ಸಾರಾಂಶ
ಶಿವಮೊಗ್ಗ: ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದು ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ಶಿವಮೊಗ್ಗ: ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ ಎಂದು ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ರೋಟರಿ ನಾಯಕತ್ವ ಪ್ರಶಸ್ತಿ ಪ್ರದಾನ, ರೋಟರಿ ಅಕಾಡೆಮಿ ಫಾರ್ ಹೈಯರ್ ಲೀಡರ್ಶಿಪ್ ಅವಾರ್ಡ್ (ರಹಲಾ) ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯಲ್ಲಿ ನಿಯೋಜಿತ ಗವರ್ನರ್ ಆಗಿ ಆಯ್ಕೆಯಾಗಿರುವುದು ಸಂತಸದ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ಆ ನಿಟ್ಟಿನಲ್ಲಿ 25 ವರ್ಷದಿಂದ ರೋಟರಿ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇನೆ ಎಂದು ತಿಳಿಸಿದರು.ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಮಾತನಾಡಿದರು.
ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್, ರೋಟರಿಯ ಅಭಿನಂದನ್ ಎ.ಶೆಟ್ಟಿ, ರಾಜಾರಾಮ್ ಭಟ್, ಎನ್.ಪ್ರಕಾಶ್, ಸಹಾಯಕ ಗವರ್ನರ್ ಎಚ್.ಎಂ.ಸುರೇಶ್, ಇವೆಂಟ್ ಚೇರ್ಮನ್ ರವಿ ಕೋಟೊಜಿ, ಚಂದ್ರಶೇಖರ್ ಮೆಂಡನ್ ಸವೀನ್, ಐರೋಡಿ ರಾಮದೇವ ಕಾರಂತ, ಜಿ.ವಿಜಯ್ ಕುಮಾರ್, ರಮೇಶ, ಚುಡಾಮಣಿ ಪವಾರ್, ಈಶ್ವರ್, ಆನಂದ್, ಗುಡದಪ್ಪ ಕಸಬಿ, ಮಂಜುನಾಥ್ ರಾವ್ ಕದಂ, ಬಸವರಾಜ, ಜಯಶೀಲ ಶೆಟ್ಟಿ, ಅರುಣ್ ದೀಕ್ಷಿತ್, ಕಿಶೋರ್, ಗೀತಾ ಜಗದೀಶ್, ಧರ್ಮೇಂದ್ರ ಸಿಂಗ್ ಉಪಸ್ಥಿತರಿದ್ದರು.