ನಾಗರೀಕರ ಹಕ್ಕು, ಕರ್ತವ್ಯಗಳ ಒಟ್ಟು ದಾಖಲೆಯೆ ಸಂವಿಧಾನ: ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ

| Published : Jan 28 2024, 01:15 AM IST

ನಾಗರೀಕರ ಹಕ್ಕು, ಕರ್ತವ್ಯಗಳ ಒಟ್ಟು ದಾಖಲೆಯೆ ಸಂವಿಧಾನ: ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರಿಕರ ಹಕ್ಕು ಹಾಗೂ ಕರ್ತವ್ಯಗಳ ಒಟ್ಟು ದಾಖಲೆಗಳೇ ನಮ್ಮ ಸಂವಿಧಾನವಾಗಿದೆ ಎಂದು ಜ್ವಾಲಾಮಾಲಿನಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಗಣ ರಾಜ್ಯೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಾಗರಿಕರ ಹಕ್ಕು ಹಾಗೂ ಕರ್ತವ್ಯಗಳ ಒಟ್ಟು ದಾಖಲೆಗಳೇ ನಮ್ಮ ಸಂವಿಧಾನವಾಗಿದೆ ಎಂದು ಜ್ವಾಲಾಮಾಲಿನಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನ ಎಂಬುದು ದೇಶಕ್ಕೆ ಭದ್ರ ಬುನಾದಿ ಇದ್ದಂತೆ. ಒಂದು ದೇಶದ ಆಡಳಿತ ವ್ಯವಸ್ಥೆ, ನಿರ್ವಹಣೆ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಎಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಸಂವಿಧಾನದಲ್ಲಿ ಶಿಕ್ಷೆ ಹಾಗೂ ಶಿಕ್ಷಣ ಅಡಕವಾಗಿದೆ. ತಪ್ಪು ಮಾಡಿದರೆ ಶಿಕ್ಷೆ. ಪರಿಪೂರ್ಣ ಜ್ಞಾನ ಪಡೆದರೆ ಶಿಕ್ಷಣವಾಗಲಿದೆ ಎಂದರು.

ವಿದ್ಯಾರ್ಥಿ ದಿಸೆಯಲ್ಲೇ ಶ್ರದ್ಧೆ ವಹಿಸಿ ಸಂಸ್ಕಾರಯುತ ಶಿಕ್ಷಣ ಪಡೆದು. ಮೌಲ್ಯಯುತ ಜೀವನ ನಡೆಸಿಕೊಂಡು ಹೋಗಲು ಪಣ ತೊಡಬೇಕು. ಭವಿಷ್ಯದಲ್ಲಿ ಗುರಿ ಇಟ್ಟುಕೊಂಡು ಸಾಧಿಸುವ ಛಲ ಅಳವಡಿಸಿಕೊಂಡರೆ ಗುರಿ ಸಾಧಿಸಲು ಸಾಧ್ಯ ಎಂದರು. ಜ್ವಾಲಾಮಾಲಿನಿ ದೇವಿ ಆಂಗ್ಲ ಮಾದ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಎಚ್‌.ಎನ್‌.ಅವಿನ ಗಣ ರಾಜ್ಯೋತ್ಸವ ಕುರಿತು ಮಾತನಾಡಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕು.ಸಂಜನ, ಶಾಲೆ ಶಿಕ್ಷಕರಾದ ಗುಣಪಾಲ್‌ ಜೈನ್‌, ಎಂ.ಆರ್.ಸುನೀತ, ವಿಜಯಕುಮಾರಿ, ಆಂಗ್ಲ ಮಾದ್ಯಮ ಶಾಲೆ ಶಿಕ್ಷಕಿಯರಾದ ಪ್ರಿನ್ಸಿ, ವಿನಯ, ಎಲ್ಜಿ. ಕಾವ್ಯ , ಜ್ಯೋತಿ,ಕು.ಪೂಜಾ ಉಪಸ್ಥಿತರಿದ್ದರು.