ಸಾರಾಂಶ
ಇದು ನಿರ್ಮಾಣದ ಭವಿಷ್ಯದ ಬಗ್ಗೆ ಸಮಗ್ರ ನೋಟ ನೀಡುತ್ತದೆ. ನಕ್ಷಾ ಬಿಲ್ಡರ್ಸ್‌ಪ್ರತಿನಿಧಿಗಳು ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಬಿಲ್ಡ್ ಎಕ್ಸ್‌ಪೋ 2024 ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಟರ್ನ್ ಕೀ ವಸತಿ ಮತ್ತು ವಾಣಿಜ್ಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ನಕ್ಷಾ ಬಿಲ್ಡರ್ಸ್, ಈವೆಂಟ್ ನ ಇತಿಹಾಸದಲ್ಲಿ ಈವರೆಗೆ ಅತಿದೊಡ್ಡ ಸ್ಟಾಲ್ ಅನ್ನು ಅನಾವರಣಗೊಳಿಸಿದೆ. ಪ್ರಭಾವಶಾಲಿ 16 ಬೂತ್‌ಗಳನ್ನು ವ್ಯಾಪಿಸಿರುವ ನಕ್ಷಾ ಸ್ಟಾಲ್, ಎಕ್ಸ್ ಪೋದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.ನಗರ ಮತ್ತು ಹೊರಗಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಕ್ಷಾ ಬಿಲ್ಡರ್ಸ್ ಉಪಯೊಗಿಸುವ ನವೀನ ವಿಧಾನವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಟಾಲ್ ಅತ್ಯಾಧುನಿಕ ತಂತ್ರಜ್ಞಾನ, ಸುಸ್ಥಿರ ಪರಿಹಾರ ಮತ್ತು ಆಧುನಿಕ ಸೌಂದರ್ಯದ ಮಿಶ್ರಣ ಹೊಂದಿದೆ. ಸಂದರ್ಶಕರು ಸುಧಾರಿತ ಹೋಮ್ ಆಟೊಮೇಷನ್, ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮತ್ತು ಪ್ರೀಮಿಯಂ ಒಳಾಂಗಣ ವಿನ್ಯಾಸಗಳ ನೇರ ಪ್ರದರ್ಶನಗಳನ್ನು ಅನ್ವೇಷಿಸಬಹುದು.
ಇದು ನಿರ್ಮಾಣದ ಭವಿಷ್ಯದ ಬಗ್ಗೆ ಸಮಗ್ರ ನೋಟ ನೀಡುತ್ತದೆ. ನಕ್ಷಾ ಬಿಲ್ಡರ್ಸ್‌ಪ್ರತಿನಿಧಿಗಳು ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ. ನಿರ್ಮಾಣ ಜಗತ್ತಿನಲ್ಲಿ ಏನು ಸಾಧ್ಯ ಎಂಬುದನ್ನು ಪ್ರೇರೇಪಿಸುವುದು, ತಿಳಿಸಿ ಕೊಡುವುದು ಮತ್ತು ಪ್ರದರ್ಶಿಸುವುದು ನಮ್ಮ ಗುರಿ. ಈ ಸ್ಟಾಲ್ ನಿರೀಕ್ಷೆ ಹೆಚ್ಚಿಸುವ ಮತ್ತು ನಮ್ಮ ಗ್ರಾಹಕರಿಗೆ ಅಸಾಧಾರಣ ಮೌಲ್ಯ ತಲುಪಿಸುವ ಬದ್ಧತೆ ಹೊಂದಿದೆ.ಸಂವಾದಾತ್ಮಕ ವಲಯ, ತಜ್ಞರ ಸಮಾಲೋಚನೆ ಮತ್ತು ಬೆರಗುಗೊಳಿಸುವ ಪ್ರದರ್ಶನಗಳೊಂದಿಗೆ, ಸ್ಟಾಲ್, ಸಂದರ್ಶಕರಿಗೆ ಕಂಪನಿಯ ನವೀನ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಲು ಅನನ್ಯ ಅವಕಾಶ ಒದಗಿಸುತ್ತದೆ.
ಗುಣಮಟ್ಟ, ವೇಗ, ಸಂವಹನ ಮತ್ತು ಪ್ರಕ್ರಿಯೆ ನಕ್ಷಾ ಬಿಲ್ಡರ್ಸ್ ನ ಪ್ರಮುಖ ಮೌಲ್ಯಗಳಾಗಿದ್ದು, ಇದು ಉದ್ಯಮದಲ್ಲಿ ವಿಶ್ವಾಸಾರ್ಹತೆಗೆ ಹೆಸರಾಗಿ ತನ್ನ ಯಶಸ್ಸಿಗೆ ಕಾರಣವಾಗಿದೆ. ಈ ದಾಖಲೆ ಮುರಿಯುವ ಸ್ಥಾಪನೆಗೆ ಭೇಟಿ ನೀಡುವ ಅವಕಾಶ ಕಳೆದುಕೊಳ್ಳಬಾರದು. ಈ ಮಳಿಗೆಗೆ ಭೇಟಿ ನೀಡಿ ಹಾಗೂ ನಿರ್ಮಾಣ ಉದ್ಯಮದಲ್ಲಿ ನಕ್ಷಾ ಬಿಲ್ಡರ್ಸ್ ಗೆ ತಮ್ಮ ಗುರುತನ್ನು ನಿರ್ಮಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 70221 24411 ಸಂಪರ್ಕಿಸಬಹುದು.