ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ರಾಷ್ಟ್ರದ ಶುದ್ಧ ಗಾಳಿ ಹೊಂದಿರುವ ನಗರಗಳ ಪೈಕಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ, ಕಸ ವಿಲೇವಾರಿ, ವಿಂಗಡಣೆ, ನಿರ್ವಹಣೆಯಲ್ಲಿ ಹಿಂದೆ ಬಿದ್ದಿದೆ.
ಚಿಕ್ಕಮಗಳೂರು ನಗರ ಶೇ.94 ರಷ್ಟು ಸಾಕ್ಷರಸ್ಥರಿದ್ದರೂ ಜಾಗೃತಿ ಕೊರತೆ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ರಾಷ್ಟ್ರದ ಶುದ್ಧ ಗಾಳಿ ಹೊಂದಿರುವ ನಗರಗಳ ಪೈಕಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ, ಕಸ ವಿಲೇವಾರಿ, ವಿಂಗಡಣೆ, ನಿರ್ವಹಣೆಯಲ್ಲಿ ಹಿಂದೆ ಬಿದ್ದಿದೆ.ಚಿಕ್ಕಮಗಳೂರು ನಗರ ಶೇ.94 ರಷ್ಟು ಸಾಕ್ಷರಸ್ಥರನ್ನು ಹೊಂದಿರುವ ನಗರವಾಗಿದೆ. ಆದರೂ ನಗರದಲ್ಲಿ ಕಸ ವಿಂಗಡಣೆ ಯಲ್ಲಿ ಹಿಂದುಳಿದಿದೆ. ನಗರದಲ್ಲಿ 33 ವಾರ್ಡ್‌ಗಳಿದ್ದು, ಪ್ರತಿ ದಿನ ಮನೆ ಮನೆಯಿಂದ ಆಟೋಗಳ ಮೂಲಕ ಕಸ ಸಂಗ್ರಹಿ ಸುವ ವ್ಯವಸ್ಥೆ ಇದೆ. ಕೆಲವು ಕಡೆ ಮಾತ್ರ ಎರಡು ದಿನಕ್ಕೆ ಒಂದು ಬಾರಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.ನಗರ ಸುಮಾರು 1.80 ಲಕ್ಷ ದಿಂದ 2 ಲಕ್ಷ ವರೆಗೆ ಜನ ಸಂಖ್ಯೆ ಹೊಂದಿದೆ ಎಂದು ಅಂದಾಜಿಸಲಾಗಿದ್ದು, ನಗರ ಸಭೆ ವ್ಯಾಪ್ತಿ ಯಲ್ಲಿ 33 ವಾರ್ಡ್‌ಗಳಿವೆ. 30 ಸಾವಿರಕ್ಕೂ ಅಧಿಕ ಆಸ್ತಿಗಳಿವೆ. ಈ ಪೈಕಿ 29,117 ವಸತಿ ಕಟ್ಟಡ, 2705 ವಾಣಿಜ್ಯ ಕಟ್ಟಡ ಹಾಗೂ 728 ಕಲ್ಯಾಣ ಮಂಟಪ, ಆಸ್ಪತ್ರೆ, ಹೋಟೆಲ್ ಮಾಲ್, ವಿವಿಧ ಶಿಕ್ಷಣ ಸಂಸ್ಥೆ ಸೇರಿದಂತೆ ಮೊದಲಾದ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ.ನಗರದಲ್ಲಿ ಪ್ರತಿ ದಿನ ಸುಮಾರು 64 ಟನ್ ನಷ್ಟು ತ್ಯಾಜ್ಯ ಸಂಗ್ರಹವಾಗಲಿದ್ದು, ಈ ಪೈಕಿ 20 ಟನ್ ನಷ್ಟು ಹಸಿ, 27 ಟನ್ ನಷ್ಟು ಒಣ ತ್ಯಾಜ್ಯ ಸಂಗ್ರಹವಾದರೆ, ಇನ್ನುಳಿದದ್ದು ಮಿಶ್ರ ತ್ಯಾಜ್ಯವಾಗಿದೆ. ತ್ಯಾಜ್ಯವನ್ನು ಭೂಭರ್ತಿ ಕ್ವಾರಿಗಳಿಗೆ ವಿಲೇವಾರಿ ಮಾಡಲಾಗುತ್ತಿದೆ.ಶೇ.50 ರಷ್ಟು ವಿಂಗಡಣೆ ಇಲ್ಲ: ಸಂಗ್ರಹ ಮಾಡುವ ತ್ಯಾಜ್ಯದಲ್ಲಿ ಶೇ.50 ರಷ್ಟು ವಿಂಗಡಣೆ ಮಾಡಿದ ತ್ಯಾಜ್ಯ ಸಂಗ್ರಹವಾಗುತ್ತಿಲ್ಲ. ಮಿಶ್ರಣ ತ್ಯಾಜ್ಯವೇ ಹೆಚ್ಚಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಹಸಿ, ಒಣ, ವೈದ್ಯಕೀಯ ತ್ಯಾಜ್ಯ ವಿಂಗಡಣೆ ಮಾಡಿದರೆ, ಹಸಿ ತ್ಯಾಜ್ಯವನ್ನು ಗೊಬ್ಬರ ಮಾಡಿ ಮಾರಾಟ ಮಾಡಬಹುದಾಗಿದ್ದು, ಒಣ ತ್ಯಾಜ್ಯ ಮರು ಬಳಕೆ ಮಾಡಬಹುದು. ಹಾಗಾಗಿ, ಪ್ರತಿ ದಿನ ಕಸ ಸಂಗ್ರಹಿಸಲು