The 18th anniversary of the Mallikarjuna Temple in the local Goduthayi Nagar locality was celebrated with grandeur.
-ಮಲ್ಲಿಕಾರ್ಜುನ ದೇವಸ್ಥಾನದ 18ನೇ ವಾರ್ಷಿಕೋತ್ಸವ
-----ಕನ್ನಡಪ್ರಭ ವಾರ್ತೆ ಕಲಬುರಗಿ.ಇಲ್ಲಿನ ಗೋದೂತಾಯಿ ನಗರ ಬಡಾವಣೆಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ 18ನೇ ವಾರ್ಷಿಕೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲರು, ಇಂದಿನ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ನಾವು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದಾಗ ಮಾತ್ರ ನಾವು ಸಭ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.ಮಳಖೇಡ ಗ್ರಾಮದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು ಬೃಹನ ಹಿರೇಮಠ ಸಾನಿಧ್ಯವನ್ನು ವಹಿಸಿದ್ದರು. ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಉದನೂರ, ಉದ್ಯಮಿ ರಾಜಗೋಪಾಲ್ ರೆಡ್ಡಿ ಇದ್ದರು, ಅಮೋಘ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆಯ ಶಿಬಿರವನ್ನು ಆಯೋಜಿಸಲಾಗಿತ್ತು, ಡಾ. ಅಮೋಘ ಹರಸೂರ ಅವರು ಉಚಿತ ನೇತ್ರ ತಪಾಸಣೆ ನೆರವೇರಿಸಿದರು.
ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎಸ್ ಎಂ ಹೋಳಿ, ಡಾ: ಬಿ.ಎಸ್. ಮಾಲಿ ಪಾಟೀಲ್ , ಶಿವಶಂಕರ ಗಚ್ಚಿನಮಠ, ಎಂ ಆರ್ ಸಜ್ಜನ್, ಮಲ್ಲಿಕಾರ್ಜುನ್ ಪಾಟೀಲ್ ಬಿರಾಳ, ಬಸವರಾಜ ಗುದಗೆ, ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.ಫೋಟೋ- ಅಲ್ಲಂಪ್ರಭು 1 ಮತ್ತು 2