ಶಿಥಿಲಗೊಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ತಮ್ಮ ಸ್ವಂತ ಖರ್ಚಿನಿಂದ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ತಮ್ಮ ಸ್ವ ಇಚ್ಚೆಯಿಂದ ಕಟ್ಟಡದ ನೆಲ ಅಂತಸ್ತು ಹಾಗೂ ಮೇಲಂತಸ್ತು ಸೇರಿ 5 ಕೊಠಡಿಯನ್ನು ನಿರ್ಮಿಸಿಕೊಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ರಾಂಪುರ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರಿನ ದಾನಿಯೊಬ್ಬರು ಗುದ್ದಲಿ ಪೂಜೆ ನೆರವೇರಿಸಿದರು.ಆರ್ಗ್ಯಾನಿಕ್ ಪೇಂಟ್‌ನ ಉದ್ಯಮಿ ಕೃಷ್ಣ ಪ್ರಸಾದ್ ಅವರು, ಶಾಲೆ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಶಿಥಿಲಗೊಂಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ತಮ್ಮ ಸ್ವಂತ ಖರ್ಚಿನಿಂದ ಸುಮಾರು 30 ಲಕ್ಷ ರು. ವೆಚ್ಚದಲ್ಲಿ ತಮ್ಮ ಸ್ವ ಇಚ್ಚೆಯಿಂದ ಕಟ್ಟಡದ ನೆಲ ಅಂತಸ್ತು ಹಾಗೂ ಮೇಲಂತಸ್ತು ಸೇರಿ 5 ಕೊಠಡಿಯನ್ನು ನಿರ್ಮಿಸಿಕೊಡುತ್ತಿದ್ದಾರೆ.
ಗ್ರಾಮಸ್ಥರು ಜೊತೆಗೂಡಿ ಕೃಷ್ಣಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಪೀಕಾರ್ಡ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಗುರು ಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಮುರುಳಿ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಂಠ, ಮಹದೇವು, ತಾಪಂ ಮಾಜಿ ಅಧ್ಯಕ್ಷ ಸಂದೇಶ್, ಡಾ. ನಾಗರಾಜು, ರಾಂಪುರ ಪ್ರೀತು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಪುರಸಭೆ ಪ್ರಭಾರ ಮುಖ್ಯಾಧಿಕಾರಿಯಾಗಿ ಸತೀಶ್ ನೇಮಕಶ್ರೀರಂಗಪಟ್ಟಣ:
ಪಟ್ಟಣ ಪುರಸಭೆ ಪ್ರಭಾರ ಮುಖ್ಯಾಧಿಕಾರಿಯಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ವ್ಯವಸ್ಥಾಪಕ ಬಿ.ಜಿ ಸತೀಶ ಅವರನ್ನು ಸರ್ಕಾರ ನೇಮಿಸಿದೆ.ಈ ಹಿಂದೆ ಪ್ರಭಾರ ಮುಖ್ಯಾಧಿಕಾರಿಯಾಗಿದ್ದ ರಾಜಣ್ಣ ಅವರ ಸೇವೆಯನ್ನ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಹಿಂಪಡೆದು, ತೆರವಾದ ಹುದ್ದೆಗೆ ಬಿ.ಜಿ ಸತೀಶ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ. ಮುಂದಿನ ಅದೇಶದವರೆಗೆ ತಾತ್ಕಾಲಿಕವಾಗಿ ಪುರಸಭೆ ಮುಖ್ಯಾಧಿಕಾರಿಯ ಹುದ್ದೆಯ ಪ್ರಭಾರದಲ್ಲಿರಿಸಿ, ಕರ್ತವ್ಯ ನಿರ್ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಇವರ ಅದೇಶದ ಮೇರೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶರು ಆದೇಶಿಸಿದ್ದಾರೆ.
ಇಂದು ವಿಶ್ವ ಸುಗಮ ಸಂಗೀತ ದಿನಾಚರಣೆಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯು ನಗರದ ದ್ವಾರಕನಗರದ 2ನೇ ಕ್ರಾಸ್‌ನಲ್ಲಿ ಸುಗಮ ಸಂಗೀತ ಪಿತಾಮಹ ಪಿ.ಕಾಳಿಂಗರಾವ್ ಅವರ ಜನ್ಮದಿನ ಹಾಗೂ ಗಣೇಶೋತ್ಸವ ಅಂಗವಾಗಿ ಸೆ.4ರಂದು ವಿಶ್ವ ಸುಗಮ ಸಂಗೀತ ದಿನಾಚರಣೆ ಹಾಗೂ ಗೀತಗಾಯನ ಕಾರ‍್ಯಕ್ರಮ ಆಯೋಜಿಸಿದೆ.ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್ಸ್ ಮತ್ತು ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಸಂಘಟಿಸಿರುವ ಈ ಕರ‍್ಯಕ್ರಮವನ್ನು ಅಂದು ಸಂಜೆ 7 ಗಂಟೆಗೆ ಅಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ಸ್ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಉದ್ಘಾಟಿಸುವರು. ಎರಡನೇ ಉಪ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು.
ಪ್ರತಿಭಾಂಜಲಿ ಅಕಾಡೆಮಿ ಅಧ್ಯಕ್ಷ ಡೇವಿಡ್, ಶುಗರ್ ಸಿಟಿ ಅಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ನಾಗರಾಜು, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಹಿರಿಯ ಪತ್ರಕರ್ತ ನವೀನ್ ಚಿಕ್ಕಮಂಡ್ಯ, ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು, ಉಪಾಧ್ಯಕ್ಷೆ ಪವಿತ್ರ ನಾಗರಾಜ್ ಭಾಗವಹಿಸುವರು. ಗಾಯಕರಾದ ಪ್ರತಿಭಾಂಜಲಿ ಡೇವಿಡ್, ಡಾ.ವರ್ಷಾ ಹೂಗಾರ್, ದಿಶಾ ಜೈನ್, ಕನ್ಯಾಶ್ರೀ, ಐಶ್ವರ್ಯ, ವಂದನ, ಹಂಸ, ವಿಶ್ವಾಸ್, ಕರಣ್ ಅವರು ಸಂಗೀತ ಕಾರ‍್ಯಕ್ರಮ ಪ್ರಸ್ತುತಪಸುವರು.