ಸೌಲಭ್ಯ ವಂಚಿತ ವಾಣಿಜ್ಯ ಸಂಕೀರ್ಣ

| Published : Oct 22 2024, 12:04 AM IST

ಸಾರಾಂಶ

ಮಾಲೂರು ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಸೌಲಭ್ಯಗಳೇ ಇಲ್ಲ. ಇದ್ದ ಶೌಚಾಲಯವನ್ನು ಹೈಟೆಕ್‌ ಮಾಡುವುದಾಗಿ ಕೆಡವಿ ಒಂದು ವರ್ಷವಾದರೂ ಇದುವರೆಗೂ ಶೌಚಾಲಯ ನಿರ್ಮಿಸಿಲ್ಲ. ಇದರಿಂದ ಸಂರ್ಕೀಣದಲ್ಲಿರುವ ೬೦ ಮಳಿಗೆಯಲ್ಲಿರುವ ಮಹಿಳೆಯರು ಪುರುಷರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಒಂದು ವಾಣಿಜ್ಯ ಸಂರ್ಕೀಣ ನಿರ್ಮಿಸಬೇಕಾದರೆ ಮೂಲಭೂತ ಸೌಕರ್ಯ ಇದ್ದರೆ ಮಾತ್ರ ಪರವಾನಗಿ ನೀಡುವ ಇಲ್ಲಿನ ಪುರಸಭೆ ತಾನೇ ಎರಡು ದಶಕಗಳ ಹಿಂದೆ ನಿರ್ಮಿಸಿದ ೬೦ ಮಳಿಗೆಯ ಸಂರ್ಕೀಣಕ್ಕೆ ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.

ಇಲ್ಲಿನ ಪುರಸಭೆಯ ಕೊಗಳತೆಯಲ್ಲಿರುವ ಐಡಿ ಸಮಿತಿ ಸಂಕಾರ್ಣ ಪುರಸಭೆ ಆಡಳಿತದ ನಿರ್ಲಕ್ಷಕ್ಕೆ ಒಳಗಾಗಿದೆ. ಇದ್ದ ಶೌಚಾಲಯವನ್ನು ಹೈಟೆಕ್‌ ಮಾಡುವುದಾಗಿ ಕೆಡವಿ ಒಂದು ವರ್ಷವಾದರೂ ಇದುವರೆಗೂ ಶೌಚಾಲಯ ನಿರ್ಮಿಸಿಲ್ಲ. ಇದರಿಂದ ಸಂರ್ಕೀಣದಲ್ಲಿರುವ ೬೦ ಮಳಿಗೆಯಲ್ಲಿರುವ ಮಹಿಳೆಯರು ಪುರುಷರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಕಾಮಗಾರಿ ವಿಳಂಬ:

ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹೈಟೆಕ್‌ ಶೌಚಾಲಯ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ಈ ಹಿಂದೆ ೬ ಮೂತ್ರ ವಿರ್ಸಜನೆ ಬ್ಲಾಕ್‌ ಹಾಗೂ ಮೂರು ಮಲಮೂತ್ರ ವಿಸರ್ಜನೆ ಬ್ಲಾಕ್‌ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿದ್ದ ಕಟ್ಟಡವನ್ನು ಕೆಡವಿರುವ ಪುರಸಭೆ ಅಧಿಕಾರಿಗಳು ಮೂತ್ರಾಲಯಕ್ಕೆ ಕೇವಲ ತಲಾ ಎರಡು ಕೊಠಡಿಗಳನ್ನು ಪ್ರತ್ಯೇಕವಾಗಿ ನಿರ್ಮಿಸುತ್ತಿದ್ದಾರೆ.

ಈ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದ ಹಾಗೆ ಪುರಸಭೆ ಅಭಿಯಂತರ ವಿಭಾಗ ನಿರ್ಮಿಸುತ್ತಿರುವ ಈ ಶೌಚಾಲಯ ಬಗ್ಗೆ ಅಕ್ಷೇಪ ವ್ಯಕ್ತ ಪಡಿಸುತ್ತಿರುವ ಸಾರ್ವಜನಿಕರು ಉಳಿದ ಜಾಗವನ್ನು ಬಳಸಿಕೊಂಡು ಮೂತ್ರಾಲಯಕ್ಕೆ ಪ್ರತ್ಯೇಕ ಬ್ಲಾಕ್‌ ಮಾಡಬೇಕೆಂದು ಅಗ್ರಹಿಸಿದ್ದಾರೆ.

ಇಲ್ಲಿನ ಶೌಚಾಲಯದ ಕೊರತೆ ಬಗ್ಗೆ ಮಾತನಾಡಿರುವ ಮಳಿಗೆದಾರ ಭೂಪತಿ ಗೌಡ ಅವರು ಈ ಸಂರ್ಕೀಣದಲ್ಲಿ ೬೦ ಮಳಿಗೆಗಳಿದ್ದು, ತಿಂಗಳಿಗೆ ಸುಮಾರು ೩ ಲಕ್ಷ ರು ಬಾಡಿಗೆ ಸಂಗ್ರಹವಾಗುತ್ತಿದೆ. ಆದರೂ ಇಲ್ಲಿನ ಪುರಸಭೆ ಕನಿಷ್ಠ ಸೌಲಭ್ಯನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನ ಬಿಡುಗಡೆಯಾಗಿಲ್ಲ

ಈ ಬಗ್ಗೆ ಪುರಸಭೆ ಪರಿಸರ ಅಭಿಯಂತರೆ ಶಾಲಿನಿ ಅವರನ್ನು ‘ಕನ್ನಡಪ್ರಭ’ ಸಂಪರ್ಕೀಸಿದಾಗ ಕೇಂದ್ರ ಸರ್ಕಾರದ ಎಸ್ಡಿಎಂ-೨೦ ಯೋಜನೆಯಡಿ ಪಟ್ಟಣದ ಮೂರು ಕಡೆ ಸಮುದಾಯ ಶೌಚಾಲಯ ಹಾಗೂ ಐಡಿ ಸಮಿತಿಯಲ್ಲಿ ಒಂದು ಹೈಟೆಕ್‌ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದುವರೆಗೂ ಗುತ್ತಿಗೆದಾರರಿಗೆ ಒಂದು ಕಂತು ಹಣವೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಆದರೂ ಗುತ್ತಿಗೆದಾರರ ಮನವೂಳಿಸಿ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ.

ಶಿರ್ಷಿಕೆ೨೧ಕೆ.ಎಂ.ಎಲ್.ಆರ್.೨-.......ಮಾಲೂರಿನ ಪುರಸಭೆ ವಾಣಿಜ್ಯ ಸಂರ್ಕೀಣದ ಬಳಿ ಆಮೆಗತಿಯಲ್ಲಿ ಸಾಗಿರುವ ಶೌಚಾಲಯ ಕಾಮಗಾರಿ.