ಸಾರಾಂಶ
ರಾಮನಗರ: ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಂವಿಧಾನ ವರದಿ ಅಂಗೀಕರಿಸಲ್ಪಟ್ಟ ದಿನವನ್ನು ದೇಶಾದ್ಯಂತ ಸಂವಿಧಾನ ದಿನಾಚರಣೆ ಎಂಬುದಾಗಿ ಆಚರಿಸುತ್ತಿದ್ದೇವೆ ಎಂದು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಪಟೇಲ್ ಸಿ.ರಾಜು ತಿಳಿಸಿದರು.ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ಜಿಲ್ಲಾ ನೇಗಿಲಯೋಗಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಅರಿತು, ಆ ನಿಮಯಗಳಂತೆ ಬದುಕು ರೂಪಿಸಿಕೊಳ್ಳಬೇಕು. ಅಂಬೇಡ್ಕರ್ ಸಕಲರಿಗೂ ಶ್ರೇಷ್ಠ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕನಕಪುರ ನೇಗಿಲ ಯೋಗಿ ಘಟಕದ ಅಧ್ಯಕ್ಷ ಕಾಡೇಗೌಡ ಮಾತನಾಡಿ, ಇಂದಿನ ಬದುಕು ಮತ್ತು ಜೀವನ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆಸುತ್ತಿದ್ದೇವೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸಂವಿಧಾನ ಪ್ರಜೆಗಳಿಗೆ ಉತ್ತಮ ಬದುಕು ಮತ್ತು ಜೀವನ ಕಟ್ಟಿಕೊಟ್ಟಿದೆ. ಅದಕ್ಕೆ ನಾವೆಲ್ಲರೂ ಅಂಬೇಡ್ಕರ್ ಅವರಿಗೆ ಋಣಿಗಳು ಎಂದು ಹೇಳಿದರು.ಇದೇ ವೇಳೆ ವಕೀಲ ಶಿವಣ್ಣ, ನಾಗರಾಜು ಅವರಿಗೆ ಕೆಂಗಲ್ ಹನುಮಂತಯ್ಯ ಅಭಿನಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ವಿನೋದ್ ಸಂವಿಧಾನ ಪೀಠಿಕೆಯನ್ನು ಶಾಲಾ ಮಕ್ಕಳಿಗೆ ಬೋಧಿಸಿದರು. ಜಿಲ್ಲಾ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ನ ತಿಮ್ಮೇಗೌಡ, ಶಿವಾಧ್ಯಾವೆ ಗೌಡ, ರವಿ.ಸಿ, ರಾಜೇಂದ್ರ ಬಿಳುಗುಂಬ, ಅರುಣ್ ಕುಮಾರ್ ಇತರರು ಹಾಗೂ ಶಾಲಾ ಮಕ್ಕಳಿಂದ ಸಂವಿಧಾನ ಅಂಗೀಕರಿಸಲ್ಪಟ್ಟ ವಿಧಾನದ ಬಗ್ಗೆ ಇರುವೊತ್ತಿಗೆಗಳನ್ನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಇತರರು ಹಾಜರಿದ್ದರು.
26ಕೆಆರ್ ಎಂಎನ್ 9.ಜೆಪಿಜಿರಾಮನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.