ನಾಲ್ಕು ವರ್ಷದಿಂದ ದೂರವಿದ್ದ ದಂಪತಿ ಅದಾಲತ್‌ನಲ್ಲಿ ಒಂದಾದರು!

| Published : Jul 14 2024, 01:43 AM IST / Updated: Jul 14 2024, 09:52 AM IST

ನಾಲ್ಕು ವರ್ಷದಿಂದ ದೂರವಿದ್ದ ದಂಪತಿ ಅದಾಲತ್‌ನಲ್ಲಿ ಒಂದಾದರು!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷದಿಂದ ಬೇರೆಯಿದ್ದ ದಂಪತಿ, ಶನಿವಾರ ಪಟ್ಟಣದಲ್ಲಿ ನಡೆದ ಬೃಹತ್ ಅದಾಲತ್‍ನಲ್ಲಿ ವಿಚ್ಛೇದನ ಅರ್ಜಿ ಹಿಂಪಡೆದು ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ.

 ಸೋಮವಾರಪೇಟೆ :  ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷದಿಂದ ಬೇರೆಯಿದ್ದ ದಂಪತಿ, ಶನಿವಾರ ಪಟ್ಟಣದಲ್ಲಿ ನಡೆದ ಬೃಹತ್ ಅದಾಲತ್‍ನಲ್ಲಿ ವಿಚ್ಛೇದನ ಅರ್ಜಿ ಹಿಂಪಡೆದು ಜೊತೆಯಾಗಿ ಬಾಳಲು ನಿರ್ಧರಿಸಿದ್ದಾರೆ.

ತಾಲೂಕಿನ ಐಗೂರು ಕಾಜೂರು ಗ್ರಾಮದ ನಿವಾಸಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪತಿ ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದರೆ, ಪತ್ನಿ ಸೋಮವಾರಪೇಟೆ ಪಟ್ಟಣದಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ಪಟ್ಟಣದಲ್ಲಿಯೇ ವಾಸ ಇದ್ದರು. ಇವರಿಗೆ 10 ವರ್ಷದ ಹೆಣ್ಣು ಮಗು ಹಾಗೂ 7 ವರ್ಷದ ಗಂಡು ಮಗು ಇದೆ.

ಶನಿವಾರ ಬೆಳಗ್ಗೆ ನಡೆದ ಅದಾಲತ್‍ನಲ್ಲಿ ಮಹಿಳೆಯು ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಇಬ್ಬರೂ ಒಟ್ಟಿಗೆ ಇರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶುಭಾ ಅವರು ಹೂವಿನ ಹಾರ ತರಿಸಿ, ಇಬ್ಬರೂ ಪರಸ್ಪರ ವಿನಿಮಯ ಮಾಡಿಸಿ, ಮನೆಗೆ ಕಳಿಸಿದರು. ವಕೀಲರಾದ ಪದ್ಮನಾಭ ಮತ್ತು ಮನೋಹರ್ ಅವರು ಇವರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದ್ದರು.