ಸಾರಾಂಶ
ಸಂಘಟನಾ ಚತುರ ಸುಭಾಷ ಪಾಟೀಲ ಪಕ್ಷದ ಸಂಘಟನೆಯನ್ನು ಮುಂಬರುವ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ: ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ನೀಡಿ ಕಾರ್ಯಕರ್ತರ ಶ್ರಮಕ್ಕೆ ಗೌರವ ನೀಡುವ ಪಕ್ಷ ಬಿಜೆಪಿ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. ಅವರು ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಷ ಪಾಟೀಲ ಅವರನ್ನು ಸನ್ಮಾನಿಸಿ ಮಾತನಾಡಿ, ಸಂಘಟನಾ ಚತುರ ಸುಭಾಷ ಪಾಟೀಲ ಪಕ್ಷದ ಸಂಘಟನೆಯನ್ನು ಮುಂಬರುವ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಬಿ.ಬಿ. ನರಸನವರ, ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ, ಪ್ರಪುಲ್ ಪಾಟೀಲ, ಜಿಲ್ಲಾ ಉಪಾಧ್ಯಕ್ಷೆ ರತ್ನಾ ಗೋದಿ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಜಿಲ್ಲಾ ಸಹಕಾರ ಪ್ರಕೊಷ್ಠ ಸಂಚಾಲಕ ಸುನೀಲ ಮರಕುಂಬಿ, ಮಂಡಲ ಉಪಾಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ ಹಡಪದ, ಜಿಲ್ಲಾ ಮಾಧ್ಯಮ ವಕ್ತಾರ ಎಫ್ ಎಸ್ ಸಿದ್ದನಗೌಡ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಅಮ್ಮಿನಭಾವಿ, ಮಂಡಲ ಮಾಧ್ಯಮ ವಕ್ತಾರ ದಯಾನಂದ ಪರಾಳಶೆಟ್ಟರ, ನಾಗಪ್ಪ ಮರಕುಂಬಿ, ಬಸವರಾಜ ಗುರವನ್ನವರ, ನವೀನ ತುರಮರಿ ಸದಾಶಿವ ಗೌಡ ಪಾಟೀಲ್, ಗೌಡಪ್ಪ ಹೊಸಮನಿ, ಈರಣ್ಣ ತುರಮರಿ, ಸಚಿನ್ ಕಡಿ, ಆನಂದ ತುರುಮರಿ, ನಾಗಪ್ಪ ಸಂಗೊಳ್ಳಿ, ಕುಮಾರ ಬೋರಕ್ಕನವರ, ಪ್ರವೀಣ್ ಕೊಪ್ಪದ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.