ಅರ್ಥವ್ಯವಸ್ಥೆ ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರ-ಸಚಿವ ಎಚ್‌. ಕೆ. ಪಾಟೀಲ

| Published : Mar 08 2025, 12:31 AM IST

ಅರ್ಥವ್ಯವಸ್ಥೆ ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರ-ಸಚಿವ ಎಚ್‌. ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಚೈತನ್ಯಶೀಲ ಅಭಿವೃದ್ಧಿ ಪರ ಮತ್ತು ಅರ್ಥವ್ಯವಸ್ಥೆಯನ್ನು ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರ ಆಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

ಗದಗ: ಚೈತನ್ಯಶೀಲ ಅಭಿವೃದ್ಧಿ ಪರ ಮತ್ತು ಅರ್ಥವ್ಯವಸ್ಥೆಯನ್ನು ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರ ಆಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ನ್ಯಾಯ, ಸಮಾನ ಹಂಚಿಕೆ ಮತ್ತು ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳುವ ಅಭಿವೃದ್ಧಿಶೀಲ ಮುಂಗಡ ಪತ್ರ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ, ಸಮಾಜ ಕಲ್ಯಾಣ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಮೂಲಸೌಕರ್ಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಲಾಗಿದೆ.

ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಕೃಷಿ, ರೇಷ್ಮೆ ವಲಯಗಳು ಆದ್ಯತಾ ವಲಯಗಳಾಗಿವೆ. ಕರ್ನಾಟಕ ರಾಜ್ಯದ ಮುಂಗಡ ಪತ್ರವು ಬರುವ ವರ್ಷ 5 ಲಕ್ಷ ಕೋಟಿ ದಾಟುವ ನಿರೀಕ್ಷೆಯಿದೆ. ಪ್ರಸ್ತುತ ವರ್ಷವೇ 4 ಲಕ್ಷ ಕೋಟಿಯನ್ನು ಮೀರಿದೆ. ಕರ್ನಾಟಕ ಅರ್ಥ ವ್ಯವಸ್ಥೆ ಅಭಿವೃದ್ಧಿಯತ್ತ ದಾಪುಗಾಲನ್ನಿಡುತ್ತಿದೆ.

ವಿತ್ತಿಯ ಶಿಸ್ತನ್ನು ಕಾಯ್ದುಕೊಂಡು ಕೊರತೆ ಮತ್ತು ವೆಚ್ಚಗಳನ್ನು ಸರಿದೂಗಿಸುವ ಕಾರ್ಯಕ್ರಮಗಳನ್ನು ನೀಡಲಾಗಿದೆ. ಎಲ್ಲಾ ವಲಯಗಳಲ್ಲಿ ರಸ್ತೆ ಸಂಪರ್ಕ ಮತ್ತು ಇತರ ಸಂಪರ್ಕ ವ್ಯವಸ್ಥೆಗಳನ್ನು ಆಧುನಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವಸತಿ ಅಭಿವೃದ್ಧಿಗೆ ಆದ್ಯ ಗಮನ ನೀಡಲಾಗಿದ್ದು, ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಕಾಲೋನಿಗಳ ಸಮಗ್ರ ಅಭಿವೃದ್ಧಿಯನ್ನು ಮೊಟ್ಟಮೊದಲ ಬಾರಿಗೆ ಪರಿಗಣಿಸಲಾಗಿದೆ. 100 ಕೋಟಿಗಳ ವೆಚ್ಚ ಇಂತಹ ನಿರ್ಲಕ್ಷಿತ ವರ್ಗಕ್ಕೆ ನೀಡಿರುವುದಕ್ಕೆ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದಾರೆ.