ಸಾರಾಂಶ
ಸವದತ್ತಿ: ರಾಜ್ಯಾದ್ಯಂತ ಕರ್ನಾಟಕ ಸಂಭ್ರಮದ ಜ್ಯೋತಿ ರಥಯಾತ್ರೆ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪಯಣಿಸುತ್ತಿದ್ದು, 50ರ ಸಂಭ್ರಮದ ಈ ರಥಯಾತ್ರೆ ಕನ್ನಡಿಗರಿಗೆ ಹೆಮ್ಮೆ ಮೂಡಿಸಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ರಾಜ್ಯಾದ್ಯಂತ ಕರ್ನಾಟಕ ಸಂಭ್ರಮದ ಜ್ಯೋತಿ ರಥಯಾತ್ರೆ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪಯಣಿಸುತ್ತಿದ್ದು, 50ರ ಸಂಭ್ರಮದ ಈ ರಥಯಾತ್ರೆ ಕನ್ನಡಿಗರಿಗೆ ಹೆಮ್ಮೆ ಮೂಡಿಸಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಕರ್ನಾಟಕ ಸಂಭ್ರಮ-50ರ ಅಂಗವಾಗಿ ಶನಿವಾರ ಸವದತ್ತಿ ಪಟ್ಟಣದ ಎಪಿಎಂಸಿಗೆ ಆಗಮಿಸಿದ ಜ್ಯೋತಿ ರಥಯಾತ್ರೆಗೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿ ಮಾತನಾಡಿದರು.
ಕುಂಭ ಹೊತ್ತ ಮಹಿಳೆಯರು ಮತ್ತು ಮಜಲುಗಳೊಂದಿಗೆ ಜ್ಯೋತಿ ರಥಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಧಾರವಾಡಕ್ಕೆ ಬೀಳ್ಕೊಡಲಾಯಿತು.ತಹಸೀಲ್ದಾರ್ ಮಧೂಸೂದನ ಕುಲಕರ್ಣಿ, ತಾ.ಪಂ ಇಒ ಯಶವಂತಕುಮಾರ, ಗ್ರೇಡ್-2 ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ, ಶಶಿರಾಜ ವನಕಿ, ಕಸಾಪ ಅಧ್ಯಕ್ಷ ಡಾ.ವೈ.ಎಂ. ಯಾಕೊಳ್ಳಿ, ಬಿ.ವಿ.ಬಿ ನರಗುಂದ, ಬಿ.ಎನ್. ಹೊಸೂರ, ಸಿಪಿಐ ಸುರೇಶ.ಬಿ, ಎಡಿಎ ಶಿವಕುಮಾರ ಪಾಟೀಲ, ಗಿರೀಶ ಮುನವಳ್ಳಿ, ಮಲ್ಲು ಜಕಾತಿ, ಪ್ರವೀಣ ರಾಮಪ್ಪನವರ, ಸಿಡಿಪಿಒ ಸುನಿತಾ ಪಾಟೀಲ, ಸುರೇಶ ತುಪ್ಪದ, ಈರಪ್ಪ ಚಿಕ್ಕುಂಬಿ ಇತರರು ಉಪಸ್ಥಿತರಿದ್ದರು.