ಸಾರಾಂಶ
ಕನಕದಾಸ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿದ ಹುಕ್ಕೇರಿಮಠದ ಸ್ವಾಮೀಜಿ
ಕನ್ನಡಪ್ರಭ ವಾರ್ತೆ ಬ್ಯಾಡಗಿಸಂಸ್ಕಾರಯುತ ಶಿಕ್ಷಣ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗಲಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು.
ತಾಲೂಕಿನ ಕಾಗಿನೆಲೆ ಗ್ರಾಮದ ಕನಕದಾಸ ಪ್ರೌಢಶಾಲೆಯಲ್ಲಿ ೨೦೦೧ ಮತ್ತು ೦೨ನೇ ಸಾಲಿನ ೧೦ನೇ ತರಗತಿ ವಿದ್ಯಾ ರ್ಥಿಗಳಿಂದ ಆಯೋಜನೆ ಮಾಡಲಾಗಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕವಾಗಿ ನಾವೇಷ್ಟೇ ಮುಂದುವರೆದಿದ್ದರೂ ಸಹ ಸಂಸ್ಕೃತಿಯ ಬೇರುಗಳಿಂದ ನಾವು ಬೇರೆಯಾಗಿಲ್ಲ, ಗುರು ಪರಂಪರೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಕಳಸವಾಗಿದೆ ಎಂದರು.ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ರವೀಂದ್ರ ಮುಡದೇವಣ್ಣನವರ ಮಾತನಾಡಿ, ತಮ್ಮ ಭವಿಷ್ಯ ರೂಪಿಸಿದ ಗುರುಗಳ ಚರಣಕ್ಕೆ ವಂದಿಸುವ ಮೂಲಕ ವಿದ್ಯಾರ್ಥಿಗಳು ಗುರು ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುರುವಂದನ ಸಮಾರಂಭಗಳು ಹೆಚ್ಚಾಗುತ್ತಿರುವುದು ಸಹ ಉತ್ತಮ ಬೆಳವಣಿಗೆಯಾಗಿದೆ. ಗುರುಗಳನ್ನ ಗೌರವಿಸುವುದು ಶ್ರೇಷ್ಠ ಕಾರ್ಯವಾಗಿದ್ದು, ಈ ಪರಂಪರೆ ಹೀಗೆ ಮುಂದುವರೆಯಲಿ. ಹರ ಮುನಿದರು ಗುರು ಕಾಯುವನು ಎಂಬ ಮಾತು ಸರ್ವಕಾಲಿಕ ಸತ್ಯ ಎಂಬುದನ್ನ ಪ್ರತಿ ವಿದ್ಯಾರ್ಥಿಯು ಅರಿಯುವಂತಾಗಲಿ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿನಿ ಕರಬಸಮ್ಮ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮಲ್ಲಿ ಎಲ್ಲ ಗುರುಗಳನ್ನ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಯಶೋದಾ ಮೂಡದೇವಣ್ಣನವರ, ಅರವಿಂದ್ ಕುಲಕರ್ಣಿ, ಫಕ್ಕೀರಪ್ಪ ಪೂಜಾರ, ಪ್ರೇಮ ಪಾಟೀಲ, ಯಲಪ್ಪ ಗುರೆಮಟ್ಟಿ, ನಿಂಗಪ್ಪ ಕರಿಗಾರ, ಸುರೇಶ ಬ್ಯಾಡಗಿ, ನಾಗರಾಜ ಕರಿಗಾರ, ಸಿ.ಬಿ. ಪಾಟೀಲ ಸೇರಿದಂತೆ ಗಂಗಾಧರ ಪಿ., ಮಾರುತಿ ಪೂಜಾರ, ಪರಶುರಾಮ ಶಿಂಧೆ, ನರಶಿಂಗ ರಜಪೂತ, ಶಿಲ್ಪಾ ನರೇಗಲ್, ಪ್ರಕಾಶ ಹಳೆಯ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕ ವೃಂದ ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು.