ಸಾರಾಂಶ
ನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದು ದಾವಣಗೆರೆಯ ಎಸ್.ಎಸ್. ಶಾಂತಪ್ಪ ಎಂಬವರು ನೀಡಿದ ದೂರಿನ ಆಧಾರದಲ್ಲಿ 11 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದು, ಪ್ರಕರಣ ಭಾರಿ ಕುತೂಹಲ ಮೂಡಿಸಿದೆ.
ಕೊಪ್ಪಳ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯನ್ನು ಅವರ ಸಂಬಂಧಿಕರೇ ಸಂಚಿನಿಂದ ಕೊಲೆ ಮಾಡಿದ ಆರೋಪದಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದು ದಾವಣಗೆರೆಯ ಎಸ್.ಎಸ್. ಶಾಂತಪ್ಪ ಎಂಬವರು ನೀಡಿದ ದೂರಿನ ಆಧಾರದಲ್ಲಿ 11 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದು, ಪ್ರಕರಣ ಭಾರಿ ಕುತೂಹಲ ಮೂಡಿಸಿದೆ.ವಿಜಯನಗರ ಜಿಲ್ಲೆಯ ಹಂಪಸಾಗರ ಗ್ರಾಮದ ಪ್ರದೀಪ್ ಸೇರಿದಂತೆ ೧೧ ಜನರ ವಿರುದ್ಧ ದೂರು ದಾಖಲಾಗಿದೆ.
ಏನಿದು ಘಟನೆ?: ಹಂಪಸಾಗರದ ಪ್ರವೀಣ ಎಂಬಾತ ೨೦೨೧ರ ಮೇ ೧೮ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆಸ್ಪತ್ರೆಯವರು ಮಾತ್ರೆ, ಆಹಾರ ಮತ್ತು ನೀರು ನೀಡಿದರೂ ಅದನ್ನು ರೋಗಿಗೆ ನೀಡದೇ ೧೧ ಜನರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.