ಸಾರಾಂಶ
ಗಂಜಾಂನ ಶ್ರೀನಿಮಿಷಾಂಬ ದೇಗುಲಕ್ಕೆ ವರ್ಷಾರಂಭದಂದು ದೇವಾಲಯಗಳಿಗೆ ಭಕ್ತರ ದಂಡೇ ಆಗಮಿಸಿತ್ತು. ಅಲ್ಲದೇ, ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಕೋಟೆ ಆಂಜನೇಯ, ಪಟ್ಟಣದ ಶ್ರೀಲಕ್ಷ್ಮಿ ದೇವಿ, ಗಂಗಾಧರೇಶ್ವರಸ್ವಾಮಿ ದೇವಾಲಯದ ಸೇರಿದಂತೆ ವಿವಿಧ ದೇವಾಲಯಗಳಿಗೆ ಸಹಸ್ರಾರು ಮಂದಿ ಭಕ್ತರು ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
2025ರ ಹೊಸ ವರ್ಷದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷವನ್ನು ಆಚರಿಸಿದರು.ಗಂಜಾಂನ ಶ್ರೀನಿಮಿಷಾಂಬ ದೇಗುಲಕ್ಕೆ ವರ್ಷಾರಂಭದಂದು ದೇವಾಲಯಗಳಿಗೆ ಭಕ್ತರ ದಂಡೇ ಆಗಮಿಸಿತ್ತು. ಅಲ್ಲದೇ, ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಕೋಟೆ ಆಂಜನೇಯ, ಪಟ್ಟಣದ ಶ್ರೀಲಕ್ಷ್ಮಿ ದೇವಿ, ಗಂಗಾಧರೇಶ್ವರಸ್ವಾಮಿ ದೇವಾಲಯದ ಸೇರಿದಂತೆ ವಿವಿಧ ದೇವಾಲಯಗಳಿಗೆ ಸಹಸ್ರಾರು ಮಂದಿ ಭಕ್ತರು ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು.
ಆಸ್ತಿಕರು ದೇವಾಲಯಗಳಗೆ ಭೇಟಿ ನೀಡಿದರೆ, ನಾಸ್ತಿಕ ಮಂದಿ ಕೆಆರ್‌ಎಸ್ ನ ಬೃಂದಾವನ, ಕಾವೇರಿ ಸಂಗಮ, ಟಿಪ್ಪು ಬೇಸಿಗೆ ಅರಮನೆ ಟಿಪ್ಪು ಸಮಾದಿ ಗುಂಬಸ್, ಶ್ರೀರಂಗನ ತಿಟ್ಟು ಪಕ್ಷಿಧಾಮದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವರ್ಷಾಚರಣೆ ಆಚರಿಸಿದರು.ಹಲವೆಡೆ ನಿಷೇಧಾಜ್ಞೆ, ಬಿಕೋ ಎನ್ನುತ್ತಿದ್ದ ತಾಣ:
ವರ್ಷಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರಗಳು, ಬೆಟ್ಟಗಳ ಬಳಿ ಮೋಜು ಮಸ್ತಿಗಾಗಿ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಸಾವು, ನೋವು ಸಂಭವಿಸದಂತೆ ಹಾಗೂ ಅಹಿತಕರ ಘಟನೆಗಳ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕು ಆಡಳಿತ ಪ್ರವಾಸಿಗರಿಗೆ ಪ್ರವೇಶ ನಿರ್ಭಂದಿಸಿ ನಿಷೇಧಾಜ್ಞೆ ಹೊರಡಿಸಿತ್ತು. ಹಾಗಾಗಿ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು.ಪಟ್ಟಣ ಸಮೀಪದ ಕರೀಘಟ್ಟ, ಬಲಮುರಿ ಪ್ರವೇಶ ನಿರ್ಭಂಧ ಹೇರಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕೆಲವು ಪ್ರವಾಸಿಗರು ಬಲಮುರಿಗೆ ಆಗಮಿಸಿದರೂ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರಿಂದ ಪ್ರವೇಶ ದ್ವಾರದದಿಂದ ಬಂದ ದಾರಿಗೆ ಶುಂಕವಿಲ್ಲ ಎಂಬಂತೆ ವಾಪಸ್ ತೆರಳಿದರು.
ಈ ಬಾರಿ ಕಾವೇರಿ ನದಿ ತೀರದ ಪ್ರವಾಸಿತಾಣಗಳಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಬಲಮುರಿ, ಕಾವೇರಿ ಸಂಗಮ, ಗೋಸಾಯಿಘಾಟ್ ಸೇರಿದಂತೆ ಕಾವೇರಿ ನದಿ ಪ್ರದೇಶಗಳು ಹೆಚ್ಚಿನ ನಿರ್ಭಂದ ಹೇರಿದ್ದ ಪರಿಣಾಮ ಪ್ರವಾಸಿಗರಿಲ್ಲದೆ ಪ್ರವಾಸಿ ತಾಣಗಳು ಭಣಗುಟ್ಟುತ್ತಾ ಬಿಕೋ ಎನ್ನುತ್ತಿದ್ದವು.