ಸಾರಾಂಶ
೧೨ನೇ ಶತಮಾನದಲ್ಲಿಯೇ ನಾಡಿನ ಅಭಿವೃದ್ಧಿಗೆ ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸುವ ಮೂಲಕ ನಾಡಿನ ಜನತೆಗೆ ಕಲ್ಯಾಣವನ್ನು ಬಯಸಿದ್ದ ಸಿದ್ದರಾಮೇಶ್ವರರ ತತ್ವ ಸಿದ್ದಾಂತ, ಚಿಂತನೆ, ಆದರ್ಶ ಹಾಗೂ ಸಾಮರಸ್ಯದ ಗುಣ ಇಂದಿನ ಯುವ ಪೀಳಿಗೆಗೆ ಬೆಳಿಸಿಕೊಂಡಲ್ಲಿ ಅವರ ಬದುಕು ಸಾರ್ಥಕ ಎಂದು ಗ್ರೇಡ್ ೨ ತಹಸೀಲ್ದಾರ್ ರಾಮಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
೧೨ನೇ ಶತಮಾನದಲ್ಲಿಯೇ ನಾಡಿನ ಅಭಿವೃದ್ಧಿಗೆ ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸುವ ಮೂಲಕ ನಾಡಿನ ಜನತೆಗೆ ಕಲ್ಯಾಣವನ್ನು ಬಯಸಿದ್ದ ಸಿದ್ದರಾಮೇಶ್ವರರ ತತ್ವ ಸಿದ್ದಾಂತ, ಚಿಂತನೆ, ಆದರ್ಶ ಹಾಗೂ ಸಾಮರಸ್ಯದ ಗುಣ ಇಂದಿನ ಯುವ ಪೀಳಿಗೆಗೆ ಬೆಳಿಸಿಕೊಂಡಲ್ಲಿ ಅವರ ಬದುಕು ಸಾರ್ಥಕ ಎಂದು ಗ್ರೇಡ್ ೨ ತಹಸೀಲ್ದಾರ್ ರಾಮಪ್ರಸಾದ್ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಭೋವಿ ಸಮುದಾಯದ ಸಂಘ ಏರ್ಪಡಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ ೮೫೨ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ೬೮ ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ ಅವುಗಳಲ್ಲಿ ಕೇವಲ ೧೬೭೯ ವಚನಗಳು ಮಾತ್ರ ಅಭಿಸಿದ್ದು, ಸಿದ್ದರಾಮೇಶ್ವರರು ಸಮಾಜಿಕವಾಗಿ ಹೆಚ್ಚು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಇಂತಹ ಸಾಧಕರ ಜಯಂತಿ ಕೇವಲ ತಾಲೂಕು ಆಡಳಿತ ಒಂದು ಇಲಾಖೆಯಲ್ಲಿ ಮಾಡದೆ ಎಲ್ಲಾ ಇಲಾಖೆಗಳಲ್ಲಿ ಜಯಂತಿ ಕಾರ್ಯಕ್ರಮ ಮಾಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಇಲಾಖೆಯ ಮಧುಸೂಧನ್, ಪಪಂ ಮುಖ್ಯಾಧಿಕಾರಿ ಉಮೇಶ್, ತಾಲೂಕು ಭೋವಿ ಸಂಘದ ಕಾರ್ಯದರ್ಶಿ ದೊಡ್ಡರಾಮಯ್ಯ, ಕಂದಾಯ ಇಲಾಖೆಯ ಬಸವರಾಜು ತಿಮ್ಮಾಪುರ್, ನಕುಲ್, ಗ್ರಾ.ಪಂ. ಅಧ್ಯಕ್ಷ ನಟರಾಜು, ಸದಸ್ಯ ನಾಗರಾಜು, ತಾಲೂಕು ಭೋವಿ ಸಮುದಾಯ ಸಂಘದ ಗೌರಾವಾಧ್ಯಕ್ಷ ಹಾಗೂ ತಾ.ಪಂ. ಮಾಜಿ ಸದಸ್ಯ ವೆಂಕಟಪ್ಪ, ಅಧ್ಯಕ್ಷ ಅಶ್ವತಪ್ಪ, ಸಮುದಾಯದ ಮುಖಂಡರಾದ ಮಂಜುನಾಥ್, ದೇವರಾಜು, ರಮೇಶ್, ಶ್ರೀನಿವಾಸ್, ಹನುಮಂತರಾಯಪ್ಪ, ರಾಜು, ರಾಮಕೃಷ್ಣಪ್ಪ, ಜುಂಜಪ್ಪ, ರಾಮಯ್ಯ, ನಾಗರಾಜಪ್ಪ, ತಿಮ್ಮರಾಜು, ಯಲ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.