ವಿದ್ಯುತ್ ತಂತಿ ತುಳಿದ ಬಾಲಕ: ಪ್ರಾಣಾಪಾಯದಿಂದ ಪಾರು

| Published : Jun 28 2024, 12:51 AM IST

ವಿದ್ಯುತ್ ತಂತಿ ತುಳಿದ ಬಾಲಕ: ಪ್ರಾಣಾಪಾಯದಿಂದ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ: ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ರಸ್ತೆಯ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಾಲಕನಿಗೆ ತಗುಲಿ ಶಾಕ್ ಹೊಡೆದ ಪರಿಣಾಮ ಆತನ ಕೈ ಮತ್ತು ಬೆನ್ನಿಗೆ ಗಾಯಗಳಾಗಿವೆ. ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ.

ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಕೊರಡಿಹಿತ್ಲು ಎಚ್.ಹೊಸೂರಿನ ಸಂತೋಷ್ (ಸಾಜು) ಮತ್ತು ಕಾವ್ಯ ದಂಪತಿ ಪುತ್ರ, ಪಟ್ಟಣದ ಕೆಪಿಎಸ್ ಶಾಲೆ ೨ನೇ ತರಗತಿ ವಿದ್ಯಾರ್ಥಿ ಕ್ರಿಶ್ ಬುಧವಾರ ಸಂಜೆ ಮನೆಗೆ ಬರುವಾಗ ಈ ಅವಘಡ ಸಂಭವಿಸಿದೆ.ಘಟನಾ ಸ್ಥಳಕ್ಕೆ ಮೆಸ್ಕಾಂ ಇಲಾಖಾಧಿಕಾರಿಗಳು, ಕೆಪಿಎಸ್ ಶಾಲೆ ಮುಖ್ಯೋಪಾಧ್ಯಾಯ ಕೆ.ಎಂ. ರುದ್ರೇಶ್ ಇತರರು ಭೇಟಿ ನೀಡಿ ವಿದ್ಯಾರ್ಥಿ ಆರೋಗ್ಯ ವಿಚಾರಿಸಿದರು. ಪ್ರಸ್ತುತ ವರ್ಷದಲ್ಲಿ ಹಲವೆಡೆ ಜಂಗಲ್ ಕಡಿಸದೆ ಇರುವುದರಿಂದ ಮರದ ಹರೆಗಳು ವಿದ್ಯುತ್ ತಂತಿ ಮೇಲೆ ಹೆಚ್ಚಾಗಿ ಬೀಳುತ್ತಿದೆ. ಮತ್ತೆ ಕೆಲವೆಡೆ ವಿದ್ಯುತ್ ತಂತಿ ಹಳೆಯದಾಗಿದ್ದರೂ ಅದನ್ನು ಬದಲಾಯಿಸದ ಪರಿಣಾಮ ಸಣ್ಣ ಹರೆ ಬಿದ್ದರೂ ತಂತಿ ಹರಿದು ಕೆಳಗೆ ಬೀಳುವ ಸಂಭವಗಳಿವೆ. ಮಳೆಗಾಲದಲ್ಲಿ ಈ ರೀತಿ ಅವಘಡಗಳುಂಟಾದಾಗ ತಂತಿ ಕೆಳಗೆ ಬೀಳುವ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆಯಾಗದೆ ಹರಿಯುವ ಮಳೆ ನೀರಿನ ಮೂಲಕ ವಿದ್ಯುತ್ ಪ್ರವಹಿಸುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಮೇಯಲು ಬರುವ ಜಾನುವಾರುಗಳು ತೊಂದರೆಗೊಳಗಾಗುವ ಸಂಭವವಿದ್ದು ಮೆಸ್ಕಾಂನವರು ಸಾರ್ವಜನಿಕ ಪ್ರದೇಶಗಳಲ್ಲಿ ಹಳೆಯ ವೈರ್‌ಗಳನ್ನು ಬದಲಾಯಿಸಲು ಕ್ರಮ ವಹಿಸಬೇಕು.ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮವಹಿಸಬೇಕು. - ಎಚ್.ಆರ್. ಜಗದೀಶ್, ನುಗ್ಗಿ ಗ್ರಾಪಂ ಸದಸ್ಯ