ಬೂದನೂರು ಉತ್ಸವಕ್ಕೆ ವರ್ಣರಂಜಿತ ತೆರೆ

| Published : Mar 04 2024, 01:23 AM IST

ಸಾರಾಂಶ

ಉತ್ಸವದ ಪ್ರಯುಕ್ತ ನಡೆದ ಸ್ಥಳೀಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಮಲ್ನಾಡ ಮೂಲೆನಾಗ ಇತ್ತೊಂದು ಸೋಮ್ನಹಳ್ಳಿ....ಚನ್ನಪ್ಪ ಚನ್ನೇಗೌಡ... ಸೇರಿದಂತೆ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದ್ದು ನೋಡುಗರನ್ನು ಆಕರ್ಷಿಸಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬೂದನೂರು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಕೂದಲೂರು ಉತ್ಸವಕ್ಕೆ ಭಾನುವಾರ ವರ್ಣ ರಂಜಿತ ತೆರೆ ಬಿದ್ದಿತು. ಸಾಂಸ್ಕೃತಿಕ ಉತ್ಸವ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಬುದನೂರು ಉತ್ಸವದಿಂದ ಹೊಸ ಬೂದನೂರಿನಲ್ಲಿ ಹೊಸ ಪರಂಪರೆ ಉದಯವಾಗಿದೆ. ಪ್ರವಾಸಿಗರಿಂದ ದೂರ ಉಳಿದಿದ್ದ ಬೂದನೂರಿನ ಶ್ರೀ ಕಾಶಿ ವಿಶ್ವನಾಥ ದೇವಾಲಯ ಹಾಗೂ ಸ್ವಾಮಿ ದೇವಾಲಯಗಳ ಕಲಾ ಸೊಬಗನ್ನು ಪರಿಚಯಿಸುವ ಪ್ರಯತ್ನದ ಫಲವಾಗಿ ಬೂದನೂರು ಉತ್ವವ ಆಯೋಜಿಸಲಾಗಿತ್ತು.

ಉತ್ಸವದ ಪ್ರಯುಕ್ತ ನಡೆದ ಸ್ಥಳೀಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಮಲ್ನಾಡ ಮೂಲೆನಾಗ ಇತ್ತೊಂದು ಸೋಮ್ನಹಳ್ಳಿ....ಚನ್ನಪ್ಪ ಚನ್ನೇಗೌಡ... ಸೇರಿದಂತೆ ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿದ್ದು ನೋಡುಗರನ್ನು ಆಕರ್ಷಿಸಿತು.

ಗುರುದೇವ ಲಲಿತಾ ಅಕಾಡೆಮಿಯ ನೃತ್ಯ ಕಲಾವಿದೆ ನವ್ಯಶ್ರೀ ಪ್ರಸ್ತುತಪಡಿಸಿದ ಮಹಿಷಾಸುರ ಮರ್ದಿನಿ ಪ್ರಸಂಗದ ಭರತನಾಟ್ಯ ಮೆಚ್ಚುಗೆಗೆ ಪಾತ್ರವಾಯಿತು‌.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಜೈ ಜೈ ಭಜರಂಗಿ..., ಒಂದು ಮಳೆಬಿಲ್ಲು, ತರವಲ್ಲ ತಗಿ ನಿನ್ನ ತಂಬೂರಿ.,, ನೀನೇ ರಾಜಕುಮಾರ.., ಕುಚಿಕು ಕುಚಿಕು...ಸೇರಿದಂತೆ ಹಲವಾರು ಹಾಡುಗಳು ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದವು.