ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರ ವಲಯದ ರೈತರ ಜಮೀನಿನಲ್ಲಿರುವ ಬಾವಿ (ಕೃಷಿಹೊಂಡ)ಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಮೊಸಳೆಯನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪಾಂಡವಪುರ:
ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರ ವಲಯದ ರೈತರ ಜಮೀನಿನಲ್ಲಿರುವ ಬಾವಿ (ಕೃಷಿಹೊಂಡ)ಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಮೊಸಳೆಯನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಮಂಗಳವಾರ ಬೆಳಗ್ಗೆ ಗ್ರಾಮದ ಮನೋಜ್ ಎಂಬ ರೈತನ ಜಮೀನಿ ಬಳಿ ಇರುವ ಬಾವಿಯಲ್ಲಿ ಮೊಳಸೆ ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಮನೋಜ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಅನಿತಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ರಾತ್ರಿ ಇಡೀ ಬಾವಿಯಲ್ಲಿದ್ದ ನೀರನ್ನು ಮೋಟರ್ ಮೂಲಕ ಹೊರಹಾಕಿ ಬಳಿಕ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವಿ.ಆರ್.ಧಮೇಂದ್ರ, ಎಂ.ಸಿ.ಯೋಗೇಶ್, ಸಿಬ್ಬಂದಿ ಯೋಗೇಶ್, ಕುಮಾರ್‌ಲಾಭಾಣಿ, ಬಸವರಾಜು, ಸರೋಜ, ಅಂತನಹಳ್ಳಿ ಆರ್.ಕುಮಾರ್, ಸ್ವಾಮಿ, ಅಂತನಹಳ್ಳಿ ಅಭಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮೀರಮಡಿವಾಳ ಮಾಚಿದೇವ ಸಂಘ ಸಮಾಜದ ಒಳಿತಿಗೆ ಕೆಲಸ: ವಿನಯ್ ಕುಮಾರ್ಮಂಡ್ಯ: ಶ್ರೀವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಸಂಘವು ಸಮಾಜದ ಒಳಿತಿಗೆ ಕೆಲಸ ಮಾಡುತ್ತಿದೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆಯು ಸಂಘದ ಸದಸ್ಯರ ಸಂಖ್ಯೆ ದುಪ್ಪಟ್ಟಾಗಿ ಎಲ್ಲ ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಲೆಂದು ಆಶಯ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷ ಗುರುರಾಜ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಘ ಉತ್ತಮವಾಗಿ ನಡೆಯುತ್ತಿದೆ. ಇದೀಗ 587 ಸದಸ್ಯರನ್ನು ಹೊಂದಿದೆ. ಆರ್ಥಿಕವಾಗಿ ಸದಸ್ಯರಿಗೆ ಸಾಕಷ್ಟು ನೆರವಾಗಿ ಇತರೆ ಸಹಕಾರ ಸಂಘಗಳಿಗೆ ಸಮನಾಗಿ ಕೆಲಸ ಮಾಡುತ್ತಿದೆ ಎಂದರು.
ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಸಂಘದಿಂದ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆ.ಆರ್.ಪೇಟೆ ಹಾಗೂ ಮಳವಳ್ಳಿ ತಾಲೂಕಿನಲ್ಲಿ ಸಮುದಾಯದವರ ಬೇಡಿಕೆಯಂತೆ ಘಟಕಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಸಿಇಒ ಆಶಾ, ನಿರ್ದೇಶಕರಾದ ರಾಜು, ಮರಳಗಾಲ ಮಂಜುನಾಥ್, ನರಸಿಂಹಯ್ಯ, ಜಯಲಕ್ಷ್ಮಿ, ಮಂಜುನಾಥ್ ಇದ್ದರು.