ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025 ಅಂಗವಾಗಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.ಪುನೀತ್ ರಾಜಕುಮಾರ್ ಜತೆಗಿನ ಸ್ನೇಹ ನೆನೆದ ರಾಜೇಶ ಅವರು, ಬೊಂಬೆ ಹೇಳತೈತಿ, ಮತ್ತೆ ಹೇಳತೈತಿ ನೀನೇ ರಾಜಕುಮಾರಾತೆಂಬ ಗೀತೆ ಹಾಡುತ್ತ ಸಹಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಸೇರಿದ್ದ ಪ್ರೇಕ್ಷಕರು ಮೊಬೈಲ್ ಟಾರ್ಚ್ ಹಚ್ಚಿ ಹೆಜ್ಜೆ ಹಾಕಿದರು. ಅನೇಕ ಹಾಡುಗಳು ಕೇಳುಗರ ಮನ ರಂಜಿಸಿದವು.
ಗಾಯಕ ಚಿನ್ಮಯ್ ತ್ರೇಯಾ ಹಾಗೂ ಗಾಯಕಿ ಸುಹಾನ್ ಸಯ್ಯದ್, ಗಾಯಕಿ ಪ್ರಥ್ವಿ ಭಟ್ ಅವರ ಹಾಡುಗಳು ಮೋಡಿ ಮಾಡಿದವು. ಸಿನಿಮಾ ಹಾಡು, ಭಜನಾ ಪದ, , ಮಂಡಳಿಯ ಭಜನೆ, ಜ್ಯೋತಿರ್ಲಿಂಗ್ ಹೊನಕಟ್ಟಿ ಅವರ ತತ್ವಪದ, ಆನಂದ ಮುರ್ಕಿಭಾವಿ ಅವರ ಭಾವಗೀತೆ, ಪ್ರಿಯಾಂಕ ಸರಶೆಟ್ಟಿ ಅವರ ನೃತ್ಯ, ಪರಶುರಾಮ ನಾವಲಗಿ ಶಹನಾಯಿ, ಅಪ್ಪಣ್ಣ ರಾಮದುರ್ಗ ಚಿಲ್ಲರ್ ತಂಡದವರಿಂದ ಹಾಸ್ಯದ ಹೊನಲು, ನುಂಕೇಶ ತಂಡದಿಂದ ಜಾನಪದ ಸಂಗೀತ, ಜಯದೇವಿ ಜಂಗಮಶೆಟ್ಟಿ ಅವರ ಸುಗಮ ಸಂಗೀತ, ಜಾಹ್ನವಿ ಐತಾಳ ಮತ್ತು ತಂಡದ ನೃತ್ಯ ರೂಪಕ, ಸಂಗೊಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ರೂಪಕ, ಯಲ್ಲಪ್ಪ ತಿಗಡಿ ತಂಡದಿಂದ ಶ್ರೀಕೃಷ್ಣ ಪಾರಿಜಾತ ಸೊಗಸಾಗಿ ಮೂಡಿ ಬಂದವು.ಎರಡನೇ ದಿನದ ಸಂಗಿತೋತ್ಸವದಲ್ಲಿ ಮಲ್ಲಿಕಾರ್ಜುನ ಭಜನಾ ಸಂಘ, ತಿಗಡಿ ಪ್ರಕಾಶ ಹೊಳೆಚಿ ಅವರಿಂದ ಭಜನಾ ಪದ, ಭರಮದೇವರ ಗಾಯನ ಸಂಘದಿಂದ ಡೊಳ್ಳಿನ ಹಾಡು, ಚಂದ್ರಶೇಖರ ಗೊರವಳ ಅವರ ಜಾನಪದ ಸಂಗೀತ, ಖಾಸಿಂ ಅಲಿ ತಂಡದವರಿಂದ ಸಂಗೀತ ವೈವಿಧ್ಯ, ಪಂಡಿತ ನರಸಿಂಹಲು ವಡವಾಟಿ ಅವರ ಕ್ಲಾರಿಯೋನೆಟ್ ವಾದನ, ನೈನಾ ಗಿರಿಗೌಡರ ಅವರ ಸುಗಮ ಸಂಗೀತ, ಸಂಭ್ರಮ ಡಾನ್ಸ್ ಅಕಾಡೆಮಿಯ ನೃತ್ಯ ವೈವಿಧ್ಯ, ಸಂಗೊಳ್ಳಿಯ ಶ್ರೀಸಾಯಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಜಾನಪದ ನೃತ್ಯ, ಮಂಜುಳಾ ಗುರವ ಅವರಿಂದ ಸಂಗೀತ, ಆನಂದ ಬಡಿಗೇರ ಅವರ ಚಿತ್ರಕಲೆ, ಚಲನಚಿತ್ರ ಗಾಯಕಿ ಶಮಿತಾ ಮಲ್ನಾಡ ತಂಡದಿಂದ ರಸಮಂಜರಿ, ರಂಗಮಿತ್ರ ಅಲ್ತಾಪ ತಂಡದಿಂದ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ನಡೆಯಿತು.