ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಭಗವದ್ಗೀತೆಯಿಂದ ಇಂದಿನ ಮಕ್ಕಳಲ್ಲಿ ಸ್ಪಷ್ಟ ಉಚ್ಚಾರಣೆ ಸಾಧ್ಯವಿದ್ದು, ಹಿಂದೆ ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರಗೀತೆಯೊಂದಿಗೆ ಭಗವದ್ಗೀತೆ ಕಂಠಪಾಠ ಕಲಿಸುವುದು ಸಾಮಾನ್ಯವಿತ್ತು. ಶ್ಲೋಕ ಪಠಣ ಲಯವಾಗಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.ಸಿಂದಗಿ ಪಟ್ಟಣದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಸಿಯ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಶ್ರೀ ಮದ್ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿ, ವಚನದೊಂದಿಗೆ ಮಕ್ಕಳು ಭಗವದ್ಗೀತೆಯನ್ನು ಓದಿ ತಿಳಿದುಕೊಳ್ಳುವಂತೆ ಹಾರೈಸಿದರು.
ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮ ನಮ್ಮ ಜೀವನಕ್ಕೆ ನೀಡಿದ ಮುಕ್ತಿಯ ಮಾರ್ಗದರ್ಶನ ಅನನ್ಯ, ಈ ಧರ್ಮಗ್ರಂಥದ ಮೂಲಕ ಜೀವನ ಶ್ರೇಷ್ಠತೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಯಂಕಂಚಿ ಹಿರೇಮಠ ಅಭಿನವ ರುದ್ರಮುನಿ ಶಿವಾಚಾರ್ಯರು ಭಗವದ್ಗೀತೆ ಹಾಗೂ ಗೀತಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮನುಷ್ಯನ ಸನ್ನಡತೆಯನ್ನು ಜಾರಿಗೆ ತರುವುದೇ ಭಗವದ್ಗೀತೆ. ದಾರಿ ತಪ್ಪುವ ಯೋಚನಾಲಹರಿಯನ್ನು ಸರಿದೂಗಿಸಲು ಭಗವದ್ಗೀತೆ ಅವಶ್ಯ. ಆತ್ಮಾವಲೋಕನ ಮಾಡಿಕೊಳ್ಳುವ ಸರಿಯಾದ ವ್ಯಕ್ತಿತ್ವ ರೂಪಿಸಲು ಭಗವದ್ಗೀತೆ ಅವಶ್ಯ ಎಂದು ಪ್ರತಿಪಾದಿಸಿದರು. ಸಂಘಟನಾ ಕಾರ್ಯದರ್ಶಿ. ಅತಿಥಿಗಳಾಗಿ ಭಾಗವಹಿಸಿದ್ದ ಮಲ್ಲು ಪೂಜಾರಿ ಅಭಿಯಾನದ ಗುರಿ ಹಾಗೂ ಉದ್ದೇಶಗಳನ್ನು ವಿಷದಪಡಿಸಿದರು.ಸಂಸ್ಥೆಯ ಅಧ್ಯಕ್ಷರಾದ ಆರ್.ಡಿ.ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ವೇಲೆ ಮದ್ಭಗವದ್ಗೀತ ಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿದ್ಯಾರ್ಥಿನಿ ಯಶೋದ ಹಂಚಿನಾಳ ಸ್ವಾಗತಿಸಿದರು, ಶಿಕ್ಷಕ ಸತೀಶ್ ಕುಲಕರ್ಣಿ ವಿರೂಪಿಸಿದರು. ಶಿಕ್ಷಕ ಸಚಿನ್ ಮಠಪತಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಮುಖ್ಯೋಪಧ್ಯಾಯರು, ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಬಳಗ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.