ವಿಷದ ಹಾವು ಕಚ್ಚಿ ಹಸು ದಾರುಣ ಸಾವು

| Published : Dec 01 2024, 01:30 AM IST

ಸಾರಾಂಶ

ವಿಷದ ಹಾವು ಕಚ್ಚಿ ಗಬ್ಬ ಹಸು ದಾರುಣ ಸಾವನ್ನಪ್ಪಿದ ಘಟನೆ ಶುಕ್ರವಾರ ಕೈಕಾಡು ಗ್ರಾಮದಲ್ಲಿ ನಡೆದಿದೆ.

ನಾಪೋಕ್ಲು: ವಿಷದ ಹಾವು ಕಚ್ಚಿ ಗಬ್ಬ ಹಸು ದಾರುಣ ಸಾವನ್ನಪ್ಪಿದ ಘಟನೆ ಶುಕ್ರವಾರ ಕೈಕಾಡು ಗ್ರಾಮದಲ್ಲಿ ಜರುಗಿದೆ.

ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದ ಬೊಳ್ಳಂಡ ಸುಬ್ಬಯ್ಯ ಎಂಬವರು ಗಬ್ಬ ಹಸುವನ್ನು ತಮ್ಮ ಗದ್ದೆಯಲ್ಲಿ ಶುಕ್ರವಾರ ಬೆಳಗ್ಗೆ ಮೇಯಲು ಬಿಟ್ಟಿದ್ದರು. ಪ್ರತಿದಿನದಂತೆ ಸಂಜೆ ಸುಬ್ಬಯ್ಯ ಅವರು ಗದ್ದೆಗೆ ತೆರಳಿ ಸಂದರ್ಭ ಹಸು ಸತ್ತು ಬಿದ್ದಿರುವುದು ಗೋಚರಿಸಿದೆ.

ಬಳಿಕ ಪಾರಾಣೆ ಪಶುವೈದ್ಯಾಧಿಕಾರಿ ಲತಾ ಅವರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪೋಸ್ಟ್ ಮಾರ್ಟಂ ಮಾಡಿದ ಸಂದರ್ಭ ವಿಷದ ಹಾವು ಕಚ್ಚಿ ಸಾವು ಸಂಭವಿಸಿರುವುದು ದೃಢಪಟ್ಟಿದೆ. ಇದರಿಂದಾಗಿ ಸುಬ್ಬಯ್ಯನವರು ಸುಮಾರು 40 ಸಾವಿರ ರು. ಮೌಲ್ಯದ ಹಸುವನ್ನು ಕಳೆದುಕೊಂಡು ನಷ್ಟಕ್ಕೆ ಗುರಿಯಾಗಿದ್ದಾರೆ.

------------------------

ಪೊನ್ನಂಪೇಟೆ: ಹುಲಿ ದಾಳಿಗೆ ಹಸು ಬಲಿಪೊನ್ನಂಪೇಟೆ : ಹುಲಿ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ಎನ್.ರಮೇಶ್ ಎಂಬವವರಿಗೆ ಸೇರಿದ ಹಸು ಮೃತಪಟ್ಟಿದ್ದು, ಹುಲಿ ಸೆರೆಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು. ಹುಲಿ ದಾಳಿಗೆ ಬಲಿಯಾಗಿರುವ ಹಸುವಿನ ಮೃತದೇಹವಿಟ್ಟು ಪ್ರತಿಭಟನೆ ಮಾಡಲಾಯಿತು.ಕಳೆದ ಎರಡು ತಿಂಗಳಿಂದ ಗ್ರಾಮದಲ್ಲಿ ಹುಲಿ ಓಡಾಡುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಕಾರ್ಮಿಕರು ತೋಟದ ಕೆಲಸಕ್ಕೂ ಜನತೆ ಹೋಗಲು ಭಯಪಡುವಂತಾಗಿದ್ದು, ರಜೆ ಮಾಡಿ ಮನೆಯಲ್ಲಿ ಉಳಿಯುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಆತಂಕ ಉಂಟಾಗಿದೆ.ಆದಷ್ಟು ಶೀಘ್ರ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.