- ಶ್ರೀ ಬನಶಂಕರಿ ದೇವಾಲಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

- - -

ಹೊನ್ನಾಳಿ: ದುಶ್ಚಟಗಳ ದಾಸನಾದವನಿಂದ ಆ ಕುಟುಂಬದ ಉಜ್ವಲ ಭವಿಷ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಅವರಿಗೆ ಗೊತ್ತಿದ್ದರೂ ದುಶ್ಚಟದಿಂದ ದೂರವಾಗುವ ಪ್ರಯತ್ನವೇ ಮಾಡುವುದಿಲ್ಲ. ಇದು ವಿಷಾದನೀಯ ಎಂದು ರಾಂಪುರ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ನುಡಿದರು.

ತಾಲೂಕಿನ ಬುಳ್ಳಾಪುರದಲ್ಲಿ 2 ದಿನಗಳ ಕಾಲ ನಡೆದ ಶ್ರೀ ಬನಶಂಕರಿ ದೇವಾಲಯ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಿಯ ಪಲ್ಲಕ್ಕಿ ಅರ್ಪಣೆ ಕಾರ್ಯಕ್ರಮ ನಿಮಿತ್ತ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ದುಷ್ಚಟಕ್ಕೆ ಬಲಿಯಾಗಿರುವುದು ದುರಂತವೇ ಸರಿ. ಇಂಥ ಸಂದರ್ಭದಲ್ಲಿ ಕುಟುಂಬದ ಉಜ್ವಲ ಭವಿಷ್ಯದಲ್ಲಿ ಮಹಿಳೆಯರ ಪಾತ್ರ ಸಾಕಷ್ಟು ಮಹತ್ವದಿಂದ ಕೂಡಿದೆ ಎಂದರು.

ವೇದಿಕೆಯಲ್ಲಿ ರಾಂಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ್, ಸದಸ್ಯರಾದ ಮಂಜುನಾಥ್, ನಾಗರಾಜ್, ಗೋಪಾಲಪ್ಪ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


ಗುರುವಾರ ಸಂಜೆ ದೇವಾಲಯದ ಆವರಣದಲ್ಲಿ ವಾಸ್ತು ಹೋಮ, ಗಣ ಹೋಮ, ಸುದರ್ಶನ ಹೋಮ, ಮೃತ್ಯುಂಜಯ ಹೋಮ, ಗಂಗಾಪೂಜೆ, ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ ಅಲಂಕಾರ, ಚಂಡಿಕಾ ಹೋಮ ಮಹಾ ಮಂಗಳಾರತಿ ನಡೆಯಿತು. ರಾತ್ರಿ ಬೈರನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶುಕ್ರವಾರ ಗ್ರಾಮದ ಮಹಿಳೆಯರಿಂದ ಕುಂಭಾಭಿಷೇಕ, ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು.

- - -

-22ಎಚ್.ಎಲ್.ಐ22.ಜೆಪಿಜಿ:

ಧರ್ಮಸಭೆಯನ್ನು ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿ ಉದ್ಘಾಟಿಸಿದರು.