ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ್ರ

| Published : Jun 22 2024, 12:46 AM IST

ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ್ರ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗವು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಜೀವನದ ಅಳವಡಿಸಿಕೊಂಡರೆ ರೋಗ ಮುಕ್ತ ರಾಷ್ಟ ನಿರ್ಮಾಣವಾಗುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಯೋಗವು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಜೀವನದ ಅಳವಡಿಸಿಕೊಂಡರೆ ರೋಗ ಮುಕ್ತ ರಾಷ್ಟ ನಿರ್ಮಾಣವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ್‌ ತರಬೇತಿ ಕೇಂದ್ರ’ದ ಆವರಣದಲ್ಲಿ ತರಬೇತಿ ಕೇಂದ್ರ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಬಸವ ಟ್ಯುಟೋರಿಯಲ್ಸ್’ ಇವುಗಳ ವತಿಯಿಂದ ಶುಕ್ರವಾರ ಜರುಗಿದ ‘10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ಯಲ್ಲಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಯೋಗವು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಅದರಲ್ಲಿ ಕಂಡು ಬರುವ ಆಸನಗಳು ಮತ್ತು ಕ್ರಿಯೆಗಳು ಹಲವಾರು ವ್ಯಾದಿಗಳನ್ನು ಗುಣಪಡಿಸುತ್ತವೆ. ಆದರೆ ಇದರ ಬಗ್ಗೆ ಹೆಚ್ಚಿನ ಜ್ಞಾನದ ಕೊರತೆಯಿಂದ ಸಾಕಷ್ಟು ಜನರು ಔಷಧಗಳ ಮೊರೆಹೋಗಿ ತಮ್ಮ ಆರೋಗ್ಯವನ್ನು ತಮ್ಮ ಕೈಯಿಂದಲೇ ಕೆಡಿಸಿಕೊಳ್ಳುವಂತಹ ಸಂದರ್ಭ ಗೋಚರವಾಗುತ್ತಿರುವದು ವಿಷಾದನೀಯ ಸಂಗತಿಯಾಗಿಯೆಂದರು.

ಯೋಗ ಸಾಧಕ ಡಾ.ಸುನೀಲಕುಮಾರ ವಂಟಿ ಯೋಗಾಸನ, ಸೂರ್ಯ ನಮಸ್ಕಾರದ ವಿವಿಧ ಪ್ರಾತ್ಯಕ್ಷಿಕೆಗಳನ್ನು ತೋರಿಸಿಕೊಟ್ಟರು. ಅಸ್ಲಾಂ ಶೇಖ್, ಮಲ್ಲಿಕಾರ್ಜುನ ಜಿಡಗೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕ ಕೈಲಾಸ ಪಾಟೀಲ, ಸೋಹೆಲ್ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.