ತೆರಳುವ ಆಟೋದೊಂದಿಗೆ ಜಾಗೃತಿ ಮೂಡಿಸುವ ಸಿಬ್ಬಂದಿ ಯನ್ನು ಕಳುಹಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ರಸ್ತೆ ಬದಿ ಕಸ ಸುರಿದವರಿಗೆ ದಂಡ:ನಗರದ ಹೊರ ವಲಯದ ರಸ್ತೆ ಬದಿ ಹಾಗೂ ಖಾಲಿ ನಿವೇಶನದಲ್ಲಿ ಕಸ ಸುರಿದು ಬೆಂಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ನಿಗಾ ವಹಿಸುವುದಕ್ಕೆ ಸಿಸಿ ಟಿವಿ ಕ್ಯಾಮರಾ ಬಳಕೆ ಮಾಡಲಾಗುವುದು. ರಸ್ತೆ ಬದಿ ಕಸ ಸುರಿದವರಿಗೆ ನಗರ ಸಭೆ ಯಿಂದ ದಂಡ ವಿಧಿಸಲಾಗುವುದು.---ಬಾಕ್ಸ್--ಸ್ತ್ರೀ ಶಕ್ತಿ ಸಂಘದಿಂದ ಕಸ ಶುಲ್ಕ ವಸೂಲಿನಗರದ ವಸತಿ, ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನೂ ವಸೂಲಿ ಮಾಡಲಾಗುತ್ತಿದೆ. ಕೆಲವು ಮಾಲೀಕರು ಶುಲ್ಕ ಪಾವತಿ ಮಾಡುತ್ತಿದ್ದಾರೆ. ಕೆಲವರು ಪಾವತಿದಲ್ಲ, 2026ರ ಜನವರಿಯಿಂದ ಕಡ್ಡಾಯವಾಗಿ ಕಸ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಸ್ತ್ರೀ ಶಕ್ತಿ ಸಂಘ ಸಂಸ್ಥೆಗಳ ಕಂದಾಯ ವಸೂಲಿ ಸೇರಿದಂತೆ ಮೊದಲಾದ ಕಾರ್ಯ ಗಳಿಗೆ ಬಳಕೆಗೆ ಸರ್ಕಾರ ಆದೇಶದಂತೆ ನಗರದ ಆರಾಧ್ಯ ಸ್ತ್ರೀ ಶಕ್ತಿ ಸ್ವಸಹಾಯ ಸಂಘಕ್ಕೆ ಕಸ ಶುಲ್ಕ ವಸೂಲಿಗೆ ಗುತ್ತಿಗೆ ನೀಡಲಾಗಿದೆ. ಫೆಬ್ರವರಿಯಿಂದ ನಗರದ ಮನೆ ಮನೆಗೆ ತೆರಳಿ ಶುಲ್ಕ ವಸೂಲಿ ಮಾಡಲಿದ್ದಾರೆ. ವಸೂಲಿ ಮಾಡಿದ ಮೊತ್ತದ ಶೇ.5 ರಷ್ಟು ಹಣವನ್ನು ಸಂಘಕ್ಕೆ ನೀಡಲಾಗುವುದು ಎಂದು ಚಿಕ್ಕಮಗಳೂರು ನಗರ ಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ತಿಳಿಸಿದ್ದಾರೆ.-- ಬಾಕ್ಸ್--ಆನ್‌ಲೈನ್ ಪಾವತಿಗೆ ಮಾತ್ರ ಅವಕಾಶಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ. ಸಂಗ್ರಹವಾದ ಶುಲ್ಕ ನೇರವಾಗಿ ನಗರಸಭೆ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಸ್ಥಳದಲ್ಲಿಯೇ ಮಾಲೀಕರಿಗೆ ಶುಲ್ಕ ಪಾವತಿಸಿದ ರಸೀದಿ ನೀಡಲಾಗುತ್ತದೆ. ಮುಂಗಡ ವಾಗಿಯೂ ಶುಲ್ಕ ಪಾವತಿಸಲು ಅವಕಾಶ ನೀಡಲಾಗುತ್ತದೆ.--ಕೋಟ್ --
ಈ ಹಿಂದೆ ಗುತ್ತಿಗೆದಾರದಲ್ಲಿ ಕಸ ಸಂಗ್ರಹಣೆ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ಸಾಕಷ್ಟು ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಜನವರಿಯಿಂದ ನಗರ ಸಭೆಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಮುಂದಿನಗಳಲ್ಲಿ ಕಸದ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ.- ಬಸವರಾಜು, ಆಯುಕ್ತರು,
ನಗರಸಭೆ ಚಿಕ್ಕಮಗಳೂರು