ಸಾರಾಂಶ
ವಾಹನದಲ್ಲಿದ್ದ ಅಡುಗೆ ಅನಿಲ ಸಾಗಾಟದ ವಿತರಕರಾದ ಮಾರುತಿ ಮತ್ತು ಪ್ರಕಾಶ ಎಂಬವರು ಸಿಲಿಂಡರ್ ಹಿಡಿದುಕೊಂಡು ಮನೆಯೊಳಗೆ ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನಕ್ಕೆ ಹಾನಿಯಾಗಿದೆ.
ಕಾರ್ನಾಡ್ ದರ್ಗಾ ರೋಡ್ ಬಳಿಯ ನಿವಾಸಿ ಶೇಕ್ ಮುಕ್ತರ್ ಎಂಬವರ ಮನೆಗೆ ಅಡುಗೆ ಅನಿಲ ಸರಬರಾಜು ಮಾಡಲು ಮನೆಯ ಹೊರಗಡೆ ವಾಹನ ನಿಲ್ಲಿಸಿದ ವೇಳೆ ಮನೆಯ ಆವರಣದಲ್ಲಿದ್ದ ಬೃಹತ್ ತೆಂಗಿನ ಮರ ವಾಹನದ ಮೇಲೆ ಬಿದ್ದಿದೆ.ಈ ಸಂದರ್ಭ ವಾಹನದಲ್ಲಿದ್ದ ಅಡುಗೆ ಅನಿಲ ಸಾಗಾಟದ ವಿತರಕರಾದ ಮಾರುತಿ ಮತ್ತು ಪ್ರಕಾಶ ಎಂಬವರು ಸಿಲಿಂಡರ್ ಹಿಡಿದುಕೊಂಡು ಮನೆಯೊಳಗೆ ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನಕ್ಕೆ ಹಾನಿಯಾಗಿದೆ.ಪಡುಪಣಂಬೂರು ಶನಿ ಮಂದಿರದ ಬಳಿಯ ಬೃಹತ್ ಗಾತ್ರದ ಅಶ್ವತ್ಥ ಮರ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತ ವ್ಯಸ್ತಗೊಂಡಿದೆ. ಇದೇ ಪರಿಸರದ ತೋಕೂರು ಶಾಲೆಯ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿಗೆ ಬಿದ್ದು ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೂಲ್ಕಿ ಪರಿಸರದಲ್ಲಿ ಗಾಳಿ ಮಳೆಗೆ ಕೆಲವೆಡೆ ಮರ ಬಿದ್ದಿದ್ದು ವಿದ್ಯುತ್ ಅಸ್ತವ್ಯಸ್ತ ಉಂಟಾಗಿದೆ.