ಕಣ್ಣಸುಳಿಯೊಳಗೆ ಸಂಕಲನದ ಕವಿತೆಗಳನ್ನು ಓದುತ್ತಾ ಹೋದಂತೆ ಕನ್ನಡದ ಖ್ಯಾತ ಪ್ರೇಮಕವಿ ಅವರ ನೆನಪು ಮೂಡುತ್ತದೆ. 66ರ ವಯಸ್ಸಿನಲ್ಲಿಯೂ ಪ್ರೀತಿ, ಪ್ರೇಮ ಹಾಗೂಬದುಕಿನ ಸೂಕ್ಷ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಸಿರುವುದು ಚೂಡಾಮಣಿಯವರ ವಿಶೇಷತೆ ಅವರ ಕವಿತೆಗಳಲ್ಲಿ ಮೃದುಸ್ವಭಾವ, ಸಹೃದಯತೆ ಮತ್ತು ಜೀವನಾನುಭವ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು. ಪ್ರೀತಿ, ಪ್ರೇಮ, ವಿರಹ, ದಾಂಪತ್ಯ, ನೈತಿಕತೆ ಹಾಗೂ ಬದುಕಿನ ವಿವಿಧ ಅನುಭವಗಳನ್ನು ಒಳಗೊಂಡ ಕವಿತೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿರುವ ಕೃತಿ "ಕಣ್ಣ ಸುಳಿಯೊಳಗೆ " ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರೀತಿ, ಪ್ರೇಮ, ವಿರಹ, ದಾಂಪತ್ಯ, ನೈತಿಕತೆ ಹಾಗೂ ಬದುಕಿನ ವಿವಿಧ ಅನುಭವಗಳನ್ನು ಒಳಗೊಂಡ ಕವಿತೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿರುವ ಕೃತಿ "ಕಣ್ಣ ಸುಳಿಯೊಳಗೆ " ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಭಿಪ್ರಾಯಪಟ್ಟರು.ನಗರದ ಶಾಂತಿನಗರ ವೃತ್ತದ ಜೀವಿತ ಟ್ರೇಡರ್ಸ್ ಹಿಂಭಾಗದಲ್ಲಿರುವ ವೀರಶೆಟ್ಟಿಯವರ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 40ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಕವಯಿತ್ರಿ ಅವರ "ಕಣ್ಣಸುಳಿಯೊಳಗೆ " ಕವನ ಸಂಕಲನ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೂಡಾಮಣಿಯವರ ಕವಿತೆಗಳಲ್ಲಿ ಬದುಕಿನ ಮಾಗಿದ ಅನುಭವಗಳು ವ್ಯಕ್ತವಾಗಿವೆ ಎಂದರು.ಕಣ್ಣಸುಳಿಯೊಳಗೆ ಸಂಕಲನದ ಕವಿತೆಗಳನ್ನು ಓದುತ್ತಾ ಹೋದಂತೆ ಕನ್ನಡದ ಖ್ಯಾತ ಪ್ರೇಮಕವಿ ಅವರ ನೆನಪು ಮೂಡುತ್ತದೆ. 66ರ ವಯಸ್ಸಿನಲ್ಲಿಯೂ ಪ್ರೀತಿ, ಪ್ರೇಮ ಹಾಗೂಬದುಕಿನ ಸೂಕ್ಷ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಸಿರುವುದು ಚೂಡಾಮಣಿಯವರ ವಿಶೇಷತೆ ಅವರ ಕವಿತೆಗಳಲ್ಲಿ ಮೃದುಸ್ವಭಾವ, ಸಹೃದಯತೆ ಮತ್ತು ಜೀವನಾನುಭವ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೃತಿಕಾರ್ತಿ, ಹಾಸನ ಜಿಲ್ಲಾ ಕದಂಬ ಸೇನೆಯ ಜಿಲ್ಲಾಧ್ಯಕ್ಷ , ಹಿರಿಯ ಸಾಹಿತಿ ಹಾಗೂ ರಾಜ್ಯ ಬರಹಗಾರರ ಬಳಗದ ಗೌರವಾಧ್ಯಕ್ಷ , ಜನನಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ , ಹಿರಿಯ ಗೈಡರ್, ಪ್ರಾಯೋಜಕ ಸೇರಿದಂತೆ ಹಲವರು ಮಾತನಾಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಗಿರಿಜಾ ನಿರ್ವಾಣಿ, ಪದ್ಮಾವತಿ ವೆಂಕಟೇಶ್, ಮಂಜುಳಾ ಪ್ರಸಾದ್, ಸರೋಜ, ಚಂದ್ರಕಲಾ ಎಂ. ಆಲೂರು, ಸುಭದ್ರಾಬಾಯಿ, ಗೊರೂರು ಅನಂತರಾಜು, ನೀಲಮ್ಮ, ವೀರಶೆಟ್ಟಿ ಹಾಗೂ ಸ್ವಾಮಿಗೌಡ ಸೇರಿದಂತೆ ಹಲವರು ಕವನ ವಾಚಿಸಿದರು. ಕವಯಿತ್ರಿ ಕಾರ್ಯಕ್ರಮ ನಿರ್ವಹಿಸಿದರು.