ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಪಿತ ವಿವಾಹ; ಸಸಿ ನೆಟ್ಟು ಸಂಭ್ರಮ

| Published : Jun 23 2024, 02:00 AM IST

ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಪಿತ ವಿವಾಹ; ಸಸಿ ನೆಟ್ಟು ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶನಿವಾರ ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಪಿತ ವಿವಾಹ ಮಾಡಿಸಿದ ಗ್ರಾಮಸ್ಥರು ಸಸಿ ಆಡುವ ಹಬ್ಬ ಆಚರಿಸಿ ಸಂಭ್ರಮಿಸಿದರು.

ಮಲ್ಲಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಆಚರಣೆ

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶನಿವಾರ ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಪಿತ ವಿವಾಹ ಮಾಡಿಸಿದ ಗ್ರಾಮಸ್ಥರು ಸಸಿ ಆಡುವ ಹಬ್ಬ ಆಚರಿಸಿ ಸಂಭ್ರಮಿಸಿದರು.

ದೊಡ್ಡವರಿಗೆ ವಿವಾಹ ಮಾಡುವಂತೆ ಮದುವೆ ಚಪ್ಪರ ಹಾಕಿಸಿ ಶಾಸ್ತ್ರೋಕ್ತವಾಗಿ ನಿಯಮಗಳನ್ನು ಪಾಲಿಸಿ ವಧು-ವರರಿಗೆ ಸ್ನಾನ ಮುಂತಾದ ಕಾರ್ಯಕ್ರಮಗಳನ್ನು ಮಾಡಿದರು. ಕೈಗೆ ಕಂಕಣ ಕಟ್ಟಿ, ಕಾಲುಗಳಿಗೆ ಕಾಲುಂಗುರ ತೊಡಿಸಿ ತಾಳಿ ಕಟ್ಟಿಸಿ ವಿವಾಹದ ಕಾರ್ಯ ನೆರವೇರಿಸಿದರು.

ವಧು-ವರರು ಸಸಿಗಳನ್ನು ನೆಟ್ಟರೆ ಒಳ್ಳೆಯ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳೇ ಪುರೋಹಿತರಾಗಿ, ಹಲಗಿ, ಶಹನಾಯಿ ವಾದ್ಯ ನುಡಿಸಿದರು. ಮಕ್ಕಳೇ ಮಂತ್ರ ಪಠಿಸಿ ವಿವಾಹ ಕಾರ್ಯ ಮಾಡಿದ್ದು ವಿಶೇಷವಾಗಿತ್ತು.

ಗ್ರಾಮದ ಮುಖಂಡರಾದ ಮಹಾಂಕಾಳೆಪ್ಪ, ಮುದಿಯಪ್ಪ ನಾಯಕ, ಅಂಬಣ್ಣ ಗೋನ್ವಾರ, ಹನುಮಂತಪ್ಪ, ದುರುಗಪ್ಪ ಡಿಡಿ, ನಾಗಮ್ಮ, ಭಾಗ್ಯಮ್ಮ, ದುಗ್ಗಪ್ಪ, ಹುಸೇನಮ್ಮ, ಲಕ್ಷ್ಮಿ, ದುರುಗಮ್ಮ, ದೇವಮ್ಮ ಇದ್ದರು.

ಎತ್ತುಗಳಿಂದ ಕರಿ ಹರಿದು ಸಂಭ್ರಮ: ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ದಿನವಾದ ಶುಕ್ರವಾರ ಸಂಜೆ ಕರಿ ಹರಿಯುವ ಮೂಲಕ ಸಂಭ್ರಮಿಸಿದರು. ಅದರಲ್ಲಿ ಕುರುಬರ ಶೇಖರಪ್ಪ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದವು.-----

22ಕೆಪಿಎಸ್ಎನ್ಡಿ2ಎಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶನಿವಾರ ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಪಿತ ವಿವಾಹ ಮಾಡಿ ಗ್ರಾಮಸ್ಥರು ಸಸಿ ನೆಡುವ ಹಬ್ಬ ಆಚರಿಸಿ ಸಂಭ್ರಮಿಸಿದರು.