ದರೋಡೆಕೋರರ ಗುಂಪಿನಿಂದ ಕಳ್ಳತನಕ್ಕೆ ವಿಫಲ ಯತ್ನ

| Published : Sep 30 2024, 01:20 AM IST

ಸಾರಾಂಶ

ನಗರ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಪ್ರಭಾತನಗರದಲ್ಲಿ ದರೋಡೆಕೋರರ ಗುಂಪು ಸುತ್ತಾಡಿ ದರೋಡೆಗೆ ಯತ್ನಿಸಿ ವಿಫಲವಾದ ಘಟನೆ ಭಾನುವಾರ ನಸುಕಿನ ಜಾವ 3 ಗಂಟೆಯ ಹೊತ್ತಿಗೆ ನಡೆದಿದೆ.

ಜಮಖಂಡಿ: ನಗರ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಪ್ರಭಾತನಗರದಲ್ಲಿ ದರೋಡೆಕೋರರ ಗುಂಪು ಸುತ್ತಾಡಿ ದರೋಡೆಗೆ ಯತ್ನಿಸಿ ವಿಫಲವಾದ ಘಟನೆ ಭಾನುವಾರ ನಸುಕಿನ ಜಾವ 3 ಗಂಟೆಯ ಹೊತ್ತಿಗೆ ನಡೆದಿದೆ. ಪ್ರಭಾತನಗರದ ನಿವಾಸಿ ನೀರಾವರಿ ಇಲಾಖೆಯ ಎಂಜಿನಿಯರ್‌ ಮಂಜುನಾಥ ತೆಗ್ಗಿ ಅವರ ಕಚೇರಿಯ ಬೀಗ ಮುರಿದ ದರೋಡೆ ಖೋರರು ಹುಡುಕಾಟ ನಡೆಸಿದ್ದಾರೆ. ಬೀಗ ಮುರಿಯುವ ಸಪ್ಪಳಕ್ಕೆ ಪಕ್ಕದ ಮನೆಯವರು ಎದ್ದು ಕೂಗಾಡಿದ್ದಾರೆ. ಈ ವೇಳೆ ದರೋಡೆಕೋರರ ಗುಂಪು ಅಲ್ಲಿ ಜಾಗ ಖಾಲಿ ಮಾಡಿದ್ದಾರೆ.

7 ರಿಂದ 8 ಜನರ ಗುಂಪು ಮಾರಕಾಸ್ತ್ರಗಳ ಸಮೇತ ಸುತ್ತಾಡದ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ನಗರಠಾಣೆ ಪಿಎಸ್ಐ ಅನಿಲ ಕುಂಬಾರ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಗರದಲ್ಲಿ ಅಪರಿಚಿತ ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿದರೇ ಕೂಡಲೇ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಡಿವೈಎಸ್‌ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.