ಕನ್ನಡಪ್ರಭ ವಾರ್ತೆ ಪಾವಗಡ
ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ತೇಜಸ್ ಚಾರಿಟೆಬಲ್ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಗಾಯಿತ್ರಿಬಾಯಿ ಶಂಕರಮೂರ್ತಿ ಅವರು ಕರೆ ನೀಡಿದರು. ಶನಿವಾರ ದಿವಂಗತ ಮಂಗಲಿಬಾಯಿ ಮತ್ತು ಲಷ್ಕರ್ ನಾಯ್ಕ್ ಸವಿನೆನಪು ಹಾಗೂ ಗಾಯಿತ್ರಿಬಾಯಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಎಸ್‌ಎಸ್ ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಲಿ ಬಡತನ ಜಾಸ್ತಿ ಇದೆ. ಆರ್ಥಿಕ ಸಮಸ್ಯೆಯ ಮಧ್ಯದಯಲ್ಲಿಯೂ ಉತ್ತಮ ವ್ಯಾಸಂಗ ಮಾಡಿ,ಹೆಚ್ಚು ಅಂಕಗಳಿಸುವ ಮೂಲಕ ಉನ್ನತಾ ವ್ಯಾಸಂಗ ಮಾಡಬೇಕಿದೆ. ಬಡತನದ ಬಗ್ಗೆ ಅರಿವಿದೆ. ಬಾಲ್ಯದಲ್ಲಿ ನನ್ನ ಕುಟುಂಬಸ್ಥರು ಪಟ್ಟ ಕಷ್ಟದ ಬಗ್ಗೆ ಎಂದು ಮರೆಯಲು ಸಾಧ್ಯವಿಲ್ಲ. ನನ್ನ ಹುಟ್ಟುದಂದು ತಂದೆತಾಯಿ ಹಾಗೂ ನನ್ನ ಅತ್ತೆ ಮಾವ ಸೇರಿದಂತೆ ನನ್ನ ಪತಿಯ ಸಹಕಾರದಿಂದ ಕಳೆದ ನಾಲ್ಕು ವರ್ಷದಿಂದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಅಯೋಜಿಸಿ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಸಾಧ್ಯವಾಗಿದೆ ಎಂದರು.ಉಪನೋಂದಣಾಧಿಕಾರಿ ಶಂಕರ್ ಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಪ್ರೋತ್ಸಾಹಿಸುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ. ನನ್ನ ವ್ಯಾಸಂಗದ ಅವಧಿಯಲ್ಲಿ ನಮ್ಮ ಶಾಲೆಯ ಶಿಕ್ಷಕರು ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಪ್ರೇರಣೆಯಾಗಿದೆ. ಇದೇ ರೀತಿ ತೇಜಸ್ ಚಾರಿಟಬಲ್ ಟ್ರಸ್ಟ್ ಸಹ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಬಡತನ ಸಿರಿತನ ಇದ್ಯಾವುದು ನಿಲ್ಲುವುದಿಲ್ಲ. ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ. ಹೀಗಾಗಿ ಐಎಎಸ್ ಹಾಗೂ ಕೆಎಎಸ್ ಕೋಟಿಂಗ್ ತರಬೇತಿ ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಗಾಯಿತ್ರಿಬಾಯಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಸರ್ಕಾರ ಅನುದಾನಿತ ಶಾಲೆಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ.ಇದು ಸರಿಯಿಲ್ಲ ಎಂದು ಅವರು ಗಡಿಭಾಗದಲ್ಲಿ ಸಿಇಟಿ ಕೋಚಿಂಗ್ ಸೆಂಟರ್ ತೆರೆಯುವ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು. ವೇಳೆ ತೇಜಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಶಾಸಕ ಸೋಮ್ಲನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಮಕೃಷ್ಣನಾಯಕ್, ಬ್ಯಾಂಕ್ ವ್ಯವಸ್ಥಾಪಕ ದೇವೇಂದ್ರನಾಯ್ಕ್, ಮಂಜುನಾಥ್, ನಾಯ್ಕ್ ಶಿಕ್ಷಕ ನಾಗರಾಜ ನಾಯ್ಕ್, ತೇಜಸ್ವಿ ಹಾಗೂ ಛಲವಾದಿ ಸಮುದಾಯದ ಅಧ್ಯಕ್ಷ ಕನಿಮಪ್ಪ, ಮುಖಂಡರಾದ ಕೇಶವಚಂದ್ರದಾಸ್, ದೈಹಿಕ ಶಿಕ್ಷಣಾಧಿಕಾರಿ ಬಸವರಾಜು,ಪಳವಳ್ಳಿ ಸುಬ್ಬರಾಯಪ್ಪ ಇತರೆ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.