ಮೇವು ತುಂಬಿದ್ದ ಬಂಡಿ‌ ಬಾವಿಗೆ ಉರುಳಿ ಎತ್ತುಗಳ ಸಾವು

| Published : Sep 14 2024, 01:51 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎತ್ತಿನ ಬಂಡಿಯಲ್ಲಿ ತೋಟದಲ್ಲಿನ ಒಣ ಮೇವು ತುಂಬಿಕೊಂಡು ಹೊರಟಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಎತ್ತುಗಳು ಬೆದರಿದ್ದು, ಮೇವು ಸಮೇತ ಎತ್ತಿನಬಂಡಿ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕವಲಗಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗ್ರಾಮದ ರೈತ ಹನುಮಂತ ದಳವಾಯಿ ಅವರಿಗೆ ಸೇರಿದ ಎತ್ತುಗಳು ಎಂದು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಎತ್ತಿನ ಬಂಡಿಯಲ್ಲಿ ತೋಟದಲ್ಲಿನ ಒಣ ಮೇವು ತುಂಬಿಕೊಂಡು ಹೊರಟಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಎತ್ತುಗಳು ಬೆದರಿದ್ದು, ಮೇವು ಸಮೇತ ಎತ್ತಿನಬಂಡಿ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕವಲಗಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗ್ರಾಮದ ರೈತ ಹನುಮಂತ ದಳವಾಯಿ ಅವರಿಗೆ ಸೇರಿದ ಎತ್ತುಗಳು ಎಂದು ಗುರುತಿಸಲಾಗಿದೆ. ತನ್ನ ಕೃಷಿ ಕಾರ್ಯಕ್ಕೆ ಬೆನ್ನೆಲುಬಾಗಿದ್ದ ಜೋಡೆತ್ತುಗಳನ್ನು ಕಳೆದುಕೊಂಡು ರೈತ ರಾಮಣ್ಣ ಸಂಕಷ್ಟಕ್ಕೆ ಸಿಲುಕಿದ್ದು, ಕಣ್ಣೀರು ಸುರಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ತಹಸೀಲ್ದಾರ್, ಪಶು ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳಾಗಲಿ, ತಾಲ್ಲೂಕಾಡಳಿತವಾಗಲಿ ನಷ್ಟಕ್ಕೆ ಸಿಲುಕಿರುವ ರೈತ ಹನುಮಂತ ದಳವಾಯಿ ಅವರ ನೆರವಿಗೆ ಧಾವಿಸಬೇಕೆಂದು ಕವಲಗಿ‌ ಗ್ರಾಮಸ್ಥರು ಒತ್ತಾಯಿಸಿದ್ದಾರೆ.