎಸ್.ಗಡೆಣ್ಣವರ ಮಕ್ಕಳ ಗೀತೆ ಹಾಡಿದರು. ರಬಕವಿ ಸಮೂಹ ಸಂಪನ್ಮೂಲ ವ್ಯಕ್ತಿ ಶಿವಕುಮಾರ ಕೊಕಟನೂರ, ನಗರಸಭೆ ಸದಸ್ಯ ಬಸವರಾಜ ಗುಡೋಡಗಿ, ಅಶೋಕ ಕುಚನೂರ, ಡಾ.ಆನಂದ ಮಿರ್ಜಿ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ರಾಮಣ್ಣ ಹುಲಕುಂದ, ಬಸವರಾಜ ತೆಗ್ಗಿ, ಚಂದ್ರಶೇಖರ ಬಕನೆತ್ತಿ, ವಿರುಪಾಕ್ಷ ಬೆಳಗಲಿ, ಈರಣ್ಣ ಗಣಮುಖಿ ಈ ಸಂದರ್ಭದಲ್ಲಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್.ಎಂ.ಚೌಗಲಾ ಪ್ರಾರ್ಥಿಸಿದರು. ರಾಜಶ್ರೀ ಗುದಿಗೆಪ್ಪನ್ನವರ ನಿರೂಪಿಸಿದರು. ಸಂಸ್ಥೆಯ ಸಂಸ್ಥಾಪಕಿ ಎಂ.ಬಿ.ಹುಲಕುಂದ ವಂದಿಸಿದರು.