ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ನೆರವಾದ ಮಾಹಿತಿ ಕೋಶ

| Published : Dec 06 2023, 01:15 AM IST

ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ನೆರವಾದ ಮಾಹಿತಿ ಕೋಶ
Share this Article
  • FB
  • TW
  • Linkdin
  • Email

ಸಾರಾಂಶ

)ಗದಗ ಜಿಲ್ಲಾಡಳಿತ ಭವನದಲ್ಲಿ ಹೊಸದಾಗಿ ಪ್ರಾರಂಭಿಸಿದ ಮಾಹಿತಿ ಕೋಶ ಕಚೇರಿ ಕೆಲಸ ಕಾರ್ಯಗಳ ಹಾಗೂ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವಲ್ಲಿ ಸಾರ್ವಜನಿಕರಿಗೆ ನೆರವಾಗಿದೆ. ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಆಗಮಿಸಿದಲ್ಲಿ ಎದುರಿಗೆ ಸಹಾಯವಾಣಿ ಕೇಂದ್ರದ ಬಲ ಭಾಗದಲ್ಲಿ ಕಂಟ್ರೋಲ್ ರೂಮ್, ಎಡ ಭಾಗದಲ್ಲಿ ಮಾಹಿತಿ ಕೋಶ ಮೂಲಕ ಮಾಹಿತಿ ಕೋಶದ ಪಕ್ಕದಲ್ಲಿ ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ.

ವಿದ್ಯುನ್ಮಾನ ಚಿತ್ರಗಳೊಂದಿಗೆ ಸರ್ಕಾರದ ಯೋಜನೆಗಳ ಪರಿಚಯಗದಗ: ನಗರದ ಜಿಲ್ಲಾಡಳಿತ ಭವನದಲ್ಲಿ ಹೊಸದಾಗಿ ಪ್ರಾರಂಭಿಸಿದ ಮಾಹಿತಿ ಕೋಶ ಕಚೇರಿ ಕೆಲಸ ಕಾರ್ಯಗಳ ಹಾಗೂ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವಲ್ಲಿ ಸಾರ್ವಜನಿಕರಿಗೆ ನೆರವಾಗಿದೆ.

ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಆಗಮಿಸಿದಲ್ಲಿ ಎದುರಿಗೆ ಸಹಾಯವಾಣಿ ಕೇಂದ್ರದ ಬಲ ಭಾಗದಲ್ಲಿ ಕಂಟ್ರೋಲ್ ರೂಮ್, ಎಡ ಭಾಗದಲ್ಲಿ ಮಾಹಿತಿ ಕೋಶ ಮೂಲಕ ಮಾಹಿತಿ ಕೋಶದ ಪಕ್ಕದಲ್ಲಿ ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಸ್ತ್ರೀಶಕ್ತಿ, ಗೃಹ ಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಯುವನಿಧಿ ಸೇರಿದಂತೆ ಸರ್ಕಾರದ ಯೋಜನೆಗಳು ಹಾಗೂ ಸರ್ಕಾರದ ಭಿತ್ತಿ ಪತ್ರಗಳು, ಜಿಲ್ಲೆಯ ಪ್ರವಾಸಿ ಸ್ಥಳಗಳ ಬಗ್ಗೆ ವಿದ್ಯುನ್ಮಾನದ ಚಿತ್ರಗಳೊಂದಿಗೆ ಜನರಿಗೆ ಪರಿಚಯಿಸಲಾಗುತ್ತದೆ.

ಜಿಲ್ಲೆಯ ಪ್ರವಾಸಿ ಸ್ಥಳಗಳಾದ ಲಕ್ಕುಂಡಿ, ಸಬರಮತಿ ಆಶ್ರಮ, ಬಸವೇಶ್ವರ ಪುತ್ಥಳಿ, ಬಿಂಕದಕಟ್ಟಿ ಮೃಗಾಲಯ, ಭೀಷ್ಮಕೆರೆ, ಮಾಗಡಿ ಕೆರೆಯ ಸಂಪೂರ್ಣ ಚಿತ್ರಣವನ್ನು ಡ್ರೋಣ ಮೂಲಕ ಚಿತ್ರಿಸಲಾಗಿದೆ. ಜೊತೆಗೆ ಓದುಗ ಪ್ರಿಯರಿಗೆ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕೈಪಿಡಿಗಳನ್ನು ನಾವು ನೋಡಬಹುದು. ಹಾಗೆ ಜಿಲ್ಲಾಡಳಿತ ಭವನದಲ್ಲಿ ಇರುವ ಎಲ್ಲಾ ಕಚೇರಿಗಳ ಕೊಠಡಿಗಳ ಸಂಖ್ಯೆ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಹ ಮಾಹಿತಿ ಕೋಶದ ಹತ್ತಿರ ಕಲ್ಪಿಸಲಾಗಿದೆ. ಮಾಹಿತಿ ಕೋಶದ ಮುಂಭಾಗದಲ್ಲಿ ಜಿಲ್ಲಾಡಳಿತ ಭವನಕ್ಕೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇದ್ದು, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯು ಸಹ ಕಲ್ಪಿಸಲಾಗಿದೆ.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರ ಜನಪರ ಕಾರ್ಯಗಳ ಆಶಯದೊಂದಿಗೆ ಸಾಕಾರಗೊಂಡು ಮಾಹಿತಿ ಕೇಂದ್ರವು ಆ. ೧೫ರಂದು ಉದ್ಘಾಟನೆಗೊಂಡಿತು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರ ದಕ್ಷ ಆಡಳಿತದಿಂದಾಗಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಮಾಹಿತಿಗಳು, ಅವುಗಳನ್ನು ಪಡೆಯುವ ಅರ್ಹರು ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ನೂತನ ಮಾಹಿತಿ ಕೋಶದಲ್ಲಿ ಪ್ರದರ್ಶನವಾಗುತ್ತದೆ. ಇದನ್ನು ವೀಕ್ಷಿಸಿದ ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಯಿಂದ ಪಡೆಯಲು ಅನುಕೂಲವಾಗಿದೆ. ಮಾಹಿತಿ ಕೋಶದಲ್ಲಿ ಮೂರು ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವರು. ಕಚೇರಿಯ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತದೆ.