ಶಾಲೆಯ ಹಳೆಯ ವಿದ್ಯಾರ್ಥಿ, ಎಂಜಿನಿಯರ್ ಉಮಾಶಂಕರ್ ಅವರು 1.50 ಲಕ್ಷ ರು. ಬೆಲೆಬಾಳುವ ಎಲೆಕ್ಟ್ರಿಕಲ್ ಬೈಕ್ ನ್ನು ಉಡುಗೊರೆಯಾಗಿ ನೀಡಿ
ಕನ್ನಡಪ್ರಭ ವಾರ್ತೆ ಮೈಸೂರುವಯೋ ನಿವೃತ್ತಿಯಾದ ಹುಣಸೂರು ತಾಲೂಕು ಹೊಸಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀನಿವಾಸಗೌಡ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು, ಗ್ರಾಮದ ಯಜಮಾನರು ಹಾಗೂ ನಾಗರೀಕರು ಎಲ್ಲರೂ ಜೊತೆಗೂಡಿ ಪ್ರೀತಿಪೂರ್ವಕವಾಗಿ ಬೀಳ್ಕೊಡುಗೆ ನೀಡಿದರು.ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶಿಕ್ಷಕ ಶ್ರೀನಿವಾಸಗೌಡ ಅವರ ಸ್ನೇಹ ಬಳಗದವರು, ಹಿತೈಷಿಗಳು ಹಾಗೂ ಎಲ್ಲ ಶಿಕ್ಷಕರು ಭಾಗವಹಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ನೆಚ್ಚಿನ ಶಿಕ್ಷಕಗೆ ಉಡುಗೊರೆಇದೇ ವೇಳೆ ತನ್ನ ನೆಚ್ಚಿನ ಶಿಕ್ಷಕ ಶ್ರೀನಿವಾಸಗೌಡ ಅವರು ನಿವೃತ್ತಿಯಾದ ಹಿನ್ನೆಲೆಯ ಶಾಲೆಯ ಹಳೆಯ ವಿದ್ಯಾರ್ಥಿ, ಎಂಜಿನಿಯರ್ ಉಮಾಶಂಕರ್ ಅವರು 1.50 ಲಕ್ಷ ರು. ಬೆಲೆಬಾಳುವ ಎಲೆಕ್ಟ್ರಿಕಲ್ ಬೈಕ್ ನ್ನು ಉಡುಗೊರೆಯಾಗಿ ನೀಡಿ, ತನ್ನ ಅಭಿಮಾನ ವ್ಯಕ್ತಪಡಿಸಿದರು. ಬಸವನಹಳ್ಳಿ ಶಾಲೆಯಲ್ಲಿ ಸನ್ಮಾನವೃತ್ತಿ ಜೀವನ ಆರಂಭಿಸಿದ ಬಸವನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದರಿಂದ ಶಾಲಾ ಶಿಕ್ಷಕರು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಶಿಕ್ಷಕರ ಶ್ರೀನಿವಾಸ ಗೌಡ ಅವರನ್ನು ಆಹ್ವಾನಿಸಿ, ಅಭಿನಂದಿಸಿದರು.ಮೈಸೂರಿನ ಕ್ಯಾತಮಾರನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ 14 ವರ್ಷ ಸೇವೆ ಸಲ್ಲಿಸಿದ ನಂತರ ಹುಣಸೂರು ತಾಲೂಕಿನ ಹೊಸಪುರದ ಪ್ರಾಥಮಿಕ ಶಾಲೆ 6 ವರ್ಷ ಸೇವೆ ಸಲ್ಲಿಸಿದರು.ನನ್ನ ವೃತ್ತಿ ಪ್ರಾರಂಭದ ಬಸವನಹಳ್ಳಿ ಹಾಗೂ ನನ್ನ ವೃತ್ತಿ ಕೊನೆಗೊಂಡ ಹೊಸಪುರ ಈ ಎರಡು ಗ್ರಾಮದ ಗ್ರಾಮಸ್ಥರು, ಯಜಮಾರು, ಎಸ್. ಡಿಎಂಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು, ಸಹ ಶಿಕ್ಷಕರು ಸ್ನೇಹಿತರು, ಬಂಧುಗಳು ಸನ್ಮಾನ ಮಾಡಿದ ರೀತಿ, ತೋರಿದ ಪ್ರೀತಿ ವಿಶ್ವಾಸ. ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಿಕ್ಷಕ ಶ್ರೀನಿವಾಸಗೌಡ ತಿಳಿಸಿದ್ದಾರೆ.------------------