ಉಪ್ಪಿನಂಗಡಿ, ಪೇಜಾವರ, ಮಠಾಧೀಶ, ವಿಶ್ವಪ್ರಸನ್ನತೀರ್ಥ, ಕೃತಿ, ‘ಸಂತ ಬದುಕಿನ ಶಬ್ದ ಪೂರ್ಣಪ್ರಜ್ಞ ವಿದ್ಯಾಪೀಠದ ವಿಶ್ವಸಂಭ್ರಮ ಬೃಹತ್ ವೇದಿಕೆಯಲ್ಲಿ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥರ 60ನೇಯ ವರ್ಷದ ನೆನಪಿಗಾಗಿ ಸಂತ ಬದುಕಿನ ಬಹುಮುಖಿ ಸಾಧನೆಗಳು ದಾಖಲಿಸಲ್ಪಟ್ಟ ಗ್ರಂಥ ಟಿ ನಾರಾಯಣ ಭಟ್ ರಾಮಕುಂಜ ವಿರಚಿತ ಕೃತಿ ‘ಸಂತ ಬದುಕಿನ ಶಬ್ದ ಶಿಲ್ಪ’ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಿಶ್ವಸಂಭ್ರಮ ಬೃಹತ್ ವೇದಿಕೆಯಲ್ಲಿ ಬಿಡುಗಡೆಗೊಂಡಿತು.ಈ ಸಂದರ್ಭ ಮಾತನಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು , ನಮ್ಮ ಗುರುಗಳಾದ ವಿಶ್ವೇಶತೀರ್ಥರನ್ನು ಬಹಳ ಹತ್ತಿರದಿಂದ ತಿಳಿದು ಅವರ ಬಗೆಗೆ ಯಾರೂ ಬರೆಯದಷ್ಟು ಏಳು ಕೃತಿಗಳನ್ನು ಬರೆದು ತನ್ನ ಅಭಿಮಾನ ಮೆರೆದಂತೆ, ನಮ್ಮ ಬಗೆಗೂ ಅವರಿಗೆ ತೋರಿದಷ್ಟೇ ಅಭಿಮಾನದಿಂದ ಬೃಹತ್ ಕೃತಿ ರಚಿಸಿ ತನ್ನ ಸಾಹಿತ್ಯ ಸಾಧನೆಯನ್ನು ನಾರಾಯಣ ಭಟ್ ಮೆರೆದಿರುವರು ಎಂದರು.ಬೆಳ್ತಂಗಡಿಯ ವಿಶ್ರಾಂತ ಪ್ರಾಂಶುಪಾಲ ಎ ಕೃಷ್ಣಪ್ಪ ಪೂಜಾರಿ ಗ್ರಂಥ ವಿಮರ್ಶಿಸಿದರು.ಗ್ರಂಥಕರ್ತ ಟಿ ನಾರಾಯಣ ಭಟ್ ಕೃತಿಯ ಬಗೆಗೆ ಮಾತನಾಡಿ, ಈ ಕೃತಿ ನನ್ನ ನಾಲ್ಕು ವರ್ಷಗಳ ಕನಸಾಗಿತ್ತು. ವಿಶ್ವೇಶತೀರ್ಥರು ನನ್ನಿಂದ ಮಾಡಿಸಿದರೆಂದು ಹೇಳಿದರು. ತಂಬಿಹಳ್ಳಿ ಮಾಧವ ತೀರ್ಥರು, ಭಾವಿ ಪರ್ಯಾಯ ಶೀರೂರು ವೇದವರ್ಧನ ಶ್ರೀಗಳು ಉಪಸ್ಥಿತರಿದ್ದರು.ಶ್ರೀ ಹರೀಶರಾಯಸ, ರಾಮಚಂದ್ರ ಉಪಾಧ್ಯ, ಯುಎಸ್ಎ ನಾಯಕ್, ಸತ್ಯನಾರಾಯಣ ಆಚಾರ್, ಬಾಲಚಂದ್ರ ತೋಳ್ಪಾಡಿ, ಶ್ರೀವತ್ಸ ಉಡುಪ, ಕೆ ಜಿ ಮುರಳಿಧರ್, ವೀರನಾರಾಯಣ ಆಚಾರ್, ಹರಿದಾಸ ಭಟ್, ನಾಗಸಂಪಿಗೆ, ವೆಂಕಟೇಶ ಬಾಯರಿ, ವೆಂಕಟರಮಣ ಆಚಾರ್ಯ, ಶಶಾಂಕ, ಆದರ್ಶ ಗೋಖಲೆ, ಅರಳು ಮಲ್ಲಿಗೆ ಪಾರ್ಥ ಸಾರಥಿ ಇವರಿಗೆ ಗೌರವ ಪ್ರತಿಗಳನ್ನು ಪೇಜಾವರ ಶ್ರೀಗಳು ವಿತರಿಸಿದರು.