ಸಾರಾಂಶ
ಕನ್ನಡಪ್ರಭ ವಾರ್ತೆ ಜೋಯಿಡಾ
ಸಂಸ್ಕೃತಿ, ಆಚಾರ ವಿಚಾರ, ನಡೆ ನುಡಿ, ಇವುಗಳ ತಳಹದಿಯಲ್ಲಿ ನಮ್ಮ ಬದುಕು ರೂಪಿತವಾಗುವಂತದ್ದು, ಜಾತಿ, ಧರ್ಮ ಭೇದ ಇಲ್ಲದ ಸಾಹಿತ್ಯ ಸಂತಸಕ್ಕೆ ಮತ್ತು ಸಾಮರಸ್ಯಕ್ಕೆ ಸೇತುವೆಯಾಗಿದೆ ಎಂದು ಸಾಹಿತಿ ಸೀತಾ ದಾನಗೇರಿ ಹೇಳಿದರು.ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ದೇವರಾಜ ಅರಸು ಸಭಾ ಭವನದಲ್ಲಿ ನಡೆದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನದ ಕಾವ್ಯೋತ್ಸವ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಯುವ ವಯಸ್ಸು ಬಂಗಾರದ ವಯಸ್ಸು. ಶಿಸ್ತು, ಸಂಯಮ, ತಾಳ್ಮೆಯಿಂದ ಗುರಿಯತ್ತ ಸಾಧನೆ ಮಾಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನಾಡ ಭಾಷೆ ಕನ್ನಡ. ಇದು ಪ್ರತಿಯೊಬ್ಬರ ಆಡುಭಾಷೆ ಆಗಬೇಕು. ಸರಕಾರ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ, ಗೌರವ ನಮಗಿರಬೇಕು. ನಾಡನ್ನು ಕಟ್ಟಿದ ಮಹನೀಯರ, ಸಾಹಿತ್ಯವನ್ನು ಬೆಳೆಸಿದ ಕವಿವರ್ಯರ ಸಾಧನೆ ನೆನೆಸೋಣ, ಭಾಷೆ ಗೌರವಿಸೋಣ ಎಂದರು.
ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕಾರ್ತಿಕ ಕಾರ್ಯಕ್ರಮ ಉದ್ದೇಶ ತಿಳಿಸುತ್ತಾ, ಓದಿನಲ್ಲಿ ಆಸಕ್ತಿ ವಹಿಸಿ. ಅನ್ನ, ಬದುಕು ನೀಡುವ ನಮ್ಮ ನಾಡು, ಭಾಷೆ ಸಾಹಿತ್ಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ಇದರ ಬಗ್ಗೆ ಒಲವಿರಲಿ ಎಂದರು.ಕಾವ್ಯೋತ್ಸವದಲ್ಲಿ ವಸತಿ ನಿಲಯದ ಮಕ್ಕಳು ಕಾವ್ಯ ಗಾಯನ ಮಾಡಿದರು. ಭಾಗವಹಿಸಿದ್ದ ಏಲ್ಲಾ ವಿದ್ಯಾರ್ಥಿಗಳಿಗೆ ಸೀತಾ ದಾನಗೇರಿಯವರ ಮೌನದರಮನೆ ಸಾಹಿತ್ಯ ಪುಸ್ತಕ ಹಾಗೂ ನೋಟ್ ಬುಕ್ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಹಾಸ್ಟೇಲ್ ಮೇಲ್ವಿಚಾರಕಿ ದೇವಕ್ಕ ಲಮಾಣಿ, ತೇಜಸ್ ಗಾವಡಾ ಮುಂತಾದವರಿದ್ದರು.ಶಿಕ್ಷಕಿ ಪ್ರಿಯಾಂಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಸನ್ನ ಸ್ವಾಗತಿಸಿದರು. ವಸತಿ ನಿಲಯದ ನೂರಾರು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))