ಸಾರಾಂಶ
ಬಾಗಲಕೋಟೆ ಲೋಕಸಭೆ ಮತಕ್ಷೇತ್ರಾದ್ಯಂತ ಬಿಜೆಪಿ ಅಲೆಯು ಸುನಾಮಿಯಂತೆ ಹೆಚ್ಚಿದೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದ ಗೆಲುವು ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಲಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಾಗಲಕೋಟೆ ಲೋಕಸಭೆ ಮತಕ್ಷೇತ್ರಾದ್ಯಂತ ಬಿಜೆಪಿ ಅಲೆಯು ಸುನಾಮಿಯಂತೆ ಹೆಚ್ಚಿದೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದ ಗೆಲುವು ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಲಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.ಬನಹಟ್ಟಿಯಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಗದ್ದಿಗೌಡರ ವಿರುದ್ಧ ಎದುರಾಳಿ ಪ್ರತಿಸ್ಪರ್ಧಿಯೇ ಇಲ್ಲ. ಅದರಂತೆ ನಿರಾಯಾಸದ ಗೆಲುವು ಬಿಜೆಪಿಯದ್ದಾಗಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.
ಪ್ರತಿ ಮತಗಟ್ಟೆಗಳಲ್ಲಿಯೂ ಕಮಲ ಚಿಹ್ನೆಗೆ ಹೆಚ್ಚು ಮತಗಳು ಬೀಳಲಿದ್ದು, ತೇರದಾಳ ಕ್ಷೇತ್ರಾದ್ಯಂತ ಎಲ್ಲೆಡೆ ಕಾರ್ಯಕರ್ತರ ಜಾಗೃತಿ ಹಾಗು ಮತದಾರರ ಎಚ್ಚರಿಕೆ ನಡೆ ಗದ್ದಿಗೌಡರಿಗೆ ಆಶೀರ್ವಾದವಾಗಿದೆ. ಕಳೆದ ಬಾರಿ ೩೬ ಸಾವಿರ ಮತಗಳು ಹೆಚ್ಚಿಗೆ ಪಡೆದ ಬಿಜೆಪಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿ ೪೦ ಸಾವಿರ ಮತಗಳ ಅಂತರದ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂತರ ರಬಕವಿಯ ವಿದ್ಯಾನಗರದ ಮತಗಟ್ಟೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣದ ಗ್ಯಾರಂಟಿ ನೀಡಿರುವ ಬಿಜೆಪಿ ಪರ ಮತದಾರನ ಒಲವು ಇರುವುದು ಸ್ಪಷ್ಟವಾಗಿದೆ ಎಂದು ಶಾಸಕ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ತೇರದಾಳ ಕ್ಷೇತ್ರಾದ್ಯಂತ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ ಮತದಾನ ನಡೆದಿದ್ದು, ಬೆಳಗ್ಗೆಯಿಂದ ಭರ್ಜರಿ ಮತದಾನ ನಡೆಯಿತು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಂಜಯ ತೆಗ್ಗಿ, ಮಾರುತಿ ಗಾಡಿವಡ್ಡರ ಸೇರಿದಂತೆ ಪ್ರಮುಖರಿದ್ದರು